Asianet Suvarna News Asianet Suvarna News

ಮಾಯಾಂಗನೆಯ ಮೋಹ: 40 ಲಕ್ಷ ರೂ. ಕಳೆದುಕೊಂಡ ಪ್ರಿಯತಮ

ಫೇಸ್‌ಬುಕ್‌ ಗೆಳತಿಯಿಂದ ವ್ಯಕ್ತಿಯೊಬ್ಬ 40 ಲಕ್ಷ ರೂ. ಪಂಗನಾಮ ಹಾಕಿಸಿಕೊಂಡಿರುವ ಘಟನೆ ವಿಜಯಪುರದಲ್ಲಿ ನಡೆದಿದೆ.
 

ವಿಜಯಪುರದಲ್ಲೊಂದು ವಿಚಿತ್ರ ವಸುಲಿ ಪ್ರೇಮ ಕಥೆ ನಡೆದಿದ್ದು, ಸಿಂದಗಿ ಪಟ್ಟಣದ ಪರಮೇಶ್ವರ್‌ ಎಂಬ ವ್ಯಕ್ತಿ ಜೊತೆ ಹಾಸನದ ಬೆಡಗಿ ಪ್ರೀತಿ ನಾಟಕವಾಡಿ ವಂಚಿಸಿದ್ದಾಳೆ. ಪ್ರಿಯಕರನನ್ನು ಆನ್‌ಲೈನ್‌ನಲ್ಲಿ ಬೆತ್ತಲು ಮಾಡಿದ ಕಿಲಾಡಿ, ಫೇಸ್‌ ಬುಕ್‌'ನಲ್ಲಿ ಪ್ರೇಮ ಭೀಕ್ಷೆ ಕೇಳಿದ ವ್ಯಕ್ತಿಗೆ 40 ಲಕ್ಷ ರೂ. ಸುಲಿಗೆ ಮಾಡಿದ್ದಾಳೆ. ಫೇಸ್‌ ಬುಕ್‌'ನಲ್ಲಿ ಸುಂದರ ಯುವತಿಯ ನಕಲಿ ಫೋಟೋ ಹಾಕಿ ವಂಚನೆ ಮಾಡಲಾಗಿದೆ. ಪರಮೇಶ್ವರ್‌'ನನ್ನು ಫ್ರೆಂಡ್‌ ಮಾಡಿಕೊಂಡಿದ್ದ ಮಂಜುಳಾ ಬೆತ್ತಲೆ ವಿಡಿಯೋ ಕಾಲ್‌ ಸ್ಕ್ರೀನ್ ಶಾಟ್‌ ಇಟ್ಟುಕೊಂಡು 40 ಲಕ್ಷ ಸುಲಿಗೆ ಮಾಡಿದ್ದಾಳೆ. ವಂಚನೆಯ ಹಿಂದೆ ಆಕೆಯ ಗಂಡ ಸ್ವಾಮಿ ಕೈವಾಡ ಕೂಡ ಇದೆ.