Asianet Suvarna News Asianet Suvarna News

1989ರಲ್ಲಿ ಖಾಲಿ ಕೈಯಲ್ಲಿ ಬಂದಿದ್ದ ಶಂಕರ್ ಇಷ್ಟೊಂದು ಆಸ್ತಿ ಸಂಪಾದಿಸಿದ್ದು ಹೇಗೆ?

Sep 19, 2021, 5:18 PM IST

ಬೆಂಗಳೂರು (ಸೆ. 19):   ಬೆಂಗಳೂರಿನ ಆತ್ಮಹತ್ಯೆ ಕೇಸ್ ಗೆ ಈಗ ದೊಡ್ಡ ಟ್ವಿಸ್ಟ್ ಸಿಕ್ಕಿದೆ. ಮನೆಯಲ್ಲಿ ಸಿಕ್ಕಿರುವ ಮೂರು ಡೆತ್ ನೋಟ್ ಗಳು ಅನೇಕ ಪ್ರಶ್ನೆಗಳನ್ನು ಎತ್ತಿವೆ. ಮಕ್ಕಳು ಪ್ರತ್ಯೇಕವಾಗಿ ಡೆತ್ ನೋಟ್ ಬರೆದಿಟ್ಟಿದ್ದಾರೆ. ಇನ್ನೊಂದು ಕಡೆ ಶಂಕರ್ ಆಸ್ತಿ ಸಂಪಾದನೆ ಬಗ್ಗೆಯೂ ಅನುಮಾನ ವ್ಯಕ್ತವಾಗಿದೆ.

ಮಾಸ್ ಸುಸೈಡ್‌ನಲ್ಲಿ ಬಿಗ್ ಟ್ವಿಸ್ಟ್;  ಮಹಿಳೆಯರ ಮೇಲೆ ದೌರ್ಜನ್ಯ.. ಅನೈತಿಕ ಸಂಬಂಧ! 

ಶಂಕರ್ ಬಗ್ಗೆ ಹಲವು ಅನುಮಾನ ಎದ್ದಿದೆ. 1989ರಲ್ಲಿ ಖಾಲಿ ಕೈಯಲ್ಲಿ ಬೆಂಗಳೂರಿಗೆ ಬಂದಿದ್ದ ಶಂಕರ್  ಮೊದಲಲು ಅಬಕಾರಿ ಸಿಬ್ಬಂದಿಯಾಗಿದ್ದರು.  ಫಸ್ಟ್ ಬೆಂಗಳೂರಲ್ಲಿ ಬಾರ್ ವೊಂದನ್ನ ಓಪನ್ ಮಾಡಿಕೊಂಡು ಜೀವನ ನಡೆಸುತ್ತಿದ್ದರು.  ನಂತರ 1999ರಲ್ಲಿ ಪತ್ರಿಕೆ ಕೆಲಸ ಶುರು ಮಾಡಿದ್ದರು.  ನಂತರ ಅಬಕಾರಿ ನ್ಯೂಸ್ ಎಂಬ ಪತ್ರಿಕೆ ಪ್ರಾರಂಭಿಸಿದರು.  2017ರಲ್ಲಿ ಬಂಗಲೆಗೆ ಎಂಟ್ರಿ ಕೊಟ್ಟಿದ್ದರು. ಹಾಗಾಗಿ ಈಗ ಮನೆಯನ್ನು ಮಹಜರ್ ಮಾಡಲಾಗಿದ್ದು ದಾಖಲೆ ಕಲೆಹಾಕಲಾಗಿದೆ.