ಶಾಲೆಗಳಲ್ಲಿ ಹಿಜಾಬ್‌ ಬಳಿಕ ಗಣೇಶೋತ್ಸವ ವಿವಾದ: ಈದ್‌ ಮಿಲಾದ್‌ ಕೂಡ ನಡೆಯಲಿ ಎಂದ ವಕ್ಫ್‌ ಬೋರ್ಡ್

ಶಾಲೆಗಳಲ್ಲಿ ಗಣೇಶನ ಕೂರಿಸುವುದಕ್ಕೆ ಮೌಖಿಕ ಅನುಮತಿ ನೀಡಿದ ಶಿಕ್ಷಣ ಇಲಾಖೆ, ಶಿಕ್ಷಣ ಸಚಿವರ ನಡೆಗೆ ಕ್ಯಾಂಪಸ್‌ ಫ್ರಂಟ್‌ ಆಫ್‌ ಇಂಡಿಯಾ ಅಸಮಾಧಾನ

Share this Video
  • FB
  • Linkdin
  • Whatsapp

ಬೆಂಗಳೂರು(ಆ.18):  ರಾಜ್ಯದಲ್ಲಿ ಹಿಜಾಬ್‌ ಬಳಿಕ ಶಾಲೆಗಳಲ್ಲಿ ಗೌರಿ ಗಣೇಶ ದಂಗಲ್‌ ಶುರುವಾಗುತ್ತಾ? ಎಂಬ ಪ್ರಶ್ನೆಗಳು ಇದೀಗ ಎದ್ದಿವೆ. ಹೌದು, ಶಾಲೆಗಳಲ್ಲಿ ಗಣೇಶನ ಕೂರಿಸುವುದಕ್ಕೆ ಶಿಕ್ಷಣ ಇಲಾಖೆ ಮೌಖಿಕ ಅನುಮತಿ ನೀಡಿದೆ. ಶಿಕ್ಷಣ ಸಚಿವರ ನಡೆಗೆ ಕ್ಯಾಂಪಸ್‌ ಫ್ರಂಟ್‌ ಆಫ್‌ ಇಂಡಿಯಾ ಅಸಮಾಧಾನ ವ್ಯಕ್ತಪಡಿಸಿದೆ. ಸಚಿವ ಬಿ.ಸಿ. ನಾಗೇಶ್‌ ಹೇಳಿಕೆಗೆ ವಕ್ಫ್‌ ಬೋರ್ಡ್‌ ಪರೋಕ್ಷವಾಗಿ ಟಾಂಗ್‌ ಕೊಟ್ಟಿದೆ. ಶಿಕ್ಷಣ ಸಚಿವರ ತೀರ್ಮಾನವನ್ನ ಸ್ವಾಗತಿಸುತ್ತೇವೆ, ಜತೆಗೆ ಶಿಕ್ಷಣ ಇಲಾಖೆಗೆ ಕೆಲವು ಬೇಡಿಕೆಗಳನ್ನ ಇಟ್ಟಿದೆ. ನಮ್ಮ ಧಾರ್ಮಿಕ ಅಚರಣೆಗಳಿಗೂ, ಹಬ್ಬಗಳ ಆಚರಣೆಗೂ ಅವಕಾಶ ಮಾಡಿಕೊಡಬೇಕು, ಶಾಲೆಗಳಲ್ಲಿ ಈದ್‌ಮಿಲಾದ್‌ ಆಚರಣೆಗೂ ಅವಕಾಶ ಕೊಡಬೇಕು, ನಮಾಜ್‌ಗೆ ಪ್ರತ್ಯೇಕ ಕೊಠಡಿ ಮೀಸಲಿಡುವಂತೆ ವಕ್ಫ್‌ ಬೋರ್ಡ್‌ ಮನವಿ ಮಾಡಿದೆ. 

ಕೊರೋನಾ ಬಳಿಕ ಮೊದಲ ಬಾರಿಗೆ ಗಣೇಶೋತ್ಸವ ಸಂಭ್ರಮ: ಸರ್ಕಾರದ ನಡೆಗೆ ಗಣೇಶ ಸಮಿತಿ ಅಸಮಾಧಾನ

Related Video