Asianet Suvarna News Asianet Suvarna News

'ಮುದ್ದು ಸರೋಜಾ ವದ್ದು ಸರೋಜಾ..' ಅಂದ್ಕೊಂಡು ಹೋದ ಡಾಬಾ ಹುಡ್ಗ ನಡುರಸ್ತೆಯಲ್ಲೇ ಹೆಣವಾದ!

ಡಾಬಾ ಮಾಲೀಕನ ಜೊತೆ ಬಟ್ಟೆ ಅಂಗಡಿಯ ಆಂಟಿಯ ಲವ್ವಿಡವ್ವಿ ಕಥೆ ಇದು. ತೆಗೆದುಕೊಂಡ ಸಾಲವನ್ನು ವಾಪಾಸ್‌ ಕೇಳಿದಾಗ ರಾಂಗ್‌ ಆಗಿದ್ದ ಆಂಟಿ, ಆತನನ್ನೇ ಸಾಯಿಸೋಕೆ ತೀರ್ಮಾನ ಮಾಡಿದ್ಲು. ಅಷ್ಟಕ್ಕೂ ಅವನನ್ನು ಎಷ್ಟು ಭೀಕರವಾಗಿ ಹತ್ಯೆ ಮಾಡಿದ್ದರೆಂದರೆ, ಮುಖದ ಮೇಲೆ 20 ಬಾರಿ ಕಲ್ಲು ಎತ್ತುಹಾಕಿದ್ದರು.
 

ಬೆಂಗಳೂರು (ಡಿ. 9): ಆತ ಡಾಬಾ ಓನರ್. ಬಾಗಲಕೋಟೆಯ ಬಾದಾಮಿಯಲ್ಲಿ ತನ್ನ ವ್ಯವಹಾರ ನೋಡಿಕೊಂಡು ಹಾಯಾಗಿದ್ದ. ಇನ್ನೂ ಜಸ್ಟ್ 21 ವರ್ಷ ಅಷ್ಟೇ. ಚಿಕ್ಕವಯಸ್ಸಿನಲ್ಲೇ ತನ್ನ ಕಾಲ ಮೇಲೆ ತಾನು ನಿಂತಿದ್ದ. ಆದರೆ, ಬಾದಾಮಿಯಲ್ಲಿ ಡಾಬಾ ನೋಡಿಕೊಂಡಿದ್ದ ಆತ ಆವತ್ತು ಇದ್ದಕ್ಕಿದಂತೆ ಮರ್ಡರ್ ಆಗಿ ಹೋಗಿದ್ದ. ಅದೂ ಕೂಡ ಬೆಂಗಳೂರಿನಲ್ಲಿ. 
ಬೆಂಗಳೂರಿಗೂ ಈ ಡಾಬಾ ಮಾಲೀಕನಿಗೂ ಲಿಂಕೇ ಇದ್ದಿರಲಿಲ್ಲ. ಆದರೂ, ಬೆಂಗಳೂರಿನ ನಟ್ಟ ನಡುರಸ್ತೆಯಲ್ಲಿ ಬರ್ಬರವಾಗಿ ಕೊಲೆಯಾಗಿದ್ದ. ಇದೇ ಕೊಲೆಯ ಬೆನ್ನುಬಿದ್ದ  ಪೊಲೀಸರಿಗೆ ಬೆಚ್ಚಿ ಬೀಳೀಸುವ ವಿಷಯಗಳು ಸಿಗುತ್ತಾ ಹೋದವು.

ಇನ್ನು ಯುವಕ 21 ವಯಸ್ಸಿಗಾಗಲೇ ಎರಡೆರಡು ಕೇಸ್‌ಗಳನ್ನ ಮಾಡಿಕೊಂಡಿದ್ದ. ಬಾದಾಮಿಯಲ್ಲಿ ಡಾಬಾ ಇಟ್ಟುಕೊಂಡಿದ್ದ ಮಂಜುನಾಥ ಅಲ್ಲೇ ಒಂದು ಕೇಸ್ನಲ್ಲಿ ಫಿಟ್ ಆದ್ರೆ ದಾವಣಗೆರೆಯಲ್ಲಿ ಒಂದು ಕೇಸ್ ಇವನ ಮೇಲೆ ಬುಕ್ ಆಗಿತ್ತು. ಆದ್ರೆ ಅಲ್ಲಿ ಹವಾ ಮೆಂಟೇನ್ ಮಾಡ್ತಿದ್ದವನು ಬೆಂಗಳೂರಿನಲ್ಲಿ ಹಂತಕರ ಕೈಗೆ ಲಾಕ್ ಆಗಿದ್ದರ ಬಗ್ಗೆ ಪೊಲೀಸರಿಗೆ ಮಾಹಿತಿ ಬೇಕಿತ್ತು. 

Bengaluru: 20 ಬಾರಿ ಕಲ್ಲು ಎತ್ತಿಹಾಕಿ ಯುವಕನ ಭೀಕರ ಹತ್ಯೆ: 6 ಮಂದಿ ಬಂಧನ

ಪೊಲೀಸರಿಗೆ ಸಿಕ್ಕ ಸಿಸಿಟಿವಿ ದೃಶ್ಯಗಳು ಬೆಚ್ಚಿ ಬೀಳೀಸಿದ್ವು. ಅದೇ ದೃಶ್ಯಗಳಿಂದ ಪೊಲೀಸರಿಗೆ ಗೊತ್ತಾಗಿದ್ದು ಮಂಜುನಾಥನ ಕೊಲೆಯಲ್ಲಿ ಮೂರು ಹೆಂಗಸರು ಇದ್ದಾರೆ ಅನ್ನೋದು. ಅಷ್ಟೇ ಅಲ್ಲ ಈ ಕೊಲೆ ರಿವೇಂಜ್‌ಗಾಗಿಯೇ ನಡೆದಿರಬಹುದು ಅನ್ನೋ ತೀರ್ಮಾನಕ್ಕೆ ಪೊಲೀಸರು ಬರ್ತಾರೆ.