ಬಂಡೇಮಠ ಶ್ರೀಗಳ ಆತ್ಮಹತ್ಯೆ ಪ್ರಕರಣ: ತನಿಖೆಯ ದಾರಿ ತಪ್ಪಿಸಲು ‘ಹನಿ ಲೇಡಿ’ ಪ್ಲಾನ್
ಬಂಡೇಮಠ ಸ್ವಾಮೀಜಿ ಆತ್ಮಹತ್ಯೆ ಪ್ರಕರಣದಲ್ಲಿ ಆರೋಪಿ ನೀಲಾಂಬಿಕೆಯು, ಸಾಕ್ಷ ನಾಶ ಮಾಡಿ ತನಿಖೆಯ ದಾರಿ ತಪ್ಪಿಸಲು ಪ್ಲಾನ್ ಮಾಡಿದ್ದಾಳೆ.
ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಪ್ರಕರಣ ತನಿಖೆ ಚುರುಕುಗೊಂಡಿದ್ದು, ನೀಲಾಂಬಿಕೆಯ ಖತರ್ನಾಕ್ ಪ್ಲಾನ್ ಹೊರಬಿದ್ದಿದೆ. ಪೊಲೀಸರು ನೀಲಾಂಬಿಕೆಯನ್ನು ಅರೆಸ್ಟ್ ಮಾಡಿದಾಗ ಹಳೆ ಪೋನ್ ಬಚ್ಚಿಟ್ಟು ಹೊಸ ಫೋನ್ ತಂದಿದ್ದಳು. ಅಮಾಯಕಳಂತೆ ಪೊಲೀಸರ ಮುಂದೆ ನಟಿಸಿ, ಹಳೆಯ ಫೋನ್ ಬಚ್ಚಿಟ್ಟು ಹಲವು ಬಾರಿ ಪ್ಲ್ಯಾಶ್ ಮಾಡಿದ್ದಳು. ಕಂಪ್ಯೂಟರ್ ಸೈನ್ಸ್ ಓದಿದ್ದ ಯುವತಿಯು, ಸಾಕ್ಷ್ಯ ನಾಶಕ್ಕೆ ಬಿಗ್ ಪ್ಲಾನ್ ಮಾಡಿ, ಮೊಬೈಲ್‌ನಲ್ಲಿ ಡಾಟಾ ಡಿಲೀಟ್ ಮಾಡಿದ್ದಳು. ಇನ್ನು ಪೊಲೀಸರಿಂದ ಬಂಧಿತ ಮೂವರು ಆರೋಪಿಗಳ ಪ್ರತ್ಯೇಕ ವಿಚಾರಣೆ ನಡೆದಿದ್ದು, ಭಿನ್ನ-ಭಿನ್ನ ಉತ್ತರ ಬಂದ ಹಿನ್ನೆಲೆಯಲ್ಲಿ, ಮೂವರಿಗೆ ಮತ್ತೊಂದು ಹಂತದಲ್ಲಿ ತನಿಖೆ ನಡೆದಿದೆ.
ಲೈಸನ್ಸ್ ನವೀಕರಿಸದೇ ರಿವಾಲ್ವರ್ ಹೊಂದಿದ್ದ ಪ್ರಕರಣದಲ್ಲಿ ಶಾಸಕ ಸೋಮಶೇಖರ್ ರೆಡ್ಡಿ ದೋಷಿ!