ಬಸ್‌ ಡ್ರೈವರ್‌ ಆತ್ಮಹತ್ಯೆ ಪ್ರಕರಣ: ಕೆಎಸ್‌ಆರ್‌ಟಿಸಿ ಡಿಪೋ, ಕ್ರಿಮಿನಾಶಕ ಅಂಗಡಿಗೆ ಸಿಐಡಿ ತಂಡ ಭೇಟಿ

ನಾಗಮಂಗಲದ ಕೆಎಸ್‌ಆರ್‌ಟಿಸಿ ಡಿಪೋಗೆ ಸಿಐಡಿ ತನಿಖಾ ತಂಡ ಭೇಟಿ ನೀಡಿ ಮಾಹಿತಿ ಪಡೆದಿದೆ.
 

Share this Video
  • FB
  • Linkdin
  • Whatsapp

ಕೆಎಸ್‌ಆರ್‌ಟಿಸಿ ಬಸ್‌ ಡ್ರೈವರ್‌ ಜಗದೀಶ್‌ ಆತ್ಮಹತ್ಯೆ(Bus driver suicide case) ಪ್ರಕರಣಕ್ಕೆ ಸಂಬಂಧಿಸಿದಂತೆ ನಾಗಮಂಗಲಕ್ಕೆ ಸಿಐಡಿ (CID)ತನಿಖಾ ತಂಡ ಆಗಮಿಸಿದೆ. ಸಿಐಡಿ ಐಜಿಪಿ ಪ್ರವೀಣ್ ಮಧುಕರ್‌ ಪವಾರ್‌(Praveen Madhukar pawar) ನೇತೃತ್ವದ ತಂಡ ಭೇಟಿ ನೀಡಿದೆ. ಕೆಎಸ್‌ಆರ್‌ಟಿಸಿ ಡಿಪೋ ಮತ್ತು ಕ್ರಿಮಿನಾಶಕ ಪಡೆದ ಅಂಗಡಿಗೆ ತಂಡ ಭೇಟಿ ನೀಡಿ, ಮಾಹಿತಿ ಪಡೆದಿದೆ. ಇನ್ನೂ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಹೆಚ್‌.ಡಿ.ಕುಮಾರಸ್ವಾಮಿ(Kumaraswamy) ಮತ್ತು ಶಾಸಕ ಚಲುವರಾಯಸ್ವಾಮಿ(chaluvarayaswamy) ನಡುವೆ ವಾಗ್ವಾದ ನಡೆಯುತ್ತಿದೆ. ಅಲ್ಲದೇ ಆಂಬ್ಯುಲೆನ್ಸ್‌ನನ್ನು ತಡೆದ ಆರೋಪ ಸುರೇಶ್‌ ಗೌಡ ವಿರುದ್ಧ ಕೇಳಿಬಂದಿದೆ. ಇನ್ನೂ ಸದನದಲ್ಲೂ ಈ ವಿಷಯವಾಗಿ ಗಲಾಟೆ ನಡೆದಿದೆ. ಅಲ್ಲದೇ ಬಿಜೆಪಿ ಮತ್ತು ಜೆಡಿಎಸ್‌ ಚಲುವರಾಯಸ್ವಾಮಿ ರಾಜೀನಾಮಗೆ ಆಗ್ರಹಿಸುತ್ತಿವೆ. 

ಇದನ್ನೂ ವೀಕ್ಷಿಸಿ: ಪ್ರಾದೇಶಿಕ ಪಕ್ಷಗಳತ್ತ ಕೇಸರಿ ಪಡೆ ಚಿತ್ತ: ಎನ್‌ಡಿಎ ಜೊತೆ ಹೋಗುತ್ತಾ ಜೆಡಿಎಸ್‌ ?

Related Video