ಕಾವೇರಿಗಾಗಿ ನಡೆದ ಬೆಂಗಳೂರು ಬಂದ್ ಯಶಸ್ವಿ: ಸರ್ಕಾರದ ವಿರುದ್ಧ ಮೊಳಗಿದ ಕಾವೇರಿ ಜ್ವಾಲಾಗ್ನಿ!
ಶಾಪಿಂಗ್ ಮಾಲ್ .. ಮಾರುಕಟ್ಟೆ ಸಂಪೂರ್ಣ ಬಂದ್
ರಾಜಭವನ ಎದುರು ವಾಟಾಳ್ ಸೇರಿ ಹಲವರು ಅರೆಸ್ಟ್!
ಱಲಿ ಅವಕಾಶ ನೀಡದ್ದಕ್ಕೇ ಹೋರಾಟಗಾರರು ಆಕ್ರೋಶ
ಮೌರ್ಯ ಸರ್ಕಲ್ಗೆ ಬರ್ತಿದ್ದಂತೆ ಕುರುಬೂರು ಬಂಧನ!
ಕನ್ನಡಿಗರ ಜೀವನಾದಿ ಕಾವೇರಿಯ ಕಿಚ್ಚು ಹೆಚ್ಚಾಗುತ್ತಿದೆ. ತಮಿಳುನಾಡಿಗೆ ನೀರು ಹರಿಸದಂತೆ ರೈತರು(Farmers ) ಬೀದಿಗಿಳಿದಿದ್ದಾರೆ. ಮೊನ್ನೆ ತಾನೇ ಮಂಡ್ಯ ಬಂದ್ ಮಾಡಿದ್ದ ರೈತರು ಇವತ್ತು ರಾಜ್ಯರಾಜಧಾನಿಯನ್ನ ಲಾಕ್ ಮಾಡಿದ್ರು. ಅಷ್ಟೇ ಅಲ್ಲ ಬಂದ್ ಯಶಸ್ವಿಗೊಳಿಸಲು ಎಲ್ಲಾ ತಯಾರಿಗಳನ್ನ ಮಾಡಿಕೊಂಡಿದ್ರು. ಆದ್ರೆ ಪೊಲೀಸರು ಪ್ರತಿಭಟನಕಾರರಿಗೆ ಶಾಕ್ ಕೊಡಲು ತಯಾರಿ ನಡೆಸಿದ್ರು. ಬೆಳ್ಳಂಬೆಳಗ್ಗೆ ರ‍್ಯಾಲಿ ನಡೆಸಲು ಬಂದವರಿಗೆ ಪೊಲೀಸರು(police) ತಡೆದು ಅವರನ್ನೆಲ್ಲಾ ವಷಕ್ಕೆ ಪಡೆದು ಫ್ರೀಡಂ ಪಾರ್ಕ್‌ವರೆಗೆ ಬಿಟ್ಟುಬಂದಿದ್ರು. ಹೀಗೆ ಬೀದಿಗಿಳಿದು ಪ್ರತಿಭಟಿಸಿದ ರೈತರು, ಸಂಘಟನೆಗಳು ಪೊಲೀಸರ ವಾರ್ನಿಂಗ್ ನಡುವೆಯೂ ಬಂದ್ ಯಶಸ್ವಿಯಾಗುವಂತೆ ಮಾಡಿದ್ರು. ಇನ್ನೂ ಬೆಂಗಳೂರಿನ ಬಂದ್‌ಗೆ(Bengaluru Bandh) ಕೇವಲ ಬೆಂಗಳೂರಿಗರಷ್ಟೇ ಅಲ್ಲ. ಉಳಿದೆಲ್ಲಾ ಜಿಲ್ಲೆಗಳಿಂದಲೂ ಒಳ್ಳೆಯ ರೆಸ್ಪಾನ್ಸ್ ಸಿಗ್ತು.ಬಂದ್ ಬೆಂಗಳೂರಿಗೆ ಮಾತ್ರವಾಗಿದ್ರೂ ಹೊರ ಜಿಲ್ಲೆಯ ಜನರು ಕೂಡ ಕಾವೇರಿಗಾಗಿ ಒಂದಾಗಿದ್ರು. ಪ್ರತೀ ಜಿಲ್ಲೆಯಲ್ಲೂ ತಮ್ಮದೇ ಶೈಲಿಯಲ್ಲಿ ಕಾವೇರಿಗಾಗಿ ಬೀದಿಗೆ ಇಳಿದಿದ್ರು.
ಇದನ್ನೂ ವೀಕ್ಷಿಸಿ: ಕೆನಡಾ ಈಗ ಉಗ್ರರ ಪಾಲಿನ ಹೊಸ ಸ್ವರ್ಗ..ಖಲಿಸ್ತಾನಿ ಉಗ್ರರಿಗೆ ಮೇವು ಹಾಕೋದೇಕೆ ಟ್ರುಡೊ?