Asianet Suvarna News Asianet Suvarna News

ನರ್ಸಿಂಗ್‌ ಕೋರ್ಸ್‌ ಸೇರಿ ಫೋನಲ್ಲಿ ಬಿಝಿಯಾದ ಪತ್ನಿ: ಸಾಯ್ತಿನಿ ಅಂತ ಹೆದ್ರಿಸಕ್ಕೆ ಹೋಗಿ ಸತ್ತೇ ಹೋದ ಪತಿ

 ಪತಿಯೊಬ್ಬ ಪತ್ನಿಗೆ ಸಾಯ್ತಿನಿ ಅಂತ ಹೆದರಿಸಲು ಹೋಗಿ ಸತ್ತೆ ಹೋದಂತಹ ಅನಾಹುತಕಾರಿ ಘಟನೆ ಬೆಂಗಳೂರಿನ ಬಾಗಲಗುಂಟೆ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. 

ಬೆಂಗಳೂರು: ಪತಿಯೊಬ್ಬ ಪತ್ನಿಗೆ ಸಾಯ್ತಿನಿ ಅಂತ ಹೆದರಿಸಲು ಹೋಗಿ ಸತ್ತೆ ಹೋದಂತಹ ಅನಾಹುತಕಾರಿ ಘಟನೆ ಬೆಂಗಳೂರಿನ ಬಾಗಲಗುಂಟೆ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮೃತ ಯುವಕನನ್ನು ಬಿಹಾರ ಮೂಲದ 28 ವರ್ಷದ ಅಮೀತ್ ಕುಮಾರ್ ಎಂದು ಗುರುತಿಸಲಾಗಿದೆ. 10 ವರ್ಷದ ಹಿಂದೆ ಬೆಂಗಳೂರಿಗೆ ಕೆಲಸ ಅರಸಿ ಬಂದಿದ್ದ ಅಮಿತ್ ಒಂದು ವರ್ಷದ ಹಿಂದೆ ಜಿಮ್ ಸಮೀಪವೇ ವಾಸವಾಗಿದ್ದ ಯುವತಿಯನ್ನು ಪ್ರೀತಿಸಿ ಪೋಷಕರ ವಿರೋಧದ ನಡುವೆಯೇ ವಿವಾಹವಾಗಿದ್ದರು. ಆದರೆ ಪತ್ನಿ ಇತ್ತೀಚೆಗೆ ನರ್ಸಿಂಗ್ ಕೋರ್ಸ್‌ಗೆ ಸೇರಿದ್ದು, ಪತಿಗೆ ಹೆಚ್ಚಿನ ಸಮಯ ನೀಡುತ್ತಿರಲಿಲ್ಲ ಎಂಬ ಆರೋಪವಿದ್ದು, ಫ್ರೆಂಡ್ಸ್ ಅಂತೇಳಿ ಸದಾ ಫೋನ್ ಕರೆಯಲ್ಲಿ ಇರುತ್ತಿದ್ದ ಪತ್ನಿ ಇರುತ್ತಿದ್ದು, ಇದರಿಂದಲೇ ಗಂಡ ಹೆಂಡತಿ ಮಧ್ಯೆ ವಿರಸವೇರ್ಪಟ್ಟಿದೆ. ಹೀಗಾಗಿ ಪತ್ನಿ ಪತಿಯನ್ನು ಬಿಟ್ಟು ದೂರ ವಾಸ ಮಾಡುತ್ತಿದ್ದಳು ಎನ್ನಲಾಗಿದೆ. ದೂರವಾದ ಪತ್ನಿಯನ್ನು ಮನೆಗೆ ಮರಳಿ ಬರುವಂತೆ ಪದೇ ಪದೇ ಕರೆ ಮಾಡಿ ಮನವಿ ಮಾಡ್ತಿದ್ದ ಆದರೆ ಆಕೆ ಮರಳಿ ಬಂದಿಲ್ಲ, ಈ ಹಿನ್ನೆಲೆಯಲ್ಲಿ ಪತಿ ಅಮಿತ್ ಪತ್ನಿಗೆ ಆತ್ಮಹತ್ಯೆ ಮಾಡುಕೊಳ್ಳುವೆ ಎಂದು ಹೆದರಿಸಲು ಮುಂದಾಗಿದ್ದಾನೆ. ಬಳಿಕ ವೀಡಿಯೋ ಕಾಲ್ ಮಾಡಿ ನೇಣು ಹಾಕಿಕೊಳ್ಳುವಂತೆ ಮಾಡಲು ಹೋಗಿದ್ದಾನೆ. ಆದರೆ ಕುಣಿಕೆ ನಿಜವಾಗಿಯೂ ಬಿಗಿಯಾಗಿದ್ದು, ಸಾವಿನ ನಾಟಕ ನಿಜವಾಗಿ ಹೋಗಿದೆ. ಬಾಗಲಗುಂಟೆ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.