ಸಾಲ ತಂದ ಆಪತ್ತು: ಮಗುವನ್ನು ಕೊಂದು ದೇಶ ಸುತ್ತಲು ಹೋದ ತಂದೆ

ಸಾಲಕ್ಕೆ ಅಂಜಿ ಮೂರು ವರ್ಷದ ಮಗಳನ್ನು ಕೊಂದು, ಸಾಫ್ಟ್‌ವೇರ್ ಇಂಜಿನಿಯರ್' ಆತ್ಮಹತ್ಯೆಗೆ ಯತ್ನಿಸಿದ್ದ. ಈ ಪ್ರಕರಣ ರೋಚಕ ತಿರುವು ಪಡೆದಿದೆ.
 

Share this Video
  • FB
  • Linkdin
  • Whatsapp

ಆತ ಬೆಂಗಳೂರಿನಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದ.‌ ನಗರದ ಅಪಾರ್ಟ್ಮೆಂಟ್'ನಲ್ಲಿ ಫ್ಯಾಮಿಲಿ ಜೊತೆಗೆ ಜೀವನ ಸಾಗಿಸುತ್ತಿದ್ದ. ಕೈತುಂಬಾ ಸಂಬಳ, ಹೆಂಡತಿ ಮತ್ತು ಮುದ್ದಾದ 3 ವರ್ಷದ ಮಗುವಿನ ಜೊತೆ ಬಿಂದಾಸ್ ಆಗಿ ಲೈಫ್ ಲೀಡ್ ಮಾಡ್ತಿದ್ದ. ಆದ್ರೆ ಆ ಕುಟುಂಬದ ಮೇಲೆ ಯಾರ ಕಣ್ಣು ಬಿತ್ತೋ ಏನೋ, ಶಾಲೆಗೆ ಅಂತ ಹೋದ ಅಪ್ಪ ಮಗಳು ನಾಪತ್ತೆಯಾಗಿದ್ರು. ಎಲ್ಲಿ ಹೋದ್ರು ಅಂತ ಹುಡುಕುತ್ತಿರುವಾಗ್ಲೇ ದೂರದ ಕೋಲಾರದಿಂದ ಬಂದ ಪೊಲೀಸರ ಫೋನ್ ಕಾಲ್ ಅಪ್ಪ ಮಗಳ ಸಾವಿನ ಸುದ್ದಿ ಕೊಟ್ಟಿತ್ತು. ಕೆರೆಯಲ್ಲಿ ಮಗುವಿನ ಮೃತದೇಹ, ಕೆರೆ ಪಕ್ಕದಲ್ಲಿ ಕಾರು ಇತ್ತು. ಆದರೆ ಅಪ್ಪನ ಶವವಾಗಲಿ ಅಥವಾ ಸುಳಿವಾಗಲಿ ಏನೂ ಇಲ್ಲ. ಇದೇ ಕೇಸ್ ಬೆನ್ನು ಬಿದ್ದ ಪೊಲೀಸರಿಗೆ ಪ್ರತೀ ಹಂತದಲ್ಲೂ ಟ್ವಿಸ್ಟ್ ಹಾಗೂ ಟರ್ನ್'ಗಳು. ಅಷ್ಟಕ್ಕೂ ಆ ಇಂಜಿನಿಯರ್ ಬಾಳಲ್ಲಿ ಎದ್ದ ಬಿರುಗಾಳಿ ಎಂಥದ್ದು..? ಕೊಲಾರದ ಕೆರೆಯೊಂದರಲ್ಲಿ ಸಿಕ್ಕ ಪುಟ್ಟ ಮಗುವಿನ ಕೇಸ್ ಪೊಲೀಸರು ಬೇದಿಸಿದ್ದೇಗೆ ಎಂಬ ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ‌.

ಯಶಸ್ವಿ ಚಿಕಿತ್ಸೆ: ವೃದ್ಧನ ಹೊಟ್ಟೆಯಿಂದ 187 ನಾಣ್ಯ ಹೊರತೆಗೆದ ವೈದ್ಯರು!

Related Video