ಕುಸಿದು ಬಿತ್ತು ಮೂರಂತಸ್ತಿನ ಕಟ್ಟಡ, ತಪ್ಪಿತು ಭಾರೀ ದುರಂತ

ವಿಲ್ಸನ್‌ ಗಾರ್ಡನ್‌ನಲ್ಲಿ ಮೂರು ಅಂತಸ್ತಿನ ಕಟ್ಟಡ ಕುಸಿದು ಬಿದ್ದಿದೆ. 2 ವರ್ಷಗಳಿಂದ ಈ ಕಟ್ಟಡ ವಾಲಿಕೊಂಡಿತ್ತು. ಇದನ್ನು ಬಿಬಿಎಂಪಿ ತೆರವು ಮಾಡಿಸಬೇಕಿತ್ತು.

Share this Video
  • FB
  • Linkdin
  • Whatsapp

ಬೆಂಗಳೂರು (ಸೆ. 27): ವಿಲ್ಸನ್‌ ಗಾರ್ಡನ್‌ನಲ್ಲಿ ಮೂರು ಅಂತಸ್ತಿನ ಕಟ್ಟಡ ಕುಸಿದು ಬಿದ್ದಿದೆ. 2 ವರ್ಷಗಳಿಂದ ಈ ಕಟ್ಟಡ ವಾಲಿಕೊಂಡಿತ್ತು. ಇದನ್ನು ಬಿಬಿಎಂಪಿ ತೆರವು ಮಾಡಿಸಬೇಕಿತ್ತು. ಆದರೆ ಬಿಬಿಎಂಪಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದರು. ಈ ಕಟ್ಟಡದಲ್ಲಿ ಮೆಟ್ರೋ ಕಾಮಗಾರಿ ಕಾರ್ಮಿಕರು ವಾಸವಿದ್ದರು. ಕಟ್ಟಡ ಕುಸಿಯುವಾಗ ಅದೃಷ್ಟವಶಾತ್ ಈ ಕಟ್ಟಡದಲ್ಲಿ ಕಾರ್ಮಿಕರಿರಲಿಲ್ಲ. ಹಾಗಾಗಿ ಯಾವುದೇ ಪ್ರಾಣಾಪಾಯವಾಗಿಲ್ಲ. 

ರೈತ ಪ್ರತಿಭಟನೆ ವೇಳೆ ಡಿಸಿಪಿ ಧರ್ಮೇಂದ್ರ ಕುಮಾರ್ ಕಾಲು ಮೇಲೆ ಹರಿದ ಕಾರು

ಘಟನೆ ನಡೆದ ಸ್ಥಳಕ್ಕೆ ಶಾಸಕ ಉದಯ್ ಗರುಡಾಚಾರ್ ಭೇಟಿ ನೀಡಿ, ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ. 

Related Video