5 ಎಕರೆ, 11 ಗುಂಟೆ ಜಾಗಕ್ಕೋಸ್ಕರವೇ ನಡೆದಿತ್ತಾ ಕಗ್ಗೊಲೆ: ಸರಳ ವಾಸ್ತು ಗುರೂಜಿ, ಶಿಷ್ಯರ ಮಧ್ಯೆ ಅಸಲಿ ವಿಲನ್ ಯಾರು?

5 ಎಕರೆ, 11 ಗುಂಟೆ ಜಾಗಕ್ಕೋಸ್ಕರವೇ ನಡೆದಿತ್ತಾ ಆ ಕಗ್ಗೊಲೆ..? ಸರಳ ವಾಸ್ತು ಗುರೂಜಿ ಮತ್ತು ಅವರ ಶಿಷ್ಯರ ಮಧ್ಯೆ ಅಸಲಿ ವಿಲನ್ ಯಾರು..? 800 ಪುಟಗಳ ಚಾರ್ಜ್‌ಶೀಟ್‌ನಲ್ಲೇನಿದೆ ಇಲ್ಲಿದೆ ಡಿಟೇಲ್‌

Share this Video
  • FB
  • Linkdin
  • Whatsapp

ಸರಳವಾಸ್ತು ಸಂಸ್ಥಾಪಕ ಚಂದ್ರಶೇಖರ್ ಗುರೂಜಿ ಭೀಕರವಾಗಿ ಹತ್ಯೆಯಾಗಿದ್ದು ದೇಶಾದ್ಯಂತ ಸುದ್ದಿಯಾಗಿತ್ತು. ಗುರೂಜೀ ಸಾವಿಗೆ ಅವರ ಅಪಾರ ಅನುಯಾಯಿಗಳು ಕಣ್ಣೀರಿಟ್ಟಿದ್ದರು. ಕಳೆದ ಜುಲೈ 5 ರಂದು ಹುಬ್ಬಳ್ಳಿಯ ಉಣಕಲ್‌ನಲ್ಲಿರುವ ಖಾಸಗಿ ರೆಸಾರ್ಟ್‌ನಲ್ಲಿ ಅವರ ಹತ್ಯೆ ನಡೆದಿತ್ತು. ಗುರೂಜೀ ಹತ್ಯೆಯಾಗಿ ಬರೋಬ್ಬರಿ ಮೂರು ತಿಂಗಳುಗಳೇ ಕಳೆದಿದ್ದು, ಅವರ ಕೊಲೆ ಪ್ರಕರಣಕ್ಕೆ ಇತ್ತೀಚೆಗೆ ಟ್ವಿಸ್ಟ್ ಸಿಕ್ಕಿತ್ತು. ಗುರೂಜಿಯ ಭೀಭತ್ಸ ಹತ್ಯೆಗೆ ಕಾರಣವಾಗಿದ್ದೇನು? ಚಾರ್ಜ್‌ಶೀಟ್‌ನಲ್ಲೇನಿದೆ. ಕೊಲೆ ಗಡುಕರ ಪ್ಲಾನ್ ಏನಾಗಿತ್ತು. ಯಾಕಾಗಿ ಕೊಲೆ ಮಾಡಿದರು ಎಂಬ ಸಂಪೂರ್ಣ ಡಿಟೇಲ್‌ ಪೊಲೀಸರ ಚಾರ್ಜ್‌ಶೀಟ್‌ನಲ್ಲಿದ್ದು, ಅದರ ವಿವರ ಈ ವಿಡಿಯೋದಲ್ಲಿದೆ ವೀಕ್ಷಿಸಿ.

Related Video