ಬೆಳಗಾವಿಯಲ್ಲಿ ಹದಗೆಟ್ಟಿದೆಯಾ ಕಾನೂನು ಸುವ್ಯವಸ್ಥೆ? ಅಕ್ಕ-ತಮ್ಮನ ಮೇಲೆಯೇ ನೈತಿಕ ಪೊಲೀಸ್‌ಗಿರಿ?

ಲಮಾಣಿ ಸಮುದಾಯಕ್ಕೆ ಸೇರಿದ್ದ ಮುಸ್ಕಾನ್‌ಗೆ ಮುಸ್ಲಿಂ ವ್ಯಕ್ತಿ ಜತೆ ಮದುವೆ
ಮುಸ್ಲಿಂ ವ್ಯಕ್ತಿ ಮದುವೆಯಾದ್ದರಿಂದ ಮಗಳಿಗೆ ಮುಸ್ಲಿಂ ಸಮುದಾಯದ ಹೆಸರು
ಬೆಳಗಾವಿಯ ಯಮನಾಪುರದಲ್ಲಿ ವಾಸಿಸುತ್ತಿದ್ದ ಸಚಿನ್, ಮುಸ್ಕಾನ್ ಕುಟುಂಬ

First Published Jan 7, 2024, 11:56 AM IST | Last Updated Jan 7, 2024, 11:56 AM IST

ಬೆಳಗಾವಿ: ಪ್ರೇಮಿಗಳೆಂದು ತಿಳಿದು ಅಕ್ಕ-ತಮ್ಮನ ಮೇಲೆ ಹಲ್ಲೆ ಮಾಡಿರುವ ಘಟನೆ ಬೆಳಗಾವಿಯ(Belagavi) ಕೋಟಿ ಕೆರೆ ದಡದ ಬಳಿ ನಡೆದಿದೆ. ಕೆರೆ ಬಳಿ ಕುಳಿತಿದ್ದ ಅಕ್ಕ-ತಮ್ಮನನ್ನು(Sister-Brother) ಶೆಡ್‌ನೊಳಗೆ ಕರೆದೊಯ್ದು ಹಲ್ಲೆ ಮಾಡಲಾಗಿದೆ. ಗಾಂಜಾ ನಶೆಯಲ್ಲಿದ್ದ 7 ಮುಸ್ಲಿಂ ಯುವಕರು ಈ ಕೃತ್ಯವೆಸಗಿದ್ದಾರೆ. ಯಮನಾಪುರದ ಸಚಿನ್ ಲಮಾಣಿ, ಮುಸ್ಕಾನ್ ಪಟೇಲ್ ಮೇಲೆ ಹಲ್ಲೆ(Attack) ಮಾಡಲಾಗಿದೆ. ಯುವನಿಧಿಗೆ(Yuva Nidhi) ಅರ್ಜಿ ಸಲ್ಲಿಸಲು ಅಕ್ಕನ ಜತೆ ಸಚಿನ್ ಬಂದಿದ್ದ. ಸರ್ವರ್ ಸಮಸ್ಯೆ ಇದೆ ಅಂತಾ ಮಧ್ಯಾಹ್ನ 3ಕ್ಕೆ ಬನ್ನಿ ಎಂದು ಸೇವಾ ಕೇಂದ್ರ ಸಿಬ್ಬಂದಿ ಹೇಳಿದ್ದರು. 3 ಗಂಟೆವರೆಗೂ ಟೈಂಪಾಸ್‌ಗೆ ಕೆರೆ ಬಳಿ ಮುಸ್ಕಾನ್, ಸಚಿನ್‌ ಕೂತಿದ್ದರು. ಮುಸ್ಲಿಂ ಯುವತಿ ಜತೆ ಕುಳಿತಿದ್ದೀಯಾ ಎಂದು ಕ್ಯಾತೆ ತೆಗೆದ ಪುಡಾರಿಗಳು. ನಾವು ಅಕ್ಕ-ತಮ್ಮ ಎಂದರೂ ಮಾತು ಕೇಳದೆ ಶೆಡ್‌ನೊಳಗೆ ಎಳೆದೊಯ್ದು ಹಲ್ಲೆ ಮಾಡಿದ್ದಾರೆ. ತಮ್ಮ ಚಿಕ್ಕಪ್ಪನಿಗೆ ಫೋನ್ ಮಾಡಿ ಮನವರಿಕೆ ಮಾಡಿಸಲು ಸಚಿನ್ ಯತ್ನಮಾಡಿದ್ರೂ, ಫೋನ್ ಕಿತ್ತುಕೊಂಡು ಸ್ವಿಚ್ ಆಫ್ ಮಾಡಿ ಶೆಡ್ ಒಳಗೆ ಎಳೆದೊಯ್ದಿದ್ದಾರೆ. ಬಳಿಕ ಫೋನ್‌ ಸ್ವಿಚ್‌ ಆಫ್‌ ಆಗಿದ್ದರಿಂದ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಇದನ್ನೂ ವೀಕ್ಷಿಸಿ:  Weekly-Horoscope: ಈ ವಾರದ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ವಾರದ ಭವಿಷ್ಯ ಹೀಗಿದೆ ?