Asianet Suvarna News Asianet Suvarna News

ಕಟ್ಟಡದ ತುದಿಯಲ್ಲಿದ್ದ ಜೇನುಗೂಡಿನ ಮೇಲೆ ಹಕ್ಕಿಯ ದಾಳಿ: ವೈರಲ್ ವಿಡಿಯೋ

ಜೇನುಗೂಡಿನ ಮೇಲೆ ಹದ್ದಿನಂತೆ ತೋರುವ ಹಕ್ಕಿಯೊಂದು ದಾಳಿ ನಡೆಸಿ ಜೇನು ನೊಣಗಳನ್ನು ಓಡಿಸಿ ಜೇನು ಹೀರುತ್ತಿರುವ ಅಪರೂಪದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

honey buzzard attacked honeybees nest watch viral video akb
Author
First Published Dec 2, 2022, 3:20 PM IST

ಜೇನುಗೂಡಿನ ಮೇಲೆ ಹದ್ದಿನಂತೆ ತೋರುವ ಹಕ್ಕಿಯೊಂದು ದಾಳಿ ನಡೆಸಿ ಜೇನು ನೊಣಗಳನ್ನು ಓಡಿಸಿ ಜೇನು ಹೀರುತ್ತಿರುವ ಅಪರೂಪದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದುವರೆಗೆ ಮನುಷ್ಯರನ್ನು ಬಿಟ್ಟರೆ ಕರಡಿಯಂತಹ ಪ್ರಾಣಿಗಳು ಜೇನುಗೂಡಿನ ಮೇಲೆ ದಾಳಿ ಮಾಡಿ ಮಾಡಿ ಜೇನು ಹೀರುತ್ತಿದ್ದವು. ಆದರೆ ಪಕ್ಷಿಗಳು ಕೂಡ ಜೇನುಗೂಡಿನ ಮೇಲೆ ದಾಳಿ ಮಾಡಿ ಜೇನು ಹೀರಿದ ದೃಶ್ಯ ಕಾಣ ಸಿಕ್ಕಿರುವುದು ಬಹುಶಃ ಇದೇ ಮೊದಲೆನಿಸುತ್ತಿದೆ. 

@zaibatsu ಎಂಬ ಟ್ಟಿಟ್ಟರ್ ಪೇಜ್‌ನಿಂದ ಈ ವಿಡಿಯೋ ಅಪ್‌ಲೋಡ್ ಆಗಿದ್ದು, ಕಟ್ಟಡದ ಅಂಚೊಂದರಲ್ಲಿ ಜೇನು ನೊಣಗಳು(Honey Bee) ಗೂಡು ಕಟ್ಟಿ ಜೇನು ಶೇಖರಣೆ ಮಾಡಿದ್ದು, ಆದರೆ ಹದ್ದಿನಂತಹ ಪಕ್ಷಿ ಇದರ ಮೇಲೂ ಕಣ್ಣು ಹಾಕಿದೆ. ಸಾಮಾನ್ಯವಾಗಿ ಜೇನು ನೊಣಗಳು ಬಹಳ ಶ್ರಮಜೀವಿಗಳಾಗಿದ್ದು, ಎಲ್ಲೆಲ್ಲೋ ದೂರ ಸಾಗಿ ಮಕರಂಧ ಹೀರಿ ತಂದು ಜೇನಾಗಿ ಪರಿವರ್ತಿಸುತ್ತವೆ. ಆದರೆ ಅವುಗಳ ಶ್ರಮದ ಫಲವನ್ನು ಬೇರಾರೂ ತಿನ್ನುತ್ತಾರೆ. ಅದೇ ರೀತಿ ಇಲ್ಲಿ ಜೇನುನೊಣಗಳ ಶ್ರಮದ ಫಲವನ್ನು ಹದ್ದೊಂದು ತಿನ್ನುತ್ತಿದೆ. 

 

ಕಟ್ಟಡದ ಕಿಟಕಿಯ ಸನ್‌ಶೇಡ್‌ನ ಅಂಚಿನಲ್ಲಿ ಜೇನುನೊಣ (honey bee) ಗೂಡು ಕಟ್ಟಿದೆ. ಆದರೆ ಹಕ್ಕಿಯ ಕಣ್ಣು ಈ ಗೂಡಿನ ಮೇಲೆ ಬಿದ್ದಿದ್ದು, ಜೇನುನೊಣಗಳನ್ನು ದೂರ ಓಡಿಸಿ ಅದು ಜೇನು ಹೀರಲು ಶುರು ಮಾಡಿದೆ. ಹದ್ದನ್ನು ನೋಡಿದ ಜೇನುನೊಣಗಳು ಮೇಲೆದ್ದು ಹಾರಲು ಶುರು ಮಾಡಿವೆ. ಆದರೆ ಪುಕ್ಕಗಳಿಂದ ತುಂಬಿರುವ ಪಕ್ಷಿಯ ಮೇಲೆ ದಾಳಿ ಮಾಡಲು ಅವುಗಳಿಗೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಜೇನುನೊಣಗಳು ಅಸಹಾಯಕವಾಗಿ ಮೇಲೆದ್ದು ಹಾರಾಡಲು ತೊಡಗಿವೆ. 36 ಸೆಕೆಂಡ್‌ಗಳ ಈ ವಿಡಿಯೋವನ್ನು ಮೂರು ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. 

ಜೇನು ನೊಣಗಳ ಸರದಾರ, 60 ಸಾವಿರ ನೊಣಗಳೊಂದಿಗೆ ಟೈಂ ಪಾಸ್!

ವಿಡಿಯೋ ನೋಡಿದ ಅನೇಕರು ಅಚ್ಚರಿ ವ್ಯಕ್ತಪಡಿಸಿದ್ದು, ಇಂತಹ ದೃಶ್ಯವನ್ನು ಈ ಹಿಂದೆಂದೂ ನೋಡಿರಲಿಲ್ಲ ಎಂದಿದ್ದಾರೆ. ರಾಯಲ್ ಸೊಸೈಟಿ ಫಾರ್ ದಿ ಪ್ರೊಟೆಕ್ಷನ್ ಆಫ್ ಬರ್ಡ್ಸ್ ಪ್ರಕಾರ, ಈ ಹಕ್ಕಿಯನ್ನು ಹನಿ ಬಜಾರ್ಡ್ ಹಕ್ಕಿ ಎಂದು ಗುರುತಿಸಲಾಗಿದ್ದು, ಇದು ಅಗಲವಾದ ರೆಕ್ಕೆ ಹಾಗೂ ಬಾಲವನ್ನು ಹೊಂದಿರುತ್ತದೆ. ಇವುಗಳು ಹೆಚ್ಚಾಗಿ ಜೇನುನೊಣಗಳು ಹಾಗೂ ಕಣಜದ ಗೂಡುಗಳ ಮೇಲೆ ದಾಳಿ ಮಾಡುತ್ತವೆ. ಜೇನುನೊಣಗಳು ಅಪಾಯಕಾರಿಯಾಗಿದ್ದು, ಅಷ್ಟು ಸುಲಭವಾಗಿ ಜೇನು ತೆಗೆಯಲು ಸಾಧ್ಯವಿಲ್ಲ. ಈ ಕಾರಣಕ್ಕೆ ಕೆಲವರು ರಾತ್ರಿ ವೇಳೆ ಜೇನುಗೂಡಿನ ಮೇಲೆ ದಾಳಿ ಮಾಡುತ್ತಾರೆ. ಜೇನು ಗೂಡಿಗೆ ಹೊಗೆ ಬಿಟ್ಟು ಜೇನು ತೆಗೆಯುತ್ತಾರೆ.


ಜೇನು ತುಪ್ಪದ ಸವಿ ಗೊತ್ತು, ಜೇನು ನೊಣವೂ ಇಷ್ಟು ಉಪಕಾರಿಯೇ?

Follow Us:
Download App:
  • android
  • ios