ಕ್ಲಬ್‌ಹೌಸ್‌ನಲ್ಲಿ ಪಾಕ್‌ ಪ್ರೇಮ: ಪ್ರಕರಣ ದಾಖಲಿಸಿ ಕಿಡಿಗೇಡಿಗಳ ಬೇಟೆಗೆ ಮುಂದಾದ ಪೊಲೀಸರು

ಪಾಕಿಸ್ತಾನದ ರಾಷ್ಟ್ರಗೀತೆ ಹಾಕಿ, ಪಾಕ್‌ ಪರ ಪ್ರೇಮದ ಜತೆಗೆ ಭಾರತದ ಪರ ಧ್ವೇಷವನ್ನ ವ್ಯಕ್ತಪಡಿಸಿದ್ದ ಕಿಡಿಗೇಡಿಗಳ ವಿರುದ್ಧ ಎಫ್‌ಐಆರ್‌ 

Share this Video
  • FB
  • Linkdin
  • Whatsapp

ಬೆಂಗಳೂರು(ಆ.18): ಸಾಮಾಜಿಕ ಜಾಲತಾಣ ಕ್ಲಬ್‌ ಹೌಸ್‌ನಲ್ಲಿ ಪಾಕ್‌ ಧ್ವಜದ ಡಿಪಿ, ಪಾಕಿಸ್ತಾನ ರಾಷ್ಟ್ರಗೀತೆ ಪ್ಲೇ ಪ್ರಕರಣದ ವರದಿ ಏಷ್ಯಾನೆಟ್‌ ಸುವರ್ಣ ನ್ಯೂಸ್‌ನಲ್ಲಿ ಬಿತ್ತರವಾದ ಬಳಿಕ ಪೊಲೀಸ್‌ ಇಲಾಖೆ ಎಚ್ಚೆತ್ತುಕೊಂಡಿದೆ. ಕೊನೆಗೂ ಕಿಡಿಗೇಡಿಗಳ ವಿರುದ್ಧ ಎಫ್‌ಐಆರ್‌ ದಾಖಲಿಸಿದೆ. ಪಾಕ್‌ ಪ್ರೇಮಿಗಳ ವಿರುದ್ಧ ಸಂಪಿಗೆಹಳ್ಳಿ ಠಾಣೆಯಲ್ಲಿ ಸುಮೋಟೋ ಕೇಸ್‌ ದಾಖಲಾಗಿದೆ. ಪಾಕಿಸ್ತಾನದ ರಾಷ್ಟ್ರಗೀತೆಯನ್ನ ಹಾಕಿ, ಪಾಕ್‌ ಪರ ಪ್ರೇಮದ ಜತೆಗೆ ಭಾರತದ ಪರ ಧ್ವೇಷವನ್ನ ವ್ಯಕ್ತಪಡಿಸಿದ್ದರು. ಇಂತಹ ಕಿಡಿಗೇಡಿಗಳ ವಿರುದ್ಧ ಯಾಕೆ ಕ್ರಮ ಇಲ್ಲ, ಯಾಕೆ ಕೇಸ್‌ ದಾಖಲಾಗಿಲಗಲ ಅಂತ ಏಷ್ಯಾನೆಟ್‌ ಸುವರ್ಣ ನ್ಯೂಸ್‌ ವರದಿ ಮಾಡಿತ್ತು. 

ಶಾಲೆಗಳಲ್ಲಿ ಹಿಜಾಬ್‌ ಬಳಿಕ ಗಣೇಶೋತ್ಸವ ವಿವಾದ: ಈದ್‌ ಮಿಲಾದ್‌ ಕೂಡ ನಡೆಯಲಿ ಎಂದ ವಕ್ಫ್‌ ಬೋರ್ಡ್

Related Video