ಅಯ್ಯಯ್ಯೋ..! JCB ಮೂಲಕ ಸೋಂಕಿತೆಯ ಶವ ಸಂಸ್ಕಾರ..!

ಕೊರೋನಾದಿಂದ ಮೃತಪಟ್ಟ ಸೋಂಕಿತೆಯನ್ನು ಜೆಸಿಬಿಯಲ್ಲಿ ತಂದು ಅಂತ್ಯ ಸಂಸ್ಕಾರ ಮಾಡಿದ ಘಟನೆ ನಡೆದಿದೆ. ಅಧಿಕಾರಿಗಳ ಸಮ್ಮುಖದಲ್ಲೇ ಈ ಅವಘಡ ನಡೆದಿದೆ. ಕೊರೋನಾದಿಂದ ಮೃತಪಟ್ಟ ಅಜ್ಜಿ ಅಂತ್ಯಕ್ರಿಯೆಯಲ್ಲಿ ನಿಯಮ ಉಲ್ಲಂಘನೆ ಮಾಡಲಾಗಿದೆ.

First Published Jul 1, 2020, 12:03 PM IST | Last Updated Jul 1, 2020, 12:03 PM IST

ದಾವಣಗೆರೆ(ಜು.01): ಕೊರೋನಾ ಸೋಂಕಿನಿಂದ ಮೃತಪಟ್ಟ ವ್ಯಕ್ತಿಗಳ ಅಂತ್ಯಸಂಸ್ಕಾರ ಮಾಡಲು ಒಂದು ವಿಧಿವಿಧಾನಗಳಿವೆ. ಬಳ್ಳಾರಿಯಲ್ಲಿ ಒಂದೇ ಗುಂಡಿಯಲ್ಲಿ 8 ಶವಗಳನ್ನು ತ್ಯಾಜ್ಯದ ರೀತಿಯಲ್ಲಿ ವಿಲೇವಾರಿ ಮಾಡಿ ಜನರ ಆಕ್ರೋಶಕ್ಕೆ ಗುರಿಯಾಗಿದ್ದರು. ಈ ಘಟನೆ ಮಾಸುವ ಮುನ್ನವೇ ಮತ್ತೊಂದು ಅಮಾನವೀಯ ಘಟನೆ ದಾವಣಗೆರೆಯಲ್ಲಿ ಬೆಳಕಿಗೆ ಬಂದಿದೆ.

ಕೊರೋನಾದಿಂದ ಮೃತಪಟ್ಟ ಸೋಂಕಿತೆಯನ್ನು ಜೆಸಿಬಿಯಲ್ಲಿ ತಂದು ಅಂತ್ಯ ಸಂಸ್ಕಾರ ಮಾಡಿದ ಘಟನೆ ನಡೆದಿದೆ. ಅಧಿಕಾರಿಗಳ ಸಮ್ಮುಖದಲ್ಲೇ ಈ ಅವಘಡ ನಡೆದಿದೆ. ಕೊರೋನಾದಿಂದ ಮೃತಪಟ್ಟ ಅಜ್ಜಿ ಅಂತ್ಯಕ್ರಿಯೆಯಲ್ಲಿ ನಿಯಮ ಉಲ್ಲಂಘನೆ ಮಾಡಲಾಗಿದೆ.

ಕೋಟೆ ನಾಡಲ್ಲಿ ಕೋವಿಡ್‌ ಹರಡುವಿಕೆಗೆ ಮತ್ತಷ್ಟು ವೇಗ!

ಚನ್ನಗಿರಿಯಲ್ಲಿ ಕೊರೋನಾದಿಂದ ಮೃತಪಟ್ಟ ಮಹಿಳೆ ಶವಸಂಸ್ಕಾರ ಇದೀಗ ವ್ಯಾಪಕ ಟೀಕೆಗೆ ಗುರಿಯಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ.