ಮಂಗಳೂರಿನಲ್ಲಿದೆ ದೊಡ್ಡ ಡ್ರಗ್ಸ್ ಜಾಲ: ವೈದ್ಯರ ನಶಾಲೋಕ ಕಂಡು ಬೆಚ್ಚಿ ಬಿದ್ದ ಖಾಕಿ
ಮಂಗಳೂರಿನಲ್ಲಿ ದೊಡ್ಡ ಡ್ರಗ್ಸ್ ಜಾಲ ಪತ್ತೆಯಾಗಿದ್ದು, ವೈದ್ಯರ ನಶಾ ಲೋಕ ಕಂಡು ಪೊಲೀಸರೇ ದಂಗಾಗಿದ್ದಾರೆ.
ಮಂಗಳೂರಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಿಗೆ ಗಾಂಜಾ ಲಿಂಕ್ ಇದ್ದು, ಹಲವು ವೈದ್ಯರು ಹಾಗೂ ವಿದ್ಯಾರ್ಥಿಗಳಿಗೆ ಡ್ರಗ್ ಪೆಡ್ಲರ್ ನೀಲ್ ಕಿಶೋರಿ ಲಾಲ್ ನಂಟು ಇರುವ ಸತ್ಯ ಬಯಲಾಗಿದೆ. 14 ವರ್ಷಗಳಿಂದ BDS ಶಿಕ್ಷಣ ಸಂಸ್ಥೆಯಲ್ಲಿ ನೀಲ್, ನಶಾ ಸಾಮ್ರಾಜ್ಯವನ್ನು ಸೃಷ್ಟಿಸಿದ್ದ. ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಲ್ಲಿದ್ದುಕೊಂಡೇ ಡ್ರಗ್ಸ್ ದಂಧೆಯ ಬೇರು ಹಬ್ಬಿಸಿದ ನೀಲ್, ಮಂಗಳೂರಿನಲ್ಲಿ ತನ್ನದೆ ನಶಾ ಲೋಕ ಸೃಷ್ಟಿಸಿದ್ದ. ಹಣ್ಣಿನ ವ್ಯಾಪಾದ ಹೆಸರಿನಲ್ಲಿ ಮಂಗಳೂರಿನಾದ್ಯಂತ ಡ್ರಗ್ಸ್ ದಂಧೆ ನಡೆಯುತ್ತಿತ್ತು ಎಂಬ ರೋಚಕ ಸತ್ಯ ಬಯಲಾಗಿದೆ. ಹಣ್ಣಿನ ವ್ಯಾಪಾರದ ಜತೆಯಲ್ಲಿ ಮಹಮ್ಮದ್ ಅಫ್ರರ್ ಗಾಂಜಾ ದಂಧೆ ಮಾಡುತ್ತಿದ್ದ. ಕೇರಳದಿಂದ ಹಣ್ಣು ತರಿಸಿಕೊಳ್ಳುವ ನೆಪದಲ್ಲಿ ಗಾಂಜಾ ದಂಧೆ ನಡೆಸುತ್ತಿದ್ದ ಎಂದು ತಿಳಿದು ಬಂದಿದೆ.