
7 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್ ಮಾಡಿದವರು ಅದೊಂದು ತಪ್ಪು ಮಾಡಿದ್ರು!
ರಾಜ್ಯ ಮಾತ್ರವಲ್ಲದೇ ದೇಶವನ್ನೇ ಬೆಚ್ಚಿ ಬೀಳಿಸಿದ ಬೆಂಗಳೂರಿನ ಎಟಿಎಂ ವಾಹನ ರಾಬರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಪೊಲೀಸರು ಕೇವಲ 24 ಗಂಟೆಯೊಳಗೆ ಬಂಧಿಸಿದ್ದಾರೆ. ಅಷ್ಟಕ್ಕೂ ಈ ದರೋಡೆಕೋರರು ತಗ್ಲಾಕಿಕೊಂಡಿದ್ದೇಗೆ..? ಪೊಲೀಸರ ರೋಚಕ ಬೇಟೆ ಹೇಗಿತ್ತು ಅನ್ನೋದೇ ಇವತ್ತಿನ ಎಫ್.ಐ.ಆರ್.
ಬುಧವಾರ ಮಧ್ಯಾಹ್ನ 12.20ಕ್ಕೆ ರಾಬರಿ... ಗುರುವಾರ 12.20ಕ್ಕೆ ಸರಿಯಾಗಿ ದರೋಡೆಕೋರರ ಬಂಧನ.. ಇದೇ ಅಲ್ವಾ ರೋಚಕ ತನಿಖೆ ಆಂತ ಹೇಳೋದು.. ಯಸ್ ನಾವು ಹೆಳೋಕೆ ಹೊರಟಿರೋದು.. ಇಡೀ ಬೆಂಗಳೂರನ್ನೇ ಬೆಚ್ಚಿ ಬೀಳಿಸಿದ್ದ ಬಿಗ್ಗೆಸ್ಟ್ ಬ್ಯಾಂಕ್ ರಾಬರಿ ಬಗ್ಗೆ.. ಕೋಟಿ ಕೋಟಿ ಹಣ ತುಂಬಿಕೊಂಡು ಎಟಿಎಂಗೆ ಹಾಕಲು ಹೋಗುತ್ತಿದ್ದ ವಾಹನವನ್ನ ತಡೆದಿದ್ದ ರಾಬರ್ಸ್ ಆರ್.ಬಿ.ಐ ಅಧಿಕಾರಿಗಳು ಅಂತ ಹೇಳಿಕೊಂಡು ಸಿಬ್ಬಂದಿಗಳನ್ನ ಯಾಮಾರಿಸಿ ಬರೋಬ್ಬರಿ 7 ಕೋಟಿಯನ್ನ ಕದ್ದು ಎಸ್ಕೇಪ್ ಆಗಿದ್ರು.. ಆದ್ರೆ ಈ ಕೇಸ್ ಅನ್ನ ಸೀರಿಯಸ್ಸಾಗಿ ತಗೆದುಕೊಂಡ ಬೆಂಗಳೂರು ಪೊಲೀಸರು ದರೋಡೆಕೋರರ ಹಿಂದೆ ಬಿದ್ದಿದ್ರು.. ಸಣ್ಣ ಸುಳಿವು ಬಿಡದೇ ಎಲ್ಲಾ ಆ್ಯಂಗಲ್ನಲ್ಲೂ ತನಿಖೆ ನಡೆಸಿದ್ರು.. ಪರಿಣಾಮ ಘಟನೆ ನಡೆದು 24 ಗಂಟೆಯಲ್ಲೇ ಕಳ್ಳರು ತಗ್ಲಾಕಿಕೊಂಡಿದ್ದಾರೆ.. ಅಷ್ಟಕ್ಕೂ ಈ ದರೋಡೆಕೋರರು ತಗ್ಲಾಕಿಕೊಂಡಿದ್ದೇಗೆ..? ಪೊಲೀಸರ ರೋಚಕ ಬೇಟೆ ಹೇಗಿತ್ತು ಅನ್ನೋದೇ ಇವತ್ತಿನ ಎಫ್.ಐ.ಆರ್. ನಿನ್ನೆ ಇಷ್ಟು ಮಾಹಿತಿ ಸಿಕ್ಕಿತ್ತು.. ಸ್ವತಃ ಗೃಹಮಂತ್ರಿಗಳೇ ಖದೀಮರ ಸುಳಿವು ಸಿಕ್ಕಿದೆ ಅಂತಲೂ ಹೇಳಿದ್ರು.. ಅವರು ಹೇಳಿದಂತೆಯೇ ಪೊಲೀಸರು ಇಬ್ಬರನ್ನ ಲಾಕ್ ಮಾಡಿದ್ದಾರೆ.
ಅಷ್ಟಕ್ಕೂ ಈ ಕಳ್ಳರು ಪೊಲೀಸರ ಕೈಗೆ ಸಿಕ್ಕಿದ್ದೇಗೆ?
ಅವರು ಬಳಸಿದ್ದು ಮೂರು ಕಾರು.. ಒಂದು ಕಾರಿನಲ್ಲಿ ಡೈರಿ ಸರ್ಕಲ್ನಲ್ಲಿ ಬಂದು ಹಣ ಕದ್ದರೆ.. ಎಸ್ಕೇಪ್ ಆಗುವಾಗ ಮಾರ್ಗ ಮಧ್ಯೆ ಮತ್ತೊಂದು ಕಾರಿಗೆ ಹಣವನ್ನ ವರ್ಗಾವಣೆ ಮಾಡಲಾಗುತ್ತೆ.. ಮೂರನೇ ಕಾರನ್ನ ಕಳ್ಳರು ರಾಜ್ಯವನ್ನ ದಾಟೋಕೆ ಬಳಸುತ್ತಾರೆ.. ಆದ್ರೆ ಮೂರೂ ಕಾರಿನ ಮಾಹಿತಿ ಸಿಕ್ಕ ಪೊಲೀಸರು ಆ ಕಾರುಗಳ ಹಿಂದೆ ಬಿದ್ದರು.. ವಿಶೇಷವಾಗಿ ಅವರು ಹೋಗುತ್ತಿದ್ದ ಮಾರ್ಗದ ಸಿಸಿ ಕ್ಯಾಮರಾಗಳ ಮೇಲೆ ನಿಗಾ ಇಟ್ಟರು.. ಆಗಲೇ ನೋಡಿ ಕಳ್ಳರ ಪಿನ್ ಟು ಪಿನ್ ಇನ್ಫಾರ್ಮೇಷನ್ ಸಿಗೋದು.. ಎಲ್ಲಾ ಮಹಿತಿಯನ್ನ ಪಡೆದು ಕೊನೆಗೆ ತಿರುಪತಿಯಲ್ಲಿ ಖದೀಮರನ್ನ ಲಾಕ್ ಮಾಡಿದ್ರು.
ಹೌದು.. ಇವತ್ತು ಕಳ್ಳರು ಸಿಕ್ಕಿಹಾಕಿಕೊಂಡಿದ್ದಾರೆ.. ಎಲ್ಲವೂ ಸುಖಾಂತ್ಯ ಕಾಣುತ್ತಿದೆ.. ಬಟ್ ಮತ್ತೆ ಈ ರೀತಿಯ ಘಟನೆ ಮರುಕಳಿಸದಂತೆ ನೋಡಿಕೊಳ್ಳೋ ಜವಾಬ್ದಾರಿ ಬೆಂಗಳೂರು ಪೊಲೀಸರ ಮೇಲಿದೆ.