Asianet Suvarna News Asianet Suvarna News

ಪತ್ನಿ, ಮಗನಿಂದಲೇ ಕುಟುಂಬ ಸರ್ವನಾಶ ಎಂದ ಶಂಕರ್, ಡೆತ್‌ನೋಟ್ ಹೇಳುವುದೇ ಬೇರೆ ಕತೆ!

Sep 19, 2021, 5:04 PM IST

ಬೆಂಗಳೂರು (ಸೆ. 19): ನನ್ನ ಕುಟುಂಬದ ಮಹಾ ದುರಂತಕ್ಕೆ ಪತ್ನಿ ಹಾಗೂ ಮಗನೇ ಕಾರಣ ಎಂದು ಆರೋಪಿಸಿ ಶಂಕರ್‌ ಬ್ಯಾಡರಹಳ್ಳಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಮಾಸ್ ಸುಸೈಡ್‌ನಲ್ಲಿ ಬಿಗ್ ಟ್ವಿಸ್ಟ್‌; ಮಹಿಳೆಯರ ಮೇಲೆ ದೌರ್ಜನ್ಯ.. ಅನೈತಿಕ ಸಂಬಂಧ!

ನನ್ನ ಮೂವರು ಮಕ್ಕಳು ವಿದ್ಯಾವಂತರು. ಸಣ್ಣಪುಟ್ಟವಿಚಾರಗಳಿಗೂ ಕೌಟುಂಬಿಕ ಕಲಹ ನಡೆಯುತ್ತಿತ್ತು. ಅವೆರಲ್ಲ ಸಮಾಧಾನದಿಂದ ವರ್ತಿಸಿದ್ದರೆ ಈ ಅನಾಹುತ ತಪ್ಪಿಸಬಹುದಿತ್ತು. ನನ್ನ ಪತ್ನಿ ಭಾರತಿ ಹಾಗೂ ಮಗ ಮಧು ಸಾಗರ್‌ ಪ್ರಚೋದನೆಗೊಳಗಾಗಿ ಎಲ್ಲರೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಘಟನೆಯಲ್ಲಿ ನನ್ನ ಬೀಗರು ಹಾಗೂ ಅಳಿಯಂದಿರ ಪಾತ್ರವಿಲ್ಲ. ಇದಕ್ಕೆ ಪತ್ನಿ ಹಾಗೂ ಮಗನೇ ಕಾರಣ ಹೊರತು ಮತ್ಯಾರು ಅಲ್ಲ ಎಂದು ಶಂಕರ್‌ ಹೇಳಿದ್ಧಾರೆ. ಆದರೆ ಮನೆಯಲ್ಲಿ ಸಿಕ್ಕ ಡೆತ್‌ನೋಟ್‌ ಬೇರೆಯ ಕಥೆಯನ್ನು ಹೇಳುತ್ತದೆ. ಶಂಕರ್ ಬಗ್ಗೆ ಡೆತ್‌ನೋಟ್‌ನಲ್ಲಿ ದೂರಲಾಗಿದೆ.