Weekly-Horoscope: ಈ ವಾರದ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ವಾರದ ಭವಿಷ್ಯ ಹೀಗಿದೆ ?

ಈ ವಾರದ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ವಾರದ ಭವಿಷ್ಯ ಹೇಗಿದೆ? ಎಂಬುದನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ..

First Published Jan 7, 2024, 11:09 AM IST | Last Updated Jan 7, 2024, 11:09 AM IST

ಈ ವಾರದ ವಿಶೇಷ ಏನು ಎಂದು ನೋಡೋದಾದ್ರೆ, ಜನವರಿ 07 ಅಂದರೆ ಭಾನುವಾರ ಬುಧ ಧನಸ್ಸು ರಾಶಿ ಪ್ರವೇಶ ಮಾಡಲಿದ್ದಾನೆ. ಜನವರಿ 11 ರಂದು ಗುರುವಾರ ಎಳ್ಳಮವಾಸ್ಯೆ ಇದ್ದು, ಕೇತು ಜಯಂತಿ ಇರಲಿದೆ. ಮಿಥುನ ರಾಶಿಯವರಿಗೆ ವಾರದ ಆದಿಯಲ್ಲಿ ವ್ಯಯ ಹೆಚ್ಚಾಗಲಿದೆ. ವೃತ್ತಿಯಲ್ಲಿ ಲಾಭ, ದಾಂಪತ್ಯದಲ್ಲಿ ಅಸಮಾಧಾನ, ಮಾತಿನ ಘರ್ಷಣೆ ಆಗಲಿದೆ. ವಾರ ಮಧ್ಯದಲ್ಲಿ ವೃತ್ತಿಯಲ್ಲಿ ಅನಾನುಕೂಲ. ತಂದೆ-ಮಕ್ಕಳಲ್ಲಿ ಭಿನ್ನಾಭಿಪ್ರಾಯ. ವಿದ್ಯಾರ್ಥಿಗಳಿಗೆ ತೊಂದರೆ. ದಾಂಪತ್ಯದಲ್ಲಿ ಭಿನ್ನಾಭಿಪ್ರಾಯ. ವ್ಯವಹಾರಗಳಲ್ಲಿ ಮನಸ್ತಾಪ ಉಂಟಾಗಲಿದೆ. ವಾರಾಂತ್ಯದಲ್ಲಿ ಸ್ತ್ರೀಯರಿಗೆ ನಷ್ಟ ಫಲ, ಮಾನಸಿಕ ಖಿನ್ನತೆ, ವಸ್ತು ನಷ್ಟ, ಹಣ-ಡಾಕ್ಯುಮೆಂಟ್ ವ್ಯತ್ಯಾಸವಾಗುವ ಸಾಧ್ಯತೆ ಇದೆ. ಪರಿಹಾರಕ್ಕೆ ಕಾರ್ತವೀರ್ಯಾರ್ಜುನ ಸ್ಮರಣೆ ಮಾಡಿ.

ಇದನ್ನೂ ವೀಕ್ಷಿಸಿ: ಕತ್ರಿನಾ ಪಕ್ಕ ನಿಂತಾಗ ನಾಚಿ ನೀರಾದ ವಿಜಯ್ ಸೇತುಪಥಿ: ಕನಸಿನ ರಾಣಿ ಪಕ್ಕದಲ್ಲೇ ನಿಂತಾಗ ಚುಟುಚುಟು !