ಕೆನಡಾ ಈಗ ಉಗ್ರರ ಪಾಲಿನ ಹೊಸ ಸ್ವರ್ಗ..ಖಲಿಸ್ತಾನಿ ಉಗ್ರರಿಗೆ ಮೇವು ಹಾಕೋದೇಕೆ ಟ್ರುಡೊ?
ಪಾಕಿಗೆ ಬಂದ ಗತಿಯೇ ಕೆನಡಾಗೂ ಕಾದಿದೆಯಾ?
ಖಲಿಸ್ತಾನಿ ಉಗ್ರರಿಗೆ ಮೇವು ಹಾಕೋದೇಕೆ ಟ್ರುಡೊ?
ಹೇಗೆ ನಿರ್ಮಾಣವಾಗುತ್ತೆ ಖಲಿಸ್ತಾನಿ ಉಗ್ರರ ಪಡೆ?
ಇವತ್ತು ಕೆನಡಾ ಅನ್ನೋದು ಜಗತ್ತಿನ ಪಾಲಿಗೆ ವಿಲಕ್ಷಣವಾಗಿ ಕಾಣ್ತಾ ಇರೋ ದೇಶ. ನಿನ್ನೆ ಮೊನ್ನೆ ತನಕ, ಕೆನಡಾ(Canada) ಅಂದ್ರೆ, ಅಮೆರಿಕಾದ ಸೋದರ ದೇಶ. ಅಮೆರಿಕಾ ಎಷ್ಟು ಸ್ಟ್ರಾಂಗೋ ಕೆನಡಾನೂ ಹಂಗೇ ಇರುತ್ತೆ ಅಂತ ಅದೆಷ್ಟೋ ಮಂದಿ ಅಂದ್ಕೊಂಡಿದ್ರು. ಅಷ್ಟೇ ಅಲ್ಲ, ನಮ್ಮನೆ ಅಕ್ಕಪಕ್ಕದವರೇ ದೊಡ್ಡ ಓದು ಓದ್ಬೇಕು ಅಂದ್ರೆ, ಕೆನಡಾಗೆ ಹೋಗ್ಬೇಕು ಅಂತಿದ್ರು. ಒಟ್ಟಾರೆ, ಕಳೆದ ಕೆಲವು ತಿಂಗಳ ಹಿಂದಿನವರೆಗೂ ಸಾಮಾನ್ಯ ಭಾರತೀಯನ(India) ಕಣ್ಣಿಗೆ ಕೆನಡಾ ಅನ್ನೋದು, ಡಿಗ್ನಿಫೈಡ್ ಕಂಟ್ರಿ, ಡೆವಲಪ್ಡ್ ಕಂಟ್ರಿ ಥರ ಕಾಣ್ತಾ ಇತ್ತು. ಬಟ್, ಈಗ ಕೆನಡಾ ಅಂದ್ರೆ, ವಿಲನ್.. ಅಕ್ಷರಶಃ ಭಾರತದ ವಿಲನ್ ಆಗಿದೆ. ಕೆನಡಾ ಭಾರತದ ವಿರುದ್ಧ ದ್ವೇಷ ಕಟ್ಕೊಳ್ತು. ಆ ದ್ವೇಷಕ್ಕೆ ಕಾರಣವಾಗಿದ್ದೇನು? ಕೆನಡಾ ಪ್ರಧಾನಿ ಟ್ರುಡೊ(Justin Trudeau) ಮುಟ್ಠಾಳತನಾ? ಹೋಗಿ ಹೋಗಿ ಖಲಿಸ್ತಾನಿ ಉಗ್ರರ ಮೇಲಿರೋ ಕುರುಡು ಪ್ರೇಮದಿಂದ ಭಾರತವನ್ನೇ ಎದುರುಹಾಕಿಕೊಳ್ಳೋ ಹಾಗೆ ಟ್ರುಡೊ ಕಾಣ್ತಿದ್ದಾರೆ. ಭಾರತದ ವಿರುದ್ಧ ಸೂಕ್ತ ಸಾಕ್ಷ್ಯಾಧಾರವಿಲ್ಲದೆ, ಊಹೆಯಿಂದಲೇ ಆರೋಪವನ್ನು ಸಹ ಮಾಡಿದ್ದಾರೆ.
ಇದನ್ನೂ ವೀಕ್ಷಿಸಿ: ಒಂದೇ ವಾರದಲ್ಲಿ ಎರಡು ಬಂದ್.. ಇದು ಯಾರ ಪ್ರಮಾದ..? ಸ್ತಬ್ಧವಾಗುತ್ತಾ ಕರುನಾಡು..?