ವೈಯಕ್ತಿಕ ದ್ವೇಷ, ಗಾಂಜಾ ಘಾಟು: ಕಾಡಿನಲ್ಲಿ ಸಿಕ್ತು ಹುಡುಗನ ಶವ

ಶಾಲೆ ಬಿಟ್ಟು ಮೋಜು ಮಸ್ತಿಗೆ ಇಳಿದಿದ್ದ ಹುಡುಗ, ಕಾಡಿನಲ್ಲಿ ಹೆಣವಾಗಿದ್ದ. ವೈಯಕ್ತಿಕ ದ್ವೇಷವೋ, ಗಾಂಜಾ ಗಮ್ಮತ್ತೋ ಗೊತ್ತಿಲ್ಲ ಬಾಳಿ ಬದುಕಬೇಕಿದ್ದ ಚಿರ ಯುವಕ ಇಂದು ಕೊಲೆಯಾಗಿದ್ದಾನೆ.
 

Share this Video
  • FB
  • Linkdin
  • Whatsapp

ಅವನು ಇನ್ನೂ ಮೀಸೆ ಚಿಗುರದ ಹುಡುಗ, ಓದು ತಲೆಗತ್ತಲ್ಲಿಲ್ಲ ಅಂತ ಶಾಲೆ ಬಿಟ್ಟು ಮೋಜು ಮಸ್ತಿಗೆ ಇಳಿದುಬಿಟ್ಟಿದ್ದ. ಗಾಂಜಾದ ಘಾಟು ಅವನನ್ನ ಕೆಟ್ಟ ದಾರಿಗೆ ಇಳಿಸಿತ್ತು. ಕಿರಿಕ್ ಮಾಡೋದು ಸಿಕ್ಕಸಿಕ್ಕವರ ಮೇಲೆ ಕೈ ಮಾಡೋದು ಇವನ ಅವನ ಫುಲ್ ಟೈಂ ಜಾಬ್ ಆಗಿಬಿಟ್ಟಿತ್ತು. ಆದ್ರೆ ಹಿಂಗಿದ್ದವನು ಇದ್ದಕ್ಕಿದ್ದಂತೆ ನಾಪತ್ತೆಯಾಗಿಬಿಟ್ಟಿದ್ದ, ಇವನ ಹೆತ್ತವರು ಹುಡುಕಬಾರದ ಕಡೆ ಹುಡುಕಾಡಿದ್ರು. ಪೊಲೀಸ್ ಕಂಪ್ಲೆಂಟ್ ಕೂಡ ಕೊಟ್ರೂ ನೋ ಯೂಸ್. ಮಿಸ್ ಆಗಿದ್ದ ಹುಡುಗ ಸಿಕ್ಕಿದ್ದು ಹೆಣವಾಗಿ. ಅವನನ್ನು ಹಂತಕರು ಕೊಂದು ಕಾಡಿನಲ್ಲಿ ಹೂತಿಟ್ಟಿದ್ರು. ಅಷ್ಟಕ್ಕೂ ಮಿಸ್ಸಿಂಗ್ ಆಗಿದ್ದ ಹುಡುಗ ಶವವಾಗಿ ಕಾಡಿನಲ್ಲಿ ಸಿಕ್ಕಿದ್ದೇಗೆ..? ಇಲ್ಲಿದೆ ಡಿಟೇಲ್ಸ್.

Related Video