ಕನ್ನಡಿಗರಿಗೆ ಕಡ್ಡಾಯ ನೇಮಕಾತಿ ವಿಚಾರ: ಉದ್ಯಮಿಗಳ ಆಕ್ರೋಶಕ್ಕೆ ಮಣಿದು ಹೆಜ್ಜೆ ಹಿಂದಿಟ್ಟರಾ ಸಿದ್ದರಾಮಯ್ಯ?
ಉದ್ಯಮಿಗಳ ಆಕ್ರೋಶದ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಕನ್ನಡಿಗರಿಗೆ ಕಡ್ಡಾಯ ನೇಮಕಾತಿ ಬಗ್ಗೆಗಿನ ಟ್ವೀಟ್‌ನನ್ನು ಡಿಲೀಟ್ ಮಾಡಿದ್ರಾ ಎಂಬ ಪ್ರಶ್ನೆ ಇದೀಗ ಮೂಡಿದೆ.
ಕನ್ನಡಿಗರಿಗೆ ಕಡ್ಡಾಯ ನೇಮಕಾತಿ (Karnataka jobs reservation for Kannadigas) ಬಗ್ಗೆ ಸಿಎಂ ಮಾಡಿದ್ದ ಟ್ವೀಟ್ ಡಿಲೀಟ್ ಆಗಿದ್ದು, ಉದ್ಯಮಿಗಳ ಆಕ್ರೋಶದ ಬೆನ್ನಲ್ಲೇ ಟ್ವೀಟ್‌ನನ್ನು ಸಿಎಂ (Siddaramaiah) ಡಿಲೀಟ್ ಮಾಡಿದ್ದಾರೆ ಎನ್ನಲಾಗ್ತಿದೆ. ಕನ್ನಡಿಗರಿಗೆ ಸಿ ಮತ್ತು ಡಿ ದರ್ಜೆ ಹುದ್ದೆ ಶೇ.100 ರಷ್ಟು ಮೀಸಲು ಎಂದು ಸಿಎಂ ಹೇಳಿದ್ದರು. ಉದ್ಯಮಿಗಳ ಆಕ್ರೋಶಕ್ಕೆ(Businessmen) ಮಣಿದು ಸಿಎಂ ಒಂದು ಹೆಜ್ಜೆ ಹಿಂದಿಟ್ಟರಾ ಎಂಬ ಅನುಮಾನ ಇದೀಗ ಮೂಡಿದೆ. ಕಿರಣ್ ಮಜುಂದಾರ್ ಶಾ, ಮೋಹನ್ ದಾಸ್ ಪೈ ಇದಕ್ಕೆ ಆಕ್ರೋಶವನ್ನು ವ್ಯಕ್ತಪಡಿಸಿದ್ದರು. ಉದ್ಯಮಿಗಳ ಆಕ್ರೋಶದಿಂದ ಸಿಎಂ ಟ್ವೀಟ್ ಡಿಲೀಟ್ ಮಾಡಿದ್ದಾರೆ ಎನ್ನಲಾಗ್ತಿದೆ. ಖಾಸಗಿ ವಲಯದಲ್ಲಿ(Private Sector) ಕನ್ನಡಿಗರಿಗೆ ಉದ್ಯೋಗ ಮೀಸಲು ವಿಚಾರವಾಗಿ ಸಿಎಂ ನೇತೃತ್ವದ ಕಮಿಟಿಯಲ್ಲಿ ಚರ್ಚೆ ಆಗಿದೆ. ಕನ್ನಡಿಗರಿಗೆ ಮೀಸಲಾತಿ ನೀಡಿರೋದು ಸ್ವಾಗತಾರ್ಹ ಎಂದು ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ.
ಇದನ್ನೂ ವೀಕ್ಷಿಸಿ: ವಾಲ್ಮೀಕಿ ನಿಗಮ ಹಗರಣ: ಹಣದ ವರ್ಗಾವಣೆಯ ಮೂಲ ಹುಡುಕುತ್ತಿರುವ ತನಿಖಾ ತಂಡ!