ಕರೆಂಟ್ ವೈರ್ ಮೇಲೆ ಕುಡುಕನ ಹೊಸ ವರ್ಷ: ಎಣ್ಣೆ ಏಟಲ್ಲಿ ನಡು ರಸ್ತೆಯಲ್ಲೇ ಹೊಡಿ ಬಡಿ!
ಒಬ್ಬಳು ಹುಡುಗಿ ಇದ್ದಾಳೆ. ಆಕೆ ಮಾಡೋದು ಮ್ಯಾಜಿಕ್ ಅಲ್ಲ.. ರಿಯಲ್. ಆದ್ರೆ ನೋಡೋರ ಕಣ್ಣಿಗೆ ಮಾತ್ರ ಅದು ಮ್ಯಾಜಿಕ್ ತರಾನೆ ಕಾಣ್ಸುತ್ತೆ. ಯಾಕೆಂದ್ರೆ ಆ ಹುಡುಗಿಯ ಸ್ಪೀಡ್ ಅಷ್ಟಿದೆ. ಕಣ್ಣು ಮುಚ್ಚಿ ಬಿಡೋದ್ರೊಳಗೆ ಆಕೆ ಬಟ್ಟೆ ಚೇಂಜ್ ಮಾಡ್ತಾಳೆ.
ಬೆಂಗಳೂರು(ಜ.02): ನ್ಯೂ ಇಯರ್ ಏನೋ ಬಂತು. ಆದ್ರೆ, ಹೊಸ ವರ್ಷವನ್ನ ವೆಲಕಮ್ ಮಾಡೋ ಭರಾಟೆಯಲ್ಲಿ ಕೆಲವರು ಮಾಡಿಕೊಂಡಿರೋ ಎಡವಟ್ಟುಗಳು ಒಂದೆರಡಲ್ಲ. ಎಣ್ಣೆ ಏಟಲ್ಲಿ, ನೀನಾ, ನಾನಾ ಅಂತ ರಸ್ತೆ ರಸ್ತೆಗಳಲ್ಲಿ ಹೊಡೆದಾಡಿಕೊಂಡಿದ್ದಾರೆ. ಇನ್ನೂ ಕೆಲವರು ಎದ್ದು ನಿಲ್ಲೋದಕ್ಕೂ ಆಗದೇ ರಸ್ತೆ ಮಧ್ಯದಲ್ಲಿಯೇ ತೂರಾಡಿದ್ದಾರೆ. ಹೊಸ ವರ್ಷದಲ್ಲಿ ಕೆಲವರು ಮಾಡಿದ ಹುಚ್ಚಾಟಗಳು ಹೇಗಿದ್ವು ಅನ್ನೋದ್ರ ಜೊತೆಗೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರೋ ಇನ್ನೊಂದಿಷ್ಟು ವಿಡಿಯೋಗಳನ್ನ ತೋರಿಸ್ತೀವಿ. ಇದೇ ಈ ಹೊತ್ತಿನ ವಿಶೇಷ ಸೂಪರ್ ಡೆಡ್ಲಿ ಡೆಂಜರ್.
ಇಲ್ಲೊಬ್ಬ ಇದ್ದಾನೆ. ಬಿಲ್ವಿದ್ದೆಯಲ್ಲಿ ಆತ ನಿಜಕ್ಕೂ ಪಂಟರ್. ಆತನ ಕೈಲಿದ್ದ ಬಿಲ್ಲಿನಿಂದ ಚಿಮ್ಮಿದ ಬಾಣವೊಂದು ಅದ್ಭುತವಾದ ದೃಶ್ಯವೊಂದನ್ನ ಸೃಷ್ಟಿಸಿದೆ..ಜಸ್ಟ್ ಸೆಕೆಂಡ್ನಲ್ಲಿ ಬಾಣ ಪಾಸ್ ಆಗಿದ್ರು..ಅಲ್ಲಿ ಕ್ರಿಯೇಟ್ ಆಗಿರೋ ಸೀನ್ ಮಾತ್ರ ಅಲ್ಟಿಮೇಟ್. ಇನ್ನು ಲೇಟ್ ಮಾಡೋದು ಬೇಡ. ಸಖತ್ ಆಗಿರೋ ಆ ವಿಡಿಯೋವನ್ನು ನೋಡ್ಕೊಂಡು ಬರೋಣ..ಆದ್ರ ಜೊತೆಗೆ ಒಗ್ಗಟ್ಟಿನಲ್ಲಿ ಬಲವಿದೆ ಅನ್ನೋದನ್ನ ವಿಮಾನ ಎಳೆಯೋ ಮೂಲಕ ವಿಕಲಚೇತನ ವ್ಯಕ್ತಿಗಳು ಸಾಧಿಸಿ ತೋರಿಸಿದ್ದಾರೆ. ಆ ವಿಡಿಯೋವನ್ನ ಸಹ ತೋರಿಸ್ತೀವಿ ನೋಡಿ.
ಕ್ಯಾನ್ಸರ್ ಗೆದ್ದ ಶಿವಣ್ಣ: ಅಭಿಮಾನಿ ದೇವರುಗಳಿಗೆ ಅಣ್ಣಾವ್ರ ಮಗ ಹೇಳಿದ್ದೇನು?
ಒಂದೇ ಒಂದು ನಿಮಿಷದಲ್ಲಿ ಅತಿ ಹೆಚ್ಚು ಬಾರಿ ಡ್ರೇಸ್ ಚೆಂಜ್ ಮಾಡೋ ಮೂಲಕ ಇಲ್ಲೊಬ್ಬಳು ಹುಡುಗಿ ಗಿನ್ನಿಸ್ ದಾಖಲೆ ಮಾಡಿದ್ದಾರೆ. ಹಾಗಿದ್ರೆ, ಯಾರಾಕೆ?. ಒಬ್ಬಳು ಹುಡುಗಿ ಇದ್ದಾಳೆ. ಆಕೆ ಮಾಡೋದು ಮ್ಯಾಜಿಕ್ ಅಲ್ಲ.. ರಿಯಲ್. ಆದ್ರೆ ನೋಡೋರ ಕಣ್ಣಿಗೆ ಮಾತ್ರ ಅದು ಮ್ಯಾಜಿಕ್ ತರಾನೆ ಕಾಣ್ಸುತ್ತೆ. ಯಾಕೆಂದ್ರೆ ಆ ಹುಡುಗಿಯ ಸ್ಪೀಡ್ ಅಷ್ಟಿದೆ. ಕಣ್ಣು ಮುಚ್ಚಿ ಬಿಡೋದ್ರೊಳಗೆ ಆಕೆ ಬಟ್ಟೆ ಚೇಂಜ್ ಮಾಡ್ತಾಳೆ. ಆಕೆಯ ಸ್ಪೀಡ್ ಹೇಗೆ ಅಂತ ತೋರಿಸ್ತೀವಿ. ಅದ್ರ ಜೊತೆಗೆ ಹಗ್ಗದ ಮೇಲೆ ಹಾರಾಡ್ತಾ. ಮತ್ತೊಬ್ಬ ವ್ಯಕ್ತಿ ಎದೆ ಝಲ್ ಅನ್ನಿಸ್ತಾನೆ. ಆತನನ್ನೂ ತೋರಿಸ್ತೀವಿ ನೋಡಿ.
ಮರಳಲ್ಲಿ ಏನೇನನ್ನೋ ಮಾಡ್ತಾರಂತೆ. ಅದೇ ರೀತಿ ಇಲ್ಲೊಂದು ಟೀಮ್ ಮರಳಲ್ಲಿ ಒಂದು ಭವ್ಯ ಅರಮನೆಯನ್ನೇ ಕಟ್ಟಿದೆ. ಅದನ್ನ ನೋಡಿದ್ರೆ, ನೀವು ಬಾಯಿ ಮೇಲೆ ಬೆರಳಿಟ್ಟು ಕೂರೋದಂತೂ ಫಿಕ್ಸ್.. ಹಾಗಿದ್ರೆ ಆ ಅರಮನೆಯ ಭವ್ಯತೆ ಹೇಗಿದೆ..?.
ಮಕ್ಕಳು ಮರಳಲ್ಲಿ ಪುಟ್ಟದಾದ ಮನೆ ಕಟ್ಟಿ ಆಟ ಆಡ್ತಾರೆ. ಆದ್ರೆ, ಇಲ್ಲೊಂದು ತಂಡ ಮರಳಲ್ಲಿಯೇ ಭವ್ಯವಾದ ಅರಮನೆ ಕಟ್ಟಿದೆ. ಯಾವ ರಿಯಲ್ ಅರಮನೆಗೂ ಸಾಟಿಯಿಲ್ಲ ಅಷ್ಟು ಸುಂದರವಾಗಿದೆ ಆ ಅರಮನೆ. ಅದನ್ನ ಕಟ್ಟೋದಕ್ಕೂ ಬಹಳ ಶ್ರಮ ಪಟ್ಟಿದ್ದಾರೆ.