ಅರ್ಚಕರ ಸಂಬಳಕ್ಕೆ ಕತ್ತರಿ ಹಾಕ್ತಾ ಸರ್ಕಾರ? 10 ವರ್ಷದ ಸಂಬಳ ವಾಪಸ್‌ ಕೇಳಿ ಹಿರೇಮಗಳೂರು ಕಣ್ಣನ್‌ಗೆ ನೋಟಿಸ್‌ !

ಕನ್ನಡದ ಪಂಡಿತ ಹಿರೇಮಗಳೂರು ಕಣ್ಣನ್‌ಗೆ ನೀಡುತ್ತಿದ್ದ ಸಂಬಳವನ್ನು ತಡೆ ಹಿಡಿದು, 4,500 ರೂಪಾಯಿಯಂತೆ 10 ವರ್ಷದ ಹಣವನ್ನ ವಾಪಸ್ ನೀಡುವಂತೆ ಸರ್ಕಾರ ನೋಟಿಸ್‌ ನೀಡಿದೆ.

First Published Jan 23, 2024, 1:09 PM IST | Last Updated Jan 23, 2024, 1:10 PM IST

ಚಿಕ್ಕಮಗಳೂರು: ಅರ್ಚಕರಿಗೆ ನೀಡುತ್ತಿದ್ದ ಸಂಬಳವನ್ನ ರಾಜ್ಯ ಸರ್ಕಾರ ವಾಪಸ್ ಕೇಳಿದೆ. ಕನ್ನಡದ ಪಂಡಿತ ಹಿರೇಮಗಳೂರು ಕಣ್ಣನ್‌ಗೆ(Hiremagalur Kannan) ನೋಟಿಸ್ ನೀಡಲಾಗಿದೆ. ವೇತನ ತಡೆಹಿಡಿದು ನೋಟಿಸ್‌ನನ್ನು(Notice) ಚಿಕ್ಕಮಗಳೂರು(Chikkamagaluru) ಜಿಲ್ಲಾಡಳಿತ ನೀಡಿದೆ. ದೇವಾಲಯದ ಆದಾಯ ಕಡಿಮೆ, ಸಂಬಳ ಹೆಚ್ಚು ನೀಡಲಾಗಿದೆ ಎಂದು ನೋಟಿಸ್ ನೀಡಲಾಗಿದೆ. 4,500 ರೂಪಾಯಿಯಂತೆ 10 ವರ್ಷದ ಹಣವನ್ನ ವಾಪಸ್ ನೀಡಲು ಸೂಚಿಸಲಾಗಿದೆ. ಒಟ್ಟಾರೆ 4,74,000 ರೂಪಾಯಿ ವಾಪಸ್ ನೀಡುವಂತೆ ಸೂಚನೆ ಬಂದಿದೆ. ಹಿರೇಮಗಳೂರು ಕಣ್ಣನ್‌ ಕೋದಂಡ ರಾಮ ದೇವಾಲಯದ(Kodandarama temple) ಪ್ರಧಾನ ಅರ್ಚಕರಾಗಿದ್ದಾರೆ(Priest). ವೇತನ ತಡೆ ಹಿಡಿದು ಜಿಲ್ಲಾಡಳಿತ ನೋಟಿಸ್ ಜಾರಿ ಮಾಡಿದೆ. ಕಣ್ಣನ್ ಅವರ ಖಾತೆಗೆ ಪ್ರತಿ ತಿಂಗಳು ಜಮೆಯಾಗುತ್ತಿದ್ದ ಸಂಬಳ 7500. ಆದ್ರೆ 7500 ರೂಪಾಯಿ ನೀಡಿದ ಸಂಬಳದಲ್ಲಿ 4500 ವಾಪಸ್ ನೀಡಲು ಸೂಚನೆ ಬಂದಿದೆ. ದೇವಾಲಯದ ಆದಾಯ ಕಡಿಮೆ‌ ಇರುವುದರಿಂದ ಸರ್ಕಾರ ನೀಡಿದ ಸಂಬಳ ವಾಪಸ್ ನೀಡಲು ಸೂಚಿಸಲಾಗಿದೆಯಂತೆ. ಚಿಕ್ಕಮಗಳೂರು ತಹಶೀಲ್ದಾರ್‌ ಸುಮಂತ್ ರಿಂದ ನೋಟಿಸ್ ನೀಡಲಾಗಿದೆ. 

ಇದನ್ನೂ ವೀಕ್ಷಿಸಿ:  Pejawar Shri: ಭವ್ಯ ರಾಮ ಮಂದಿರ ನಿರ್ಮಾಣದಿಂದ ಭಾರತದ ದಿಕ್ಕು ಬದಲಾಗಲಿದೆ: ಪೇಜಾವರ ಶ್ರೀ

Video Top Stories