Asianet Suvarna News Asianet Suvarna News

ನಿಂತಲ್ಲೇ ಪಾತಕಲೋಕವನ್ನ ಸೃಷ್ಟಿಸಿಬಿಡುತ್ತೆ ಈ ಟ್ಯಾಬ್ಲೆಟ್: ಇದು ಗಾಂಜಾ-ಚರಸ್‌ಗಿಂತಲೂ ಡೆಂಜರಸ್..!

ಕವರ್‌ ಸ್ಟೋರಿ ತಂಡದಿಂದ ರಹಸ್ಯ ಕಾರ್ಯಾಚರಣೆ
ಸಲೀಸಾಗಿ ಪಾತಕಿಗಳ ಕೈಗೆ ಸಿಗ್ತಿವೆ ಡೆಂಜರಸ್‌ ಟ್ಯಾಬ್ಲೆಟ್
ಬೆಂಗಳೂರು ಸೇರಿ ಹಲವೆಡೆ ಕಡ್ಲೆಪುರಿಯಂತೆ ಮಾರಾಟ
 

ಇದು ಕ್ರೈಂ ಲೋಕದಲ್ಲಿ ನಡೆಯುತ್ತಿರುವ ಅನಾಹುತಕಾರಿ ಸಂಗತಿ. ಮೆಡಿಕಲ್‌ ಮಾಫಿಯಾ (Medical mafia)ಹಾಗೂ ಅಪರಾಧ ಲೋಕದ ನಡುವೆ ಬೆಸೆದಿರುವ ಅಕ್ರಮ ನಂಟಿನ ಕ್ರೈಂ ಕಥೆ. ಆ ಒಂದು ಟ್ಯಾಬ್ಲೆಟ್(Tablet) ಸಾಮಾನ್ಯನನ್ನು ನಟೋರಿಯಸ್‌‌ ಹಂತಕನನ್ನಾಗಿ ಮಾಡಿ ಬಿಡುತ್ತೆ. ಕ್ರಿಮಿನಲ್‌ ಒಬ್ಬ ಈ  ಟ್ಯಾಬ್ಲೇಟ್ಗಳನ್ನ ಸೇವಿಸಿ ಫೀಲ್ಡಿಗಿಳಿದ್ರೆ ಅಲ್ಲಿ ಪಾತಕಲೋಕವೇ ಸೃಷ್ಟಿಯಾಗೋದು ಪಕ್ಕಾ. ಯಾರೂ ಊಹಿಸಲು ಸಾಧ್ಯವಿಲ್ಲದ ಭಯಾನಕ ಸಂಗತಿಯೊಂದನ್ನ ಬಟಾ ಬಯಲು ಮಾಡಿದೆ ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಕವರ್‌ ಸ್ಟೋರಿ ತಂಡ. ಇದೊಂದು ಮಾತ್ರೆ ಎಂಥವರನ್ನು ಕ್ರಿಮಿನಲ್‌ಗಳನ್ನಾಗಿ ಮಾಡ್ತಿದೆ. ಈ ಮಾತ್ರೆ ಸೇವಿಸಿದ್ರೆ ಸಾಕು ಒಬ್ಬ ಅಮಾಯಕನೂ ಸಲೀಸಾಗಿ ಹಂತಕನಾಗಿ ಬಿಡ್ತಾನೆ. ಅದ್ರಲ್ಲೂ ರಾತ್ರಿ ಕಳ್ಳತನ-ಕೊಲೆ-ಸುಲಿಗೆಗಳನ್ನ ಮಾಡೋದಕ್ಕೆ ಕ್ರಿಮಿನಲ್ಸ್‌ ಗಳು(Criminals) ಈ ಟ್ಯಾಬ್ಲೆಟ್‌ ಗಳನ್ನ ಬಳಕೆ ಮಾಡ್ತಿದ್ದಾರೆ. ಕ್ರೈಂ ಮಾಡೋ ಉದ್ದೇಶದಿಂದ ಕ್ರಿಮಿನಲ್‌ ಒಬ್ಬ ಈ ಮಾತ್ರೆಯನ್ನ ಸೇವಿಸಿ ಫೀಲ್ಡಿಗಿಳಿದ್ರೆ ಮುಗಿದೆ ಹೋಯ್ತು ಅಲ್ಲೊಂದು ಪಾತಕಲೋಕವೇ ಸೃಷ್ಟಿಯಾಗಿ ಬಿಡುತ್ತೆ. ಈ ವಿಚಾರ ತಿಳಿದ ನಮ್ಮ ಕವರ್‌ ಸ್ಟೋರಿ ಈ ಕ್ರೈಂ ಲೋಕವನ್ನೆ ದಂಗು ಬಡಿಸೋ ಸುದ್ದಿಯ ಬೆನ್ನಿಗೆ ಬಿತ್ತು. ಆಗ ನಮ್ಮ ಕವರ್‌ ಸ್ಟೋರಿ ತಂಡಕ್ಕೆ ಸಿಕ್ಕ ದೃಶ್ಯಾವಳಿ ಎಂಥವರನ್ನು ಬೆಚ್ಚಿಬೀಳಿಸುವಂತಿತ್ತು. ವಿಜಯಪುರ ನಗರದ ಗೋಳಗುಮ್ಮಟ ಏರಿಯಾದಲ್ಲಿ ರಾತ್ರಿ ದರೋಡೆಗೆ ಬಂದಿದ್ದ ಕ್ರಿಮಿನಲ್‌ ಕಿಸೆಯಲ್ಲಿ ಇದೆ ಮಾತ್ರೆಗಳು ಸಿಕ್ಕಿದ್ವು. ಇನ್ನೊಂದು ಕಡೆ ನಡೆದ ರಾಬರಿ ವೇಳೆ ಸಿಕ್ಕಿಬಿದ್ದ ಖತರ್ನಾಕ್‌ ಆಸಾಮಿಯ ಬಳಿಯು ಇದೆ ಟ್ಯಾಬ್ಲೆಟ್‌ ಸಿಕ್ಕಿದ್ವು.

ಇದನ್ನೂ ವೀಕ್ಷಿಸಿ:  ಉಡುಪಿ ಹಿಂದೂ ವಿದ್ಯಾರ್ಥಿನಿಯರ ವಿಡಿಯೋ ಕೇಸ್: ಆರೋಪಿಗಳ ವಿರುದ್ಧ ದುರ್ಬಲ ಸೆಕ್ಷನ್ ದಾಖಲು..?

Video Top Stories