Asianet Suvarna News Asianet Suvarna News
breaking news image

ಮಳೆಗೆ ಮನೆ ಗೋಡೆ ಕುಸಿತ..ರಾತ್ರಿ ಊಟ ಮಾಡಿ ಮಲಗಿದ್ದ ನಾಲ್ವರ ದುರ್ಮರಣ

ಮನೆಯ ಗೋಡೆ ಕುಸಿದು ಬಿದ್ದು ನಾಲ್ವರು‌ ದುರ್ಮರಣ
ಅಬೂಬಕ್ಕರ್‌ಗೆ ಸಂಬಂಧಿಸಿದ ಮನೆಯ ಗೋಡೆ ಕುಸಿತ
ಸದ್ಯ ಮೂವರ ಮೃತದೇಹ ಹೊರತೆಗೆದ ಸ್ಥಳೀಯರು
 

ಮನೆಯ ಗೋಡೆ ಕುಸಿದು ಬಿದ್ದು ನಾಲ್ವರು‌ ದುರ್ಮರಣಕ್ಕೀಡಾದ(Four people died) ಘಟನೆ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಉಳ್ಳಾಲ ತಾಲೂಕಿನ ಕುತ್ತಾರು ಮದನಿ ನಗರ ಎಂಬಲ್ಲಿ ನಡೆದಿದೆ. ಮನೆಯೊಳಗಿದ್ದ(House) ಯಾಸಿರ್(45), ಪತ್ನಿ ಮರಿಯಮ್ಮ(40) ಮಕ್ಕಳಾದ ರಿಯಾನ ಮತ್ತು ರಿಫಾನ ಸಾವಿಗೀಡಾಗಿದ್ದಾರೆ. ಅಬೂಬಕ್ಕರ್ ಎಂಬುವರಿಗೆ ಸಂಬಂಧಿಸಿದ ಮನೆಯ ಗೋಡೆ ಕುಸಿತವಾಗಿದೆ. ಅದು ಯಾಸಿರ್ ಅವರ ಮನೆಯ ಗೋಡೆಗೆ ಬಿದ್ದು ಭಾರೀ ಅವಘಡ ಸಂಭವಿಸಿದೆ. ಸದ್ಯ ಮೂವರ ಮೃತದೇಹವನ್ನು ಸ್ಥಳೀಯರು ಹೊರತೆಗೆದಿದ್ದಾರೆ. ಮತ್ತೊಬ್ಬ ಬಾಲಕಿ ಮೃತದೇಹಕ್ಕಾಗಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ರಾತ್ರಿ ಸುರಿದ ಭಾರೀ ಮಳೆಗೆ ಈ ದುರಂತ ಸಂಭವಿಸಿದೆ. ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ವೀಕ್ಷಿಸಿ:  ಕುಡಿಯಲು ನೀರಿಲ್ಲದೇ ರೋಗಿಗಳ ಪರದಾಟ..ಯಾದಗಿರಿ ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳ ಗೋಳು ಕೇಳೋರು ಯಾರು?

Video Top Stories