
ಜಯನಗರದ ₹5 ಕೋಟಿ ಸೈಟಿನ ಮಾಲೀಕನನ್ನು ಅನಾಥ ಶವ ಮಾಡಿದ ರಿಯಲ್ ಎಸ್ಟೇಟ್ ಮಾಫಿಯಾ!
ಬೆಂಗಳೂರಿನ ಜಯನಗರದಲ್ಲಿ 5 ಕೋಟಿ ರೂ. ಮೌಲ್ಯದ ಆಸ್ತಿಯ ಮಾಲೀಕ ನಾಪತ್ತೆಯಾಗಿದ್ದು, ರಿಯಲ್ ಎಸ್ಟೇಟ್ ಮಾಫಿಯಾ ಕೈವಾಡ ಇರುವುದಾಗಿ ಶಂಕಿಸಲಾಗಿದೆ. ಮನೆ ನೆಲಸಮಗೊಂಡು, ಆತನ ಸಂಬಂಧಿಕರು ಹೇಬಿಯಸ್ ಕಾರ್ಪಸ್ ಮೊರೆ ಹೋಗಿದ್ದಾರೆ.
ಬೆಂಗಳೂರಿನ ಪ್ರತಿಷ್ಠಿತ ಏರಿಯಾ ಜಯನಗರದ 7ನೇ ಹಂತದಲ್ಲಿ ಸುಮಾರು 5 ಕೋಟಿ ರೂ. ಮೌಲ್ಯದ ನಿವೇಶನ ಹೊಂದಿದ್ದ ಇವನಿಗೆ ಯಾರೂ ದಿಕ್ಕು ಇರಲಿಲ್ಲ. ಆತನಿಗೆ ಹಿಂದೆ ಮುಂದೆ ಯಾರೂ ಇಲ್ಲ. ಒಂಟಿಯಾಗಿ ಬೆಂಗಳೂರಿನ ಪ್ರತಿಷ್ಠಿತ ಏರಿಯಾದಲ್ಲಿ ವಾಸ ಮಾಡ್ತಿದ್ದನು. ಅಪ್ಪ ಮಾಡಿಟ್ಟಿದ್ದ ಮನೆಯೇ ಅವನಿಗೆ ಆಸ್ತಿಯಾಗಿತ್ತು. ಅದು ಕಮ್ಮಿ ಇಲ್ಲಾಂದ್ರೂ 4-5 ಕೋಟಿ ರೂ. ಬೆಲೆ ಬಾಳುತ್ತಿತ್ತು. ಆದ್ರೆ ಆವತ್ತೊಂದು ದಿನ ಅತ ಇದ್ದಕ್ಕಿದ್ದಂತೆ ಮಿಸ್ಸಿಂಗ್ ಆಗಿಬಿಟ್ಟಿದ್ದ. ಆತನ ಸಂಬಂದಿಕರು ಏನಕ್ಕೋ ಬೆಂಗಳೂರಿಗೆ ಬಂದವರು ಇವನ ಮನೆಗೆ ಬಂದಿದ್ದಾರೆ. ಆದರೆ ಅಷ್ಟರಲ್ಲೇ ಆ ಮನೆ ನೆಲಸಮವಾಗಿತ್ತು. ಅವನು ನಾಪತ್ತೆಯಾಗಿದ್ದ. ಪೊಲೀಸ್ ಕಂಪ್ಲೆಂಟ್ ಕೊಟ್ಟರೂ ನೋ ಯೂಸ್. ಕೊನೆಗೆ ಹೇಬಿಯಸ್ ಕಾರ್ಪಸ್ ಮೊರೆ ಹೋಗಿದ್ದಾರೆ. ಆಗಲೇ ನೋಡಿ ಪೊಲೀಸರ ರಿಯಲ್ ಇನ್ವೆಸ್ಟಿಗೇಷನ್ ಶುರುವಾಗೋದು.
ಇನ್ನು ಸೈಟಿನ ಮಾಲೀಕ ಆನಂದ್‌ಗೆ 44 ವರ್ಷ. ಆತನಿಗೆ ಮದುವೆ ಮಕ್ಕಳು ಯಾರೂ ಇರಲಿಲ್ಲ. ಅಪ್ಪ, ಅಮ್ಮ ವೈದ್ಯರಾಗಿದ್ದರೂ ಮಗನಿಗಾಗಿ ಆಸ್ತಿ ಮಾಡಿಟ್ಟು ವಯೋಸಹಜ ಕಾಯಿಲೆಯಿಂದ ಸತ್ತು ಹೋಗಿದ್ದರು. ಅಕ್ಕನಿಗೆ ಮದುವೆ ಮಾಡಿ ಕೊಟ್ಟಿದ್ದರೂ, ಅಕಾಲಿಕ ಮರಣ ಹೊಂದಿದ್ದರು. ಆಗ ಕೆಲಸಕ್ಕೂ ಹೋದ ಆನಂದ್ ಮನೆ ಹಾಗೂ ಸೈಟ್ ಮಾರಾಟಕ್ಕೆ ಮುಂದಾಗುತ್ತಾನೆ. ಆಗಲೇ ನೋಡಿ ಆನಂದನ ಗೆಳೆತನ ಮಾಡಿಕೊಂಡ ರಿಯಲ್ ಎಸ್ಟೇಟ್ ಮಾಫಿಯಾ ಗ್ಯಾಂಗ್‌ನ ಮೂವರು ಆನಂದನ ಸೈಟನ್ನು ಬೇಕಾಬಿಟ್ಟಿ ಬೆಲೆಗೆ ಮಾರಾಟಕ್ಕೆ ಒಪ್ಪಿಸುತ್ತಾರೆ.
ಇದನ್ನೂ ಓದಿ: ₹5 ಕೋಟಿ ಮೌಲ್ಯದ ಸೈಟಿನ ಒಡೆಯನನ್ನು ಫ್ರೆಂಡ್‌ಶಿಪ್ ಹೆಸರಲ್ಲಿ ಕೊಲೆಗೈದ ರಿಯಲ್ ಎಸ್ಟೇಟ್ ಉದ್ಯಮಿಗಳು!
ಆತನಿಂದ ಎಲ್ಲ ಸಹಿ ಪಡೆದು ಕಾಗದ ಪತ್ರಗಳನ್ನು ಸಲೀಸಾಗಿ ಕಾನೂನು ಪ್ರಕಾರ ಬೇರೆಯವರ ಹೆಸರಿಗೆ ಮಾಡಿಸುತ್ತಾರೆ. ಆಗ ಅಡ್ವಾನ್ಸ್ ಆಗಿ ಕೊಟ್ಟ 45 ಲಕ್ಷ ಹಣವನ್ನು ಆನಂದನಿಗೆ ಕೊಡದೇ ಒಂದು ತಿಂಗಳು ಟ್ರಿಪ್‌ಗೆ ಕರೆದುಕೊಂಡು ಹೋಗುತ್ತಾರೆ. ಅವನು ಟ್ರಿಪ್‌ಗೆ ಹೋಗುತ್ತಿದ್ದಂತೆ ಇಲ್ಲಿ ಮನೆ ನೆಲಸಮ ಮಾಡಿಸಿದ್ದಾರೆ. ಆಗ ಆನಂದ್ ತಾನು ಮನೆಗೆ ಹೋಗಲೇಬೇಕು ಎಂದು ಹಠ ಮಾಡಿದಾಗ ಮೈಸೂರಿನಿಂದ ಬೆಂಗಳೂರಿಗೆ ರಾತ್ರಿ 2 ಗಂಟೆ ಸುಮಾರಿ ಕಾರಿನಲ್ಲಿ ಕರೆದುಕೊಂಡು ಬಂದ ಸ್ನೇಹಿತರು ಆತನನ್ನು ಕೊಲೆ ಮಾಡಿ ಕಾವೇರಿ ನದಿಗೆ ಎಸೆದು ಬರುತ್ತಾರೆ. ಆದರೆ. ಪೊಲೀಸರು ಶವ ನೋಡಿ ಅನಾಥ ಶವವೆಂದು ಹೂತು ಮಣ್ಣು ಮಾಡಿಬಿಡುತ್ತಾರೆ. ಮುಂದೆ ಏನಾಯ್ತು ಒಮ್ಮೆ ನೀವೇ ನೋಡಿ...