ಭೀಮನಂಥ ಗಂಡನನ್ನು ಭೀಮನ ಅಮವಾಸ್ಯೆ ದಿನವೇ ಶಿವನ ಪಾದ ಸೇರಿಸಿದ್ಲು ಹೆಂಡ್ತಿ!

ಆತ ಭೀಮನಂಥ ಗಂಡ. ಹೆಸರು ಶಂಕರ. ನಾಲ್ಕು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದ. ಆದರೆ, ತನ್ನ ಸುಖ ಸಂಸಾರ ನಾಲ್ಕೇ ತಿಂಗಳಿಗೆ ಮುಗಿದು ಹೋಗುತ್ತೆ ಅಂತಾ ಕನಸು-ಮನಸಿನಲ್ಲೂ ಅಂದಾಜು ಮಾಡಿರಲಿಲ್ಲ.

Share this Video
  • FB
  • Linkdin
  • Whatsapp

ಬೆಳಗಾವಿ (ಜು.19): ಅವರಿಬ್ಬರೂ ಸಪ್ತಪದಿ ತುಳಿದು ಹೆಚ್ಚೆಂದರೆ ನಾಲ್ಕು ತಿಂಗಳಷ್ಟೇ ಆಗಿತ್ತು. ಆಶಾಢ ಮುಗಿಸಿ ಮನೆಗೆ ಬಂದಿದ್ದ ಹೆಂಡತಿ ಸಂಭ್ರಮದಿಂದ ಗಂಡನ ಪಾದಪೂಜೆ ಮಾಡಿದ್ದಳು. ಆದರೆ, ಪಾದಪೂಜೆಯ ಹಿಂದೆ ಕೊಲ್ಲುವ ಮಸಲತ್ತು ಇತ್ತು ಅನ್ನೋದು ಆತನಿಗೆ ಅರ್ಥವಾಗಿರಲೇ ಇಲ್ಲ.

ಬೆಳಗಾವಿ ಜಿಲ್ಲೆಯ ವಡೇರಹಟ್ಟಿ ಗ್ರಾಮದ ದೇವಸ್ಥಾನದಲ್ಲಿ ಪತ್ನಿಯ ಎದುರೇ ಗಂಡನ ಭೀಕರ ಹತ್ಯೆ ನಡೆದಿತ್ತು. ಈ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌ ನೀಡಿರುವ ಮೂಡಲಗಿ ಪೊಲೀಸರು ಪತ್ನಿಯನ್ನೇ ಬಂಧಿಸಿದ್ದಾರೆ. ಆಕೆ ತನ್ನ ಪ್ರಿಯಕರನ ಜೊತೆಗೂಡಿ ತನ್ನ ಪತಿಯನ್ನೇ ಕೊಂದಿದ್ದಳು ಎಂದು ಪೊಲೀಸರು ಸಾಕ್ಷ್ಯ ಸಂಪಾದಿಸಿದ್ದಾರೆ.

Belagavi Crime: 6ನೇ ತರಗತಿಯಿಂದಲೇ ಲವ್, ಪ್ರಿಯಕರನ ಜತೆ ಸೇರಿ ಭೀಮನ ಅಮವಾಸ್ಯೆ ದಿನ ಗಂಡನ ಕೊಂದ ಪತ್ನಿ!

ಸಾವು ಕಂಡ ವ್ಯಕ್ತಿಯನ್ನು ಶಂಕರ ಜಗಮತ್ತಿ ಎಂದು ಗುರುತಿಸಲಾಗಿದ್ದರೆ, ಪ್ರಿಯಾಂಕಾ ಜಗಮತ್ತಿ ಹಾಗೂ ಆಕೆಯ ಪ್ರಿಯಕರ ಶ್ರೀಧರ್‌ನನ್ನು ಬಂಧಿಸಲಾಗಿದೆ. ಶಂಕರ ಕುತ್ತಿಗೆಗೆ ಚಾಕು ಇರಿದು ಶ್ರೀಧರ್‌ ಕೊಲೆ ಮಾಡಿದ್ದ ಎನ್ನಲಾಗಿದೆ.

Related Video