ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆಸಾವು..! ಅವರು ರೀಲ್ಸ್‌ನಲ್ಲೇ ಧರ್ಮದ ಪಾಠ ಮಾಡ್ತಿದ್ರು..!

ಜನಪ್ರೀಯ ಜೋಡಿಯ ಅಂತ್ಯದ ನೋವಿನ ಕಹಾನಿ !
ಮಲಗಿದ್ದವರು ಬೆಳಗಾಗುವಷ್ಟರಲ್ಲಿ ಹೆಣವಾಗಿದ್ರು..!
ಸಾಯೋದಕ್ಕೂ ಮುನ್ನ ಮಕ್ಕಳನ್ನ ಬಚಾವ್ ಮಾಡಿದ್ರು!

First Published Jul 17, 2024, 4:33 PM IST | Last Updated Jul 17, 2024, 4:34 PM IST

ಬಿಜೆಪಿ ಮಹಿಳಾ ಮೋರ್ಚ ಅಧ್ಯಕ್ಷೆ(BJP Mahila Morcha President) ಪಾರ್ಟಿಯ ಕೆಲಸಗಳಲ್ಲಿ ಅವರು ಸಖತ್ ಆ್ಯಕ್ಟೀವ್ ಆಗಿದ್ರು. ಆದ್ರೆ ಆಕೆ ರಾಜಕೀಯಕ್ಕಿಂತ ಸೋಷಿಯಲ್ ಮೀಡಿಯಾ ಮೂಲಕವೇ ಜನರಿಗೆ ಹತ್ತಿರವಾಗಿದ್ರು. ರೀಲ್ಸ್(Reels) ಮೂಲಕ ದರ್ಮದ ಪಾಠ ಮಾಡ್ತಿದ್ರು. ವಿಧ ವಿಧವಾದ ಅಡುಗೆಗಳನ್ನ ಮಾಡಿ ವಿಡಿಯೋಗಳನ್ನ(Videos) ಅಪ್ಲೋಡ್ ಮಾಡ್ತಿದ್ರು. ಆದ್ರೆ ಇವತ್ತು ಆ ಹೆಣ್ಣುಮಗಳು ಬದುಕಿಲ್ಲ.ಆಕೆ ತನ್ನದೇ ಮನೆಯಲ್ಲಿ ಹೆಣವಾಗಿದ್ದಾಳೆ. ಅಷ್ಟೇ ಅಲ್ಲ ಆಕೆಯ ಜೊತೆ ಗಂಡ ಕೂಡ ಉಸಿರು ಚೆಲ್ಲಿದ್ದಾರೆ. ಆದ್ರೆ ಇಷ್ಟರ ಮಟ್ಟಿಗೆ ಬಾಳಿ ಬದುಕಿದ್ದವರು ಇವತ್ತು ಮಸಣ ಸೇರಿದ್ದಾರೆ. ಅಶ್ವಿನಿ (Ashwini Shetty) ಮತ್ತು ಆಕೆಯ ಗಂಡ ಇಬ್ಬರೂ ಒಟ್ಟಿಗೆ ಪರಲೋಕ ಸೇರಿದ್ದಾರೆ. ಇನ್ನೂ ಅವರ ಸಾವಿಗೆ ಕಾರಣ ನಂದ ಗೋಕುಲ ದಂತಿದ್ದ ಅವರದ್ದೇ ಮನೆ. ಅವರಿಬ್ಬರು ಕಾಲೇಜಿನಲ್ಲಿರುವಾಗಲೇ ಪ್ರೀತಿಸಿ ನಂತರ ಮದುವೆಯಾಗಿದ್ದರು. ಕೊನೆಯವರೆಗೆ ಜತೆಗೆ ಇರೋಣ. ಏನೇ ಕಷ್ಟ ಬಂದರೂ ಒಟ್ಟಿಗೆ ಎದುರಿಸೋಣ ಅಂತ ಸಪ್ತಪದಿ ತುಳಿದಿದ್ರು. ಆದ್ರೆ ಆವತ್ತು ಮಾತು ಕೊಟ್ಟಂತೆ ಇವತ್ತು ಇಬ್ಬರೂ ತಮ್ಮ ಜೀವನಕ್ಕೆ ಫುಲ್ ಸ್ಟಾಪ್ ಇಟ್ಟುಕೊಂಡಿದ್ದಾರೆ.  ತಮ್ಮದೇ ಬಂಗಲೆಯಲ್ಲಿದ್ದ AC ಅವರ ಜೀವಕ್ಕೆ ಕುತ್ತು ತಂದಿದೆ. ಅದೃಷ್ಟವಷಾತ್ ಇಬ್ಬರು ಮಕ್ಕಳು ಬದುಕುಳಿದಿದ್ದಾರೆ. ಆದ್ರೆ ನಿದ್ರೆಗೆ ಜಾರಿದ್ದ ಗಂಡ ಹೆಂಡತಿ ಮಲಗಿದ್ದಲ್ಲೇ ಹೆಣವಾಗಿಬಿಟ್ಟಿದ್ದಾರೆ.

ಇದನ್ನೂ ವೀಕ್ಷಿಸಿ:  ಕನ್ನಡಿಗರಿಗೆ ಕಡ್ಡಾಯ ನೇಮಕಾತಿ ವಿಚಾರ: ಉದ್ಯಮಿಗಳ ಆಕ್ರೋಶಕ್ಕೆ ಮಣಿದು ಹೆಜ್ಜೆ ಹಿಂದಿಟ್ಟರಾ ಸಿದ್ದರಾಮಯ್ಯ?