ಹಣಕ್ಕಾಗಿ ಕಿಡ್ನಾಪ್ ಮಾಡಿದ: ಹೆಣ್ಣಿನ ಮೋಹದಿಂದ ತಗ್ಲಾಕೊಂಡ

ಕೋರಮಂಗಲ ಕಿಡ್ನಾಪ್ ಮತ್ತು ಚೇಸಿಂಗ್‌ ಪ್ರಕರಣಕ್ಕೆ ಟ್ವಿಸ್ಟ್‌ ಸಿಕ್ಕಿದ್ದು, ಬಂಡೇಪಾಳ್ಯ ಪೊಲೀಸರ ತನಿಖೆಯಿಂದ ಮತ್ತೊಂದು ಸತ್ಯ ಹೊರಬಿದ್ದಿದೆ.
 

Share this Video
  • FB
  • Linkdin
  • Whatsapp

ಕೋರಮಂಗಲ ಕಿಡ್ನಾಪ್ ಮತ್ತು ಚೇಸಿಂಗ್‌ ಪ್ರಕರಣ ಇದೀಗ ರೋಚಕ ತಿರುವು ಪಡೆದುಕೊಂಡಿದ್ದು, ಕಿಡ್ನ್ಯಾಪ್ ಮಾಡಿದ್ದು ಹಣಕ್ಕಾಗಿ ಆದರೆ ತಗ್ಲಾಕೊಂಡಿದ್ದು ಹೆಣ್ಣಿನ ಮೋಹಕ್ಕಾಗಿ ಎಂಬ ಸತ್ಯ ಬಯಲಾಗಿದೆ. ಗೋಪಿಯಿಂದ 45 ಸಾವಿರಕ್ಕೆ ಬೈಕ್‌ ಖರೀದಿಸಿ 5 ಸಾವಿರ ಹಣ ನೀಡಿದ್ದ ತೌಹಿದ್‌.ಬಾಕಿ ಹಣ ಕೊಡದಿದ್ದಕ್ಕೆ ಎರಡು ದಿನಗಳ ಹಿಂದೆ ತೌಹಿದ್‌'ನನ್ನು ಕಿಡ್ನಾಪ್ ಮಾಡಿ, ಹೆಣ್ಣಿನ ಮೋಹಕ್ಕೆ ಬಿದ್ದು ಪೊಲೀಸರ ಅತಿಥಿಯಾಗಿದ್ದಾನೆ ಗೋಪಿ. ಹಣ ಪಡೆಯುವ ವೇಳೆ ತೌಹಿದ್‌ ಸಂಬಂಧಿ ಯುವತಿ ಮೇಲೆ ಗೋಪಿ ಕಣ್ಣಾಕಿದ್ದು, ಯುವತಿಯ ಮೊಬೈಲ್‌ ಕಿತ್ತುಕೊಂಡು ಖಾಸಗಿ ಫೋಟೋ ನೋಡಿ ಬ್ಲಾಕ್‌ ಮೇಲ್‌ ಮಾಡಿದ್ದಾನೆ. ಯುವತಿಯನ್ನು ನಮ್ಮ ಜೊತೆ ಕಳುಹಿಸಿದರೆ ತೌಹಿದ್‌'ನನ್ನು ಬಿಡುತ್ತೇವೆ ಎಂದು ಬೆದರಿಕೆ ಹಾಕಿದ್ದ. ಹೆಣ್ಣಿನ ಮೋಹಕ್ಕೆ ಬಿದ್ದು ಇದೀಗ ಗೋಪಿ ಪೋಲಿಸರ ಅತಿಥಿಯಾಗಿದ್ದಾನೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video