ಬೆಳಗಾವಿ: ಠಾಣೆಯಲ್ಲಿ ಆತ್ಮಹತ್ಯೆಯ ಹೈಡ್ರಾಮಾ ಮಾಡಿದ ಪೊಲೀಸ್ ಪೇದೆ

ಠಾಣೆಯಲ್ಲಿ ಬಿದ್ದು ಚೀರಾಟ ಮಾಡಿದಕ್ಕೆ ಠಾಣೆಯ ಇತರೆ ಸಿಬ್ಬಂದಿ ಹೆದರಿದ್ದಾರೆ. ತಕ್ಷಣವೇ ಠಾಣೆಯ ಸಿಬ್ಬಂದಿ ಮುದಕಪ್ಪನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಸ್ಪತ್ರೆಯಲ್ಲಿ ತಪಾಸಣೆ ಬಳಿಕ ಯಾವುದೇ ರೀತಿಯ ವಿಷ ಪದಾರ್ಥ ಸೇವನೆ ಮಾಡಿಲ್ಲ ಎಂಬುದು ಸಾಬೀತಾಗಿದೆ. 
 

Girish Goudar  | Published: Jan 2, 2025, 10:26 AM IST

ಬೆಳಗಾವಿ(ಜ.02): ನಗರದ ಉದ್ಯಮಭಾಗ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಪೇದೆಯೊಬ್ಬ ಆತ್ಮಹತ್ಯೆಯ ಹೈಡ್ರಾಮಾ ಮಾಡಿದ್ದಾನೆ. ಮುದಕಪ್ಪ ಉದಗಟ್ಟಿ ಆತ್ಮಹತ್ಯೆಗೆ ಯತ್ನಿಸಿದಂತೆ ಡ್ರಾಮಾ ಮಾಡಿದ್ದು, ತಕ್ಷಣವೇ ಮುದಕಪ್ಪನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮುದಕಪ್ಪ ಉದಗಟ್ಟಿ ಕಳೆದ ಎರಡು ತಿಂಗಳಿನಿಂದ ಗಸ್ತು (ಶಕ್ತಿ) ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾರೆ. ಎರಡು ದಿನ ರಜೆ ಹೋಗಿ ಇಂದು ಕರ್ತವ್ಯಕ್ಕೆ ಹಾಜರಾಗಿದ್ದರು. ಇಂದು ಬಂದೋಬಸ್ತ್ ಡ್ಯೂಟಿ ಹಾಕಿದಕ್ಕೆ ಪೇದೆ ಮುದಕಪ್ಪ ಆತ್ಮಹತ್ಯೆಯ ಹೈಡ್ರಾಮಾ ಮಾಡಿದ್ದಾನೆ. 

ಕರೆಂಟ್ ವೈರ್ ಮೇಲೆ ಕುಡುಕನ ಹೊಸ ವರ್ಷ: ಎಣ್ಣೆ ಏಟಲ್ಲಿ ನಡು ರಸ್ತೆಯಲ್ಲೇ ಹೊಡಿ ಬಡಿ!

ಠಾಣೆಯಲ್ಲಿ ಬಿದ್ದು ಚೀರಾಟ ಮಾಡಿದಕ್ಕೆ ಠಾಣೆಯ ಇತರೆ ಸಿಬ್ಬಂದಿ ಹೆದರಿದ್ದಾರೆ. ತಕ್ಷಣವೇ ಠಾಣೆಯ ಸಿಬ್ಬಂದಿ ಮುದಕಪ್ಪನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಸ್ಪತ್ರೆಯಲ್ಲಿ ತಪಾಸಣೆ ಬಳಿಕ ಯಾವುದೇ ರೀತಿಯ ವಿಷ ಪದಾರ್ಥ ಸೇವನೆ ಮಾಡಿಲ್ಲ ಎಂಬುದು ಸಾಬೀತಾಗಿದೆ. ತಕ್ಷಣವೇ ಡಿಸ್ಚಾರ್ಜ್ ಮಾಡಿ ಪೇದೆಯನ್ನು ಮನೆಗೆ ಕಳುಹಿಸಲಾಗಿದೆ. 

Read More...