Asianet Suvarna News Asianet Suvarna News

Bengaluru: 20 ಬಾರಿ ಕಲ್ಲು ಎತ್ತಿಹಾಕಿ ಯುವಕನ ಭೀಕರ ಹತ್ಯೆ: 6 ಮಂದಿ ಬಂಧನ

ತಡರಾತ್ರಿ ನಡು ರಸ್ತೆಯಲ್ಲಿ ಗುಂಪೊಂದು ಯುವಕನೊಬ್ಬನ ಮುಖದ ಮೇಲೆ 20 ಬಾರಿ ಕಲ್ಲು ಎತ್ತಿ ಹಾಕಿ ಗುರುತು ಸಿಗದಂತೆ ಬರ್ಬರವಾಗಿ ಹತ್ಯೆ ಮಾಡಿದ್ದ ಪ್ರಕರಣ ಭೇದಿಸಿರುವ ಕೆ.ಪಿ.ಅಗ್ರಹಾರ ಠಾಣೆ ಪೊಲೀಸರು, ಇಬ್ಬರು ಮಹಿಳೆಯರು ಸೇರಿ ಆರು ಮಂದಿಯನ್ನು ಬಂಧಿಸಿದ್ದಾರೆ. 

arrest of the accused who killed the youth by throwing a stone on his face gvd
Author
First Published Dec 7, 2022, 7:06 AM IST

ಬೆಂಗಳೂರು (ಡಿ.07): ತಡರಾತ್ರಿ ನಡು ರಸ್ತೆಯಲ್ಲಿ ಗುಂಪೊಂದು ಯುವಕನೊಬ್ಬನ ಮುಖದ ಮೇಲೆ 20 ಬಾರಿ ಕಲ್ಲು ಎತ್ತಿ ಹಾಕಿ ಗುರುತು ಸಿಗದಂತೆ ಬರ್ಬರವಾಗಿ ಹತ್ಯೆ ಮಾಡಿದ್ದ ಪ್ರಕರಣ ಭೇದಿಸಿರುವ ಕೆ.ಪಿ.ಅಗ್ರಹಾರ ಠಾಣೆ ಪೊಲೀಸರು, ಇಬ್ಬರು ಮಹಿಳೆಯರು ಸೇರಿ ಆರು ಮಂದಿಯನ್ನು ಬಂಧಿಸಿದ್ದಾರೆ. ವಿಜಯಪುರ ಮೂಲದ ಪ್ರೇಮವ್ವ, ಅಕ್ಕಮಹಾದೇವಿ, ಮಂಜುನಾಥ, ಕಿರಣ್‌, ಚನ್ನಪ್ಪ, ಕಾಶಿನಾಥ್‌ ಬಂಧಿತರು. ಪ್ರಕರಣದ ಪ್ರಮುಖ ಆರೋಪಿ ಸರೋಜಾ ಎಂಬಾಕೆ ತಲೆಮರೆಸಿಕೊಂಡಿದ್ದು ಬಂಧನಕ್ಕೆ ಬಲೆ ಬೀಸಲಾಗಿದೆ. 

ಆರೋಪಿಗಳು ಡಿ.4ರ ಮುಂಜಾನೆ 1.45ರ ಸುಮಾರಿಗೆ ವಿಜಯಪುರ ಮೂಲದ ಮಂಜುನಾಥ ಬಾಳಪ್ಪ ಜಮಖಂಡಿ (21) ಎಂಬಾತನನ್ನು ಕೆ.ಪಿ.ಅಗ್ರಹಾರ 5ನೇ ಕ್ರಾಸ್‌ನಲ್ಲಿ ಭೀಕರವಾಗಿ ಕೊಲೆ ಮಾಡಿ ಪರಾರಿಯಾಗಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೊಲೆಯಾದ ಮಂಜುನಾಥ ಜಮಖಂಡಿ ಮತ್ತು ಆರೋಪಿ ಸರೋಜಾ ನಡುವೆ ಸಂಬಂಧ ಸರಿಯಿರಲಿಲ್ಲ ಎನ್ನಲಾಗಿದೆ. ಬಂಧಿತ ಆರೋಪಿಗಳು ಹಾಗೂ ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿ ಸರೋಜಾ ಸಂಬಂಧಿಕರಾಗಿದ್ದು, ಕೆ.ಪಿ.ಅಗ್ರಹಾರದಲ್ಲಿ ನೆಲೆಸಿದ್ದಾರೆ. 

Kodagu: ರಾಜ್ಯದಲ್ಲಿ ಉಗ್ರರ ತರಬೇತಿ ಶಾಲೆಯಾಗುತ್ತಿದೆಯಾ ಕೊಡಗು?

ಡಿ.4ರ ರಾತ್ರಿ ಮಂಜುನಾಥ ಜಮಖಂಡಿ, ಸರೋಜಾಳನ್ನು ಭೇಟಿ ಮಾಡಲು ಬಂದಿದ್ದ. ಈ ವೇಳೆ ಆರೋಪಿಗಳು ಹಾಗೂ ಮಂಜುನಾಥ್‌ ಜಮಖಂಡಿ ನಡುವೆ ಮಾತಿಗೆ ಮಾತು ಬೆಳೆದು ಜಗಳ ಶುರುವಾಗಿದೆ. ಕೆ.ಪಿ.ಅಗ್ರಹಾರ 5ನೇ ಕ್ರಾಸ್‌ನ ಹೇಮಂತ್‌ ಮೆಡಿಕಲ್ಸ್‌ ಎದುರು ಆರೋಪಿಗಳು ಮಂಜುನಾಥ ಜಮಖಂಡಿಯನ್ನು ರಸ್ತೆಗೆ ಕೆಡವಿ ಹಲ್ಲೆ ಮಾಡಿದ್ದಾರೆ. ಅಷ್ಟೇ ಅಲ್ಲದೆ, ರಸ್ತೆ ಬದಿಯಲ್ಲಿ ಬಿದ್ದಿದ್ದ ಸೈಜು ಗಲ್ಲು ಎತ್ತಿಕೊಂಡು ಮುಖದ ಗುರುತು ಸಿಗದ ಹಾಗೆ 20 ಬಾರಿ ಎತ್ತಿಹಾಕಿ ಹತ್ಯೆ ಮಾಡಿ ಪರಾರಿಯಾಗಿದ್ದರು.

ಸರೋಜಳಾ ಹುಡುಕಿ ಬಂದು ಹೆಣವಾದ?: ಕೊಲೆಯಾದ ಮಂಜುನಾಥ ಜಮಖಂಡಿ ಹಾಗೂ ಪ್ರಮುಖ ಆರೋಪಿ ಸರೋಜಾ ಒಂದೇ ಊರಿನವರು. ಸರೋಜಾ ವಿವಾಹಿತಗಳಾಗಿದ್ದು, ಪತಿ ದುಬೈನಲ್ಲಿದ್ದಾನೆ. ದಂಪತಿಗೆ ಮೂವರು ಮಕ್ಕಳಿದ್ದಾರೆ. ಈ ನಡುವೆ ಮಂಜುನಾಥ ಜಮಖಂಡಿ, ಸರೋಜಾ ಜತೆಗೆ ಸಲುಗೆ ಬೆಳೆಸಿಕೊಂಡಿದ್ದ. ಇತ್ತಿಚೆಗೆ ನನ್ನನ್ನು ಮದುವೆಯಾಗು ಎಂದು ಸರೋಜಾಳ ಬೆನ್ನುಬಿದ್ದಿದ್ದ. ಈತನ ಕಾಟ ತಾಳಲಾರದೆ ಸರೋಜಾ ವಿಜಯಪುರದಿಂದ ಬೆಂಗಳೂರಿನ ಕೆ.ಪಿ.ಅಗ್ರಹಾರದಲ್ಲಿರುವ ಸಂಬಂಧಿಕರ ಮನೆಗೆ ಬಂದಿದ್ದಳು. ಈ ವಿಚಾರ ತಿಳಿದು ಮಂಜುನಾಥ ಜಮಖಂಡಿ, ವಿಜಯಪುರದಿಂದ ಕೆ.ಪಿ.ಅಗ್ರಹಾರದ ಸಂಬಂಧಿಕರ ಮನೆಗೆ ಬಂದು ಸರೋಜಾಳೊಂದಿಗೆ ಮಾತನಾಡಲು ಮುಂದಾಗಿದ್ದ. ಈ ವೇಳೆ ಜಗಳ ನಡೆದು ಸರೋಜಾ ಹಾಗೂ ಸಂಬಂಧಿಕರು ಸೇರಿಕೊಂಡು ಮಂಜುನಾಥ ಜಮಖಂಡಿಯನ್ನು ನಡು ರಸ್ತೆಯಲ್ಲಿ ಕಲ್ಲು ಎತ್ತಿಹಾಕಿ ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ.

ಜಮೀನು ವಿಚಾರಕ್ಕೆ ಸೋದರ ಸಂಬಂಧಿಯ ಶಿರಚ್ಛೇದ ಮಾಡಿದ ಪಾಪಿ: ತಲೆ ಜತೆ ಗೆಳೆಯರಿಂದ ಸೆಲ್ಫಿ..!

ಹತ್ಯೆ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ: ಆರಂಭದಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಮೃತದೇಹದ ಗುರುತು ಪತ್ತೆಯಾಗಿರಲಿಲ್ಲ. ಹೀಗಾಗಿ ಪೊಲೀಸರು ಘಟನಾ ಸ್ಥಳದ ಸುತ್ತಮುತ್ತಲ ಸಿಸಿಟಿವಿ ಕ್ಯಾಮರಾ ದೃಶ್ಯಾವಳಿ ಸಂಗ್ರಹಿಸಿ ಪರಿಶೀಲಿಸಿದ್ದರು. ಈ ವೇಳೆ ಮೃತ ಮಂಜುನಾಥ ಜಮಖಂಡಿ ಹಾಗೂ ಆರೋಪಿಗಳ ನಡುವಿನ ಜಗಳ ಮತ್ತು ಕಲ್ಲು ಎತ್ತಿ ಹಾಕಿ ಹ್ಯೆ ಮಾಡುವ ದೃಶ್ಯಾವಳಿ ಸಿಕ್ಕಿತ್ತು. ಈ ದೃಶ್ಯಾವಳಿ ಆಧರಿಸಿ ಆರೋಪಿಗಳನ್ನು ಬಂಧಿಸಲಾಗಿದೆ. ಮಂಜುನಾಥ ಜಮಖಂಡಿ ಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Follow Us:
Download App:
  • android
  • ios