ಯಶಸ್ವಿ ಚಿಕಿತ್ಸೆ: ವೃದ್ಧನ ಹೊಟ್ಟೆಯಿಂದ 187 ನಾಣ್ಯ ಹೊರತೆಗೆದ ವೈದ್ಯರು!
ಮಕ್ಕಳು ಕೈಗೆ ನಾಣ್ಯ ಸಿಕ್ಕರೆ ನುಂಗಿಬಿಡುತ್ತವೆ. ನಾಣ್ಯ ನುಂಗಿ ಮೃತಪಟ್ಟ ಮಗು ಎಂಬ ಸುದ್ದಿಗಳು ಆಗಾಗ ವರದಿಯಾಗುತ್ತಲೇ ಇರುತ್ತವೆ. ಆದರೆ ಇಲ್ಲಿ ನಾಣ್ಯ ನುಂಗಿರುವುದು ಮಗು ಅಲ್ಲ, 58 ವರ್ಷದ ವೃದ್ಧ! ನೀವು ನಂಬಲೇಬೇಕು. ಈ ವೃದ್ಧ ಬರೋಬ್ಬರಿ 187 ನಾಣ್ಯಗಳನ್ನು ನುಂಗಿದ್ದಾನೆ!
ಬಾಗಲಕೋಟೆ (ನ.27) : ಮಕ್ಕಳು ಕೈಗೆ ನಾಣ್ಯ ಸಿಕ್ಕರೆ ನುಂಗಿಬಿಡುತ್ತವೆ. ನಾಣ್ಯ ನುಂಗಿ ಮೃತಪಟ್ಟ ಮಗು ಎಂಬ ಸುದ್ದಿಗಳು ಆಗಾಗ ವರದಿಯಾಗುತ್ತಲೇ ಇರುತ್ತವೆ. ಆದರೆ ಇಲ್ಲಿ ನಾಣ್ಯ ನುಂಗಿರುವುದು ಮಗು ಅಲ್ಲ, 58 ವರ್ಷದ ವೃದ್ಧ! ನೀವು ನಂಬಲೇಬೇಕು. ಈ ವೃದ್ಧ ಬರೋಬ್ಬರಿ 187 ನಾಣ್ಯಗಳನ್ನು ನುಂಗಿದ್ದಾನೆ. ಅಷ್ಟು ನಾಣ್ಯ ನುಂಗಿಯೂ ಪವಾಡ ಸದೃಶವಾಗಿ ಬದುಕುಳಿದಿದ್ದಾನೆ!
ಹೌದು. ದ್ಯಾವಪ್ಪ ಎಂಬಾತನೇ ಬರೋಬ್ಬರಿ 187 ನಾಣ್ಯ ನುಂಗಿರುವ ವೃದ್ಧ. ಈ ಘಟನೆ ಬಾಗಲಕೋಟೆ ಜಿಲ್ಲೆಯಲ್ಲಿ ನಡೆದಿದೆ. ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ದ್ಯಾವಪ್ಪ ಮಾನಸಿಕವಿದ್ದನೆಂದು ಹೇಳಲಾಗಿದೆ. ಕೈಗೆ ಸಿಕ್ಕ ಒಂದೊಂದೇ ನಾಣ್ಯಗಳನ್ನು ನುಂಗಿದ್ದಾನೆ. ದ್ಯಾವಪ್ಪನ ಆರೋಗ್ಯದಲ್ಲಿ ಏರುಪೇರು ಆಗಿದೆ. ದ್ಯಾವಪ್ಪ ನಾಣ್ಯ ನುಂಗಿರಬಹುದು ಎಂದು ಅನುಮಾನಗೊಂಡ ಕುಟುಂಬಸ್ಥರು ವೃದ್ಧನನ್ನ ಆಸ್ಪತ್ರೆಗೆ ಕರೆತಂದಿದ್ದಾರೆ.
ಖಿನ್ನತೆಗೊಳಗಾಗಿ ನಾಣ್ಯ ನುಂಗಿದ ಭೂಪ: ಹೊಟ್ಟೆಯಿಂದ 63 ಕಾಯಿನ್ಸ್ ತೆಗೆದ ವೈದ್ಯರು
ವೈದ್ಯರೇ ಶಾಕ್!
ವೃದ್ಧ ದ್ಯಾವಪ್ಪ ನಾಣ್ಯಗಳನ್ನು ನುಂಗಿದ ಬಳಿಕ ಅಸ್ತವ್ಯಸ್ತನಾಗಿದ್ದಾನೆ. ಕುಟುಂಬದವರು ವೃದ್ಧನನ್ನು ಬಾಗಲಕೋಟೆಯ ಬಸವೇಶ್ವರ ಸಂಘದ ಕುಮಾರೇಶ್ವರ ಆಸ್ಪತ್ರೆಗೆ ಕರೆತಂದಿದ್ದಾರೆ. ಈ ವೇಳೆ ವೈದ್ಯರು ಎಕ್ಸರೇ ಪರೀಕ್ಷಿಸಿದಾಗ ವೃದ್ಧನ ಹೊಟ್ಟೆಯಲ್ಲಿ 187 ನಾಣ್ಯಗಳಿರುವುದು ಕಂಡು ವೈದ್ಯರೇ ಶಾಕ್ ಆಗಿದ್ದಾರೆ.
ಯಶಸ್ವಿ ಚಿಕಿತ್ಸೆ; ನಾಣ್ಯ ಹೊರತೆಗೆದ ವೈದ್ಯರು:
ವೃದ್ಧನ ಜೀವಕ್ಕೆ ಅಪಾಯವಿರುವುದು ಅರಿತ ವೈದ್ಯರು ತಕ್ಷಣ ಶಸ್ತ್ರಚಿಕಿತ್ಸೆಗೆ ಮುಂದಾಗಿದ್ದಾರೆ. ಶಸ್ತ್ರ ಚಿಕಿತ್ಸೆ ವಿಭಾಗದ ತಜ್ಞ ವೈದ್ಯರಾದ ಡಾ.ಈಶ್ವರ ಕಲಬುರ್ಗಿ, ಡಾ.ಪ್ರಕಾಶ ಕಟ್ಟಿಮನಿ ಜೊತೆ ಅರವಳಿಕೆ ತಜ್ಞರಾದ ಡಾ.ಅರ್ಚನಾ & ಡಾ.ರೂಪಾ ಅವರಿಂದ ವೃದ್ಧನಿಗೆ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಎಂಡೋಸ್ಕೋಪಿ ಮೂಲಕ ಹೊಟ್ಟೆಯಲ್ಲಿದ್ದ ಬರೋಬ್ಬರಿ 187 ನಾಣ್ಯಗಳನ್ನು ಹೊರತೆಗೆದಿದ್ದಾರೆ.
ಲೋಟ ಗುದದ್ವಾರದ ಮೂಲಕ ಗಂಡಸಿನ ಹೊಟ್ಟೆ ಸೇರಿದ್ದೇಗೆ?
ಶಸ್ತ್ರಚಿಕಿತ್ಸೆ ಬಳಿಕ ವೃದ್ಧ ದ್ಯಾವಪ್ಪನ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ. ಕುಮಾರೇಶ್ವರ ಆಸ್ಪತ್ರೆಯ ವೈದ್ಯರ ಸಮಯ ಪ್ರಜ್ಞೆ, ಯಶಸ್ವಿ ಚಿಕಿತ್ಸೆಯಿಂದ ವೃದ್ಧ ದ್ಯಾವಪ್ಪ ಪವಾಡಸದೃಶವಾಗಿ ಬದುಕುಳಿದಿದ್ದಾನೆ.