
2.5 ಲಕ್ಷ ಸಂಬಳ, 1 ಕೋಟಿ ಸಾಲ: ಸುಳಿವೇ ಇಲ್ಲದ ಟೆಕ್ಕಿ ಮರ್ಡರ್ ಕೇಸ್ ಟ್ರೇಸ್ ಆಗಿದ್ದೇ ರೋಚಕ!
ತಿಂಗಳಿಗೆ ಲಕ್ಷಗಟ್ಟಲೆ ಸಂಬಳ ಪಡೆಯುತ್ತಿದ್ದ ಸಾಫ್ಟ್‌ವೇರ್ ಇಂಜಿನಿಯರ್ ಶ್ರೀನಾಥ್, ಅಣ್ಣನ ಮನೆಗೆ ಹೋಗಿ ನಿಗೂಢವಾಗಿ ಕಣ್ಮರೆಯಾಗುತ್ತಾನೆ. ಪೊಲೀಸರ ತನಿಖೆಯಿಂದ, ಹಣಕಾಸಿನ ವಿಚಾರಕ್ಕೆ ಸ್ವಂತ ಅಣ್ಣನೇ ತಮ್ಮನನ್ನು ಕೊಂದು ಮನೆಯಲ್ಲಿ ಹೂತಿಟ್ಟಿದ್ದ ಭಯಾನಕ ಸತ್ಯ ಬಯಲಾಗುತ್ತದೆ.
ಆತ ಸಾಫ್ಟ್‌ವೇರ್ ಕಂಪನಿಯ ಉದ್ಯೋಗಿ.. ತಿಂಗಳಿಗೆ ಎರಡುವರೆ ಲಕ್ಷ ಸಂಬಳ.. ಮನೆಯಲ್ಲಿ ಮುದ್ದಾದ ಹೆಂಡತಿ ಮತ್ತು ಮೂರು ವರ್ಷದ ಮಗು... ಎಲ್ಲವೂ ಚೆನ್ನಾಗಿತ್ತು.. ಬರೋ ಸಂಬಳವನ್ನ ನಂಬಿಕೊಂಡು ಕೋಟಿ ರೂಪಾಯಿ ಸಾಲ ಮಾಡಿಕೊಂಡು ಸೈಟು ಮನೆ ಖರೀದಿಸಿದ್ದ... ಆದ್ರೆ ಆವತ್ತೊಂದು ದಿನ ಅಣ್ಣನನ್ನ ನೋಡಿಕೊಂಡು ಬರ್ತೀನಿ ಅಂತ ಹೋದವನು ವಾಪಸ್ ಬರೋದೇ ಇಲ್ಲ.. ಹೆಂಡತಿ ಹುಡುಕಬಾರದ ಜಾಗದಲ್ಲೆಲ್ಲಾ ಹುಡುಕಿದ್ಲು.. ಆತನ ಅಣ್ಣನನ್ನ ಕೇಳಿದ್ರೆ ನನಗೆ ಗೊತ್ತೇ ಇಲ್ಲ ಅಂದಿದ್ದ.. ನೆಂಟರು, ಸಂಬಂಧಿಕರನ್ನೆಲ್ಲಾ ಕೇಳಿದ್ಲು ಬಟ್ ಗಂಡನ ಸಣ್ಣ ಸುಳಿವು ಸಿಗೋದಿಲ್ಲ.