ಏಷ್ಯಾನೆಟ್‌ ಸುವರ್ಣ ನ್ಯೂಸ್ ಬಿಗ್ EXCLUSIVE ಸುದ್ದಿ: ಬಿಟ್ ಕಾಯಿನ್ ಹಗರಣ..ಶ್ರೀಕಿಗೆ ಕೃಪಾಕಟಾಕ್ಷ..?

ಬಿಜೆಪಿ ಸರ್ಕಾರದ ಅವಧಿಯಲ್ಲಿ ಸದ್ದು ಮಾಡಿದ್ದ ಬಿಟ್‌ ಕಾಯಿನ್ ಹಗರಣ ಮರುಜೀವ ಪಡೆದಿದೆ. ಕಾಂಗ್ರೆಸ್ ಸರ್ಕಾರ ಆಕ್ರಮ ಬಯಲು ಮಾಡುತ್ತೆ ಅಂದುಕೊಂಡವರಿಗೆ ಶಾಕ್ ಆಗಿದೆ. ವಿಚಾರಣೆ ವೇಳೆ ಅಧಿಕಾರಿಗಳಿಗೇ ಆರೋಪಿ ಶ್ರೀಕಿ ಅವಾಜ್ ಹಾಕಿದ್ದನಂತೆ. ಸರ್ಕಾರವೇ ಆರೋಪಿ ರಕ್ಷಣೆಗೆ ನಿಂತಿದ್ಯಾ ಎಂಬ ಅನುಮಾನ ಮೂಡಿದ್ರೆ. ಇತ್ತ ಇನ್ಸ್‌ಪೆಕ್ಟರ್‌ಯೇ ಎಡಿಜಿಪಿಗೆ ಪತ್ರ ಬರೆದ್ದು, ಈ ಲೇಟರ್ ಸುವರ್ಣನ್ಯೂಸ್‌ಗೆ ಸಿಕ್ಕಿದೆ.
 

First Published Sep 7, 2023, 12:38 PM IST | Last Updated Sep 7, 2023, 12:38 PM IST

ಬಿಜೆಪಿ ಸರ್ಕಾರದ ಅವಧಿಯಲ್ಲಿ ಭಾರೀ ಸದ್ದು ಮಾಡಿದ್ದ ಬಿಟ್ ಕಾಯಿನ್(Bitcoin) ಹಗರಣ ಮತ್ತೆ ಮರುಜೀವ ಪಡೆದಿದೆ. ಹಗರಣ ಹಿಂದೆ ಯಾಱರು ಇದ್ದಾರೆ ಎಂದು ಖಾಕಿ ತನಿಖೆ ಮಾಡುತ್ತಿದೆ. ಇದರ ಮಧ್ಯೆಯೇ ಏಷ್ಯಾನೆಟ್ ಸುವರ್ಣನ್ಯೂಸ್ EXCLUSIVE ಸುದ್ದಿ ಬ್ರೇಕ್ ಮಾಡಿದ್ದು. ಆರೋಪಿ ಶ್ರೀಕಿಗೆ ಕಾಂಗ್ರೆಸ್(COngress)  ಸರ್ಕಾರದ ಅವಧಿಯಲ್ಲೂ ರಕ್ಷಣೆ ನೀಡಲಾಗ್ತಿದೆ ಎಂಬ ಆರೋಪ ಕೇಳಿ ಬಂದಿದೆ. ವಿಚಾರಣೆ ವೇಳೆ ಸತ್ಯ ಬಾಯಿಬಿಡಬೇಕಿದ್ದ ಆರೋಪಿಯೇ ಪೊಲೀಸರಿಗೆ ಅವಾಜ್ ಹಾಕಿದ್ದನಂತೆ. ಬಿಟ್ ಕಾಯಿನ್ ಹ್ಯಾಕರ್ ಶ್ರೀಕಿ ಅಲಿಯಾಸ್ ಶ್ರೀಕೃಷ್ಣನ(Srikrishna) ಪರ ರಾಜ್ಯ ಸರ್ಕಾರ ನಿಂತಿದ್ಯಾ ಎಂಬ ಪ್ರಶ್ನೆ ಕಾಡುತ್ತಿದೆ. ಈ ಹಿಂದೆ ವಿಚಾರಣೆ ನಡೆಸಿದ್ದ ಎಸ್‌ಐಟಿ ಅಧಿಕಾರಿಗಳೇ ಈ ಬಾರಿ ಮತ್ತೆ ತನಿಖೆ ಮಾಡುತ್ತಿದ್ದಾರೆ.ವಿಚಾರಣೆ ವೇಳೆ ಪೊಲೀಸ್ ಅಧಿಕಾರಿಗಳಿಗೆ ಶ್ರೀಕಿ ಬೆದರಿಕೆ ಹಾಕಿದ್ದು ಸ್ವತಹ ಇನ್ಸ್‌ಪೆಕ್ಟರ್ ಚಂದ್ರಧರ್ ಎಡಿಜಿಪಿಗೆ ಪತ್ರ ಬರೆದಿದ್ದಾರೆ..ಈ ಲೇಟರ್ ಸುವರ್ಣನ್ಯೂಸ್‌ಗೆ ಲಭ್ಯವಾಗಿದೆ.ಬಿಟ್ ಕಾಯಿನ್ ಹಗರಣ ಆಚೆ ಬರುತ್ತೆ..ಆರೋಪಿಗೆ ಶಿಕ್ಷೆ ಆಗುತ್ತೆ ಅಂತಾ ರಾಜ್ಯವೇ ಕಾಯ್ತಿದೆ. ಆದ್ರೆ ಇಲ್ಲಿ ಆರೋಪಿಗೆ ದೊಡ್ಡ ನಾಯಕರ ಕೃಪಕಟಾಕ್ಷ ಇದ್ದು ಕಾಂಗ್ರೆಸ್‌ ಸರ್ಕಾರವೂ ಕೂಡ ಶ್ರೀಕೃಷ್ಣನ ಪರವಾಗಿಯೇ ಇದ್ಯಾ ಎಂಬ ದೊಡ್ಡ ಅನುಮಾನ ಮೂಡಿದೆ.

ಇದನ್ನೂ ವೀಕ್ಷಿಸಿ:  ಉದಯನಿಧಿ ಸ್ಟಾಲಿನ್ ಸನಾತನ ಧರ್ಮದ ಬಗ್ಗೆ ಮೃದುವಾಗಿ ಮಾತನಾಡಿದ್ದಾರೆ: ಎ. ರಾಜಾ