ಆಪರೇಷನ್ ಜೆಡಿಎಸ್‌ಗೆ ಗ್ರಾಮ ಪಂಚಾಯತ್ ಸದಸ್ಯ ಬಲಿ, ಮೈಮೇಲೆ ಒಂದು ಎಳೆ ಬಟ್ಟೆಯೂ ಇರಲಿಲಿಲ್ಲ
ಅದು ಆಪರೇಷನ್ ಜೆಡಿಎಸ್ ತಂದ ಸಾವು. ಆ ಸಾವಿನ ಸುತ್ತ ಅನುಮಾನದ ವುತ್ತ ಬೆಳೆದು ನಿಂತಿದೆ. ಒಂದು ದಿನ ಕಳೆದಿದ್ರೂ ಆತ ಗ್ರಾಮ ಪಂಚಾಯತಿ ಅಧ್ಯಕ್ಷ ಚುನಾವಣೆಗೆ ಮತ ಹಾಕುತ್ತಿದ್ದ. 20 ದಿನ ರಾಜ್ಯವ್ಯಾಪಿ ಟ್ರಿಪ್ ಮಾಡಿಕೊಂಡು ಬಂದ 11ಜನ ಗ್ರಾ.ಪಂ ಸದಸ್ಯರ ಪೈಕಿ ಆತ ಮಾತ್ರ ಸಾವನಪ್ಪಿದ್ದಾನೆ. ಮೃತದೇಹದ ಮೇಲೆ ಒಂದು ಎಳೆ ಬಟ್ಟೆಯೂ ಇರಲಿಲ್ಲ ಎಂಬುದು ಗಮನಾರ್ಹ ವಿಚಾರವಾಗಿದೆ.
ಮೈಸೂರು, (ಜುಲೈ.26): ಅದು ಆಪರೇಷನ್ ಜೆಡಿಎಸ್ ತಂದ ಸಾವು. ಆ ಸಾವಿನ ಸುತ್ತ ಅನುಮಾನದ ವುತ್ತ ಬೆಳೆದು ನಿಂತಿದೆ. ಒಂದು ದಿನ ಕಳೆದಿದ್ರೂ ಆತ ಗ್ರಾಮ ಪಂಚಾಯತಿ ಅಧ್ಯಕ್ಷ ಚುನಾವಣೆಗೆ ಮತ ಹಾಕುತ್ತಿದ್ದ. 20 ದಿನ ರಾಜ್ಯವ್ಯಾಪಿ ಟ್ರಿಪ್ ಮಾಡಿಕೊಂಡು ಬಂದ 11ಜನ ಗ್ರಾ.ಪಂ ಸದಸ್ಯರ ಪೈಕಿ ಆತ ಮಾತ್ರ ಸಾವನಪ್ಪಿದ್ದಾನೆ. ಮೃತದೇಹದ ಮೇಲೆ ಒಂದು ಎಳೆ ಬಟ್ಟೆಯೂ ಇರಲಿಲ್ಲ ಎಂಬುದು ಗಮನಾರ್ಹ ವಿಚಾರವಾಗಿದೆ.
ಹುಟ್ಟುಹಬ್ಬ ಆಚರಿಸಲು ಹೋದವನು ಹೆಣವಾದ, ಯುವಕನ ಬರ್ತ್ ಡೇ ದಿನವೇ ಡೆತ್ ಡೇ
ಮೈ ಮೇಲೆ ಒಂದೂ ಬಟ್ಟೆ ಇಲ್ಲದೆ ರೂಂನಲ್ಲಿ ನೆಲದ ಮೇಲೆ ಸತ್ತು ಬಿದ್ದಿರುವ ಈತ ಸತೀಶ್. ಆತ ಕೆ.ಆರ್. ತಾಲೂಕಿನ ಹಳಿಯೂರು ಗ್ರಾಮ ಪಂಚಾಯಿತಿ ಸದಸ್ಯ. ನಾಳೆ ಅಧ್ಯಕ್ಷರ ಚುನಾವಣೆ ನಡೆಯಲಿದ್ದು ಅಧ್ಯಕ್ಷ ಸ್ಥಾನದ ಆಕಾಂಕ್ಷಿ ದಿನೇಶ್ ಗ್ರಾಮ ಪಂಚಾಯತಿ ಬೆಂಬಲಿತ ಸದಸ್ಯರನ್ನ ಪ್ರವಾಸಕ್ಕೆ ಕಳುಹಿಸಿದ್ದಾರೆ. ಕಳೆದ 20 ದಿನಗಳಿಂದ ಧರ್ಮಸ್ಥಳ, ಸುಬ್ರಹ್ಮಣ್ಯ ಸೇರಿದಂತೆ ಇನ್ನಿತರ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ಮೋಜು ಮಸ್ತಿಯಲ್ಲಿ ತೊಡಗೊದ್ದಾರೆ. ನಿನ್ನೆ(ಸೋಮವಾರ) ಮೈಸೂರಿಗೆ ಆಗಮಿಸಿದ ಸದಸ್ಯರು ಜೆಡಿಎಸ್ ಮುಖಂಡರಿಗೆ ಸೇರಿದ ಸುಭಿಕ್ಷ ರೆಸಿಡಿನ್ಸಿಯಲ್ಲಿ ವಾಸ್ತವ್ಯ ಹೂಡಿರುತ್ತಾರೆ. ನಿನ್ನೆ ಭರ್ಜರಿ ಪಾರ್ಟಿ ನಡೆಸಿರುವ ಸದಸ್ಯರು ಊಟ ಮುಗಿಸಿ ಮಲಗಿರುತ್ತಾರೆ. ಮುಂಜಾನೇ ವೇಳೆಗೆ ಸತೀಶ್ ಎದೆ ನೋವು ಎಂದು ಕಿರುಚಾಡಿ ಮಂಚದಿಂದ ಕೆಳಗೆ ಬಿದಿದ್ದಾನೆ ಎನ್ನಲಾಗಿದೆ. ಇಷ್ಟಾದ್ರು ಸಹ ಸತೀಶನನ್ನ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಪ್ರಯತ್ನ ಯಾರು ಮಾಡಿಲ್ಲಾ. ಸತೀಶ್ ಸಾವಿನ ಸುತ್ತ ಸಾಕಷ್ಟು ಅನುಮಾನಗಳು ಹುಟ್ಟು ಹಾಕಿದೆ.