ದೇವರ ದರ್ಶನಕ್ಕೆ ಬಂದ ಜೆಡಿಎಸ್‌ ಕಾರ್ಯಕರ್ತನ ಮೇಲೆ ಅಟ್ಯಾಕ್: ಮಚ್ಚು ಬೀಸೋ ಮುಂಚೆ ಕಾನ್ಸಟೇಬಲ್‌ ಹಾಜರ್..!

ಸ್ನೇಹಿತರಾಗಿದ್ದವರು ದುಡ್ಡಿಗಾಗಿ ವೈರಿಗಳಾದರು..!
ಅಟ್ಯಾಕ್ ಪ್ಲಾನ್ ಮಾಡಿದವನು ಸ್ನೇಹಿತನೇ..!
ಅವನ ಪ್ರಾಣ ಉಳಿಸಿದ್ದು ಪೊಲೀಸ್ ಪೇದೆ..!

Share this Video
  • FB
  • Linkdin
  • Whatsapp

ಆತ ಜೆಡಿಎಸ್ ಕಾರ್ಯಕರ್ತ, ಹೆಂಡತಿ ಪುರಸಭೆ ಸದಸ್ಯೆಯಾಗಿದ್ದಳು. ರಾಜಕೀಯ ಮೂಲಕ ಜನರ ಸೇವೆ ಮಾಡಿಕೊಂಡಿದ್ದ ಆತನ ಮೇಲೆ ಆವತ್ತೊಂದು ದಿನ ಡೆಡ್ಲಿ ಅಟ್ಯಾಕ್ ನಡೆದುಬಿಟ್ಟಿತ್ತು. ದೇವಸ್ಥಾನಕ್ಕೆ ಹೋಗಿ ಕೈ ಮುಗಿದು ಹೊರ ಬರ್ತಿದಂತೆ ಅವನ ಮೇಲೆ ಹಂತಕರ ಪಡೆ ಅಟ್ಯಾಕ್(Attack) ಮಾಡಿತ್ತು. ದೇವರಿಗೆ ಕೈ ಮುಗಿದ ಪರಿಣಾಮನೋ ಏನೋ ಆತ ಬದುಕುಳಿದುಬಿಟ್ಟ. ಇನ್ನೂ ಆತನ ಪ್ರಾಣ ಉಳಿಸಿದ್ದು ಒಬ್ಬ ಪೊಲೀಸ್ ಪೇದೆ. ನಂತರ ಹಲ್ಲೆಯ ತನಿಖೆ ನಡೆದ ಪೊಲೀಸರಿಗೆ ಅವನ ಬ್ಯುಸಿನೆಸ್ ಬಗ್ಗೆ ಒಂದೊಂದೇ ಮಾಹಿತಿಗಳು ಗೊತ್ತಾಗ್ತಾ ಹೊಯ್ತು. ಅಷ್ಟೇ ಅಲ್ಲ ಆತನ ಮೇಲೆ ಅಟ್ಯಾಕ್ ಮಾಡಿದ ಕಿರಾತಕ ಯಾರು ಅನ್ನೋದು ಗೊತ್ತಾಗಿಹೊಯ್ತು. ಇಷ್ಟೆಲ್ಲಾ ಆಸೆ ಇಟ್ಟುಕೊಂಡವನಿಗೆ ಶತ್ರುಗಳಿರೋದಿಲ್ವಾ..? ಅಂದಹಾಗೆ ಮೊನ್ನೆ ಆಂಜನೇಯನ ಎದುರು ಅಪ್ಪು ಗೌಡರ(Appugowda) ಮೇಲೆ ಅಟ್ಯಾಕ್ ಮಾಡಿದವರು ಆತನನ್ನ ಕೊಲ್ಲದೇ ಎಸ್ಕೇಪ್ ಆಗಿದ್ರು. ಕಾರಣ ಅದೇ ದೇವಸ್ಥಾನಕ್ಕೆ(Temple) ಅದೇ ಟೈಂನಲ್ಲಿ ಬಂದಿದ್ದ ಒಬ್ಬ ಪೇದೆ. ತನ್ನ ಪ್ರಾಣದ ಹಂಗನ್ನೂ ಬಿಟ್ಟು ಆ ಪೇದೆ ಅಪ್ಪು ಗೌಡರನ್ನ ಉಳಿಸಲು ಹೋರಾಡಿದ್ದ. ಅಷ್ಟೇ ಅಲ್ಲ ಹಂತಕರು ಎಸ್ಕೇಪ್ ಆಗುವಾಗ ಅವರನ್ನೇ ಫಾಲೋ ಮಾಡಿದ ಆತ 20 ಕಿಲೋ ಮೀಟರ್ ಚೇಸ್ ಮಾಡಿ ಅವರನ್ನ ಲಾಕ್ ಮಾಡಿದ್ದ. ಕುಮಾರಸ್ವಾಮಿಯಂಥವರು ಒಬ್ಬರು ಪ್ರತೀ ಠಾಣೆಯಲ್ಲೂ ಇದ್ದುಬಿಟ್ಟರೆ ಸಾಕು ಅಲ್ವಾ..? ಇನ್ನೂ ಹಂತಕರನ್ನ ಚೇಸ್ ಮಾಡಿ ಹಿಡಿದ ನಂತರ ಅವರನ್ನ ವಿಚಾರಣೆಗೆ ಒಳಪಡಿಸಲಾಯ್ತು. ಆದ್ರೆ ಅವರು ಹೇಳಿದ ಒಂದು ಹೆಸರು ಕೇಳಿ ಪೊಲೀಸರೇ ದಂಗಾಗಿಹೋಗಿದ್ರು. ಕಾರಣ ಅಪ್ಪು ಗೌಡ ಮೇಲೆ ಅಟ್ಯಾಕ್ ಮಾಡುವಂತೆ ಹೆಳಿದ್ದು ಅಪ್ಪುಗೌಡನ ಸ್ನೇಹಿತನೇ ಆಗಿದ್ದ.

ಇದನ್ನೂ ವೀಕ್ಷಿಸಿ: ಬುಡಕಟ್ಟು ಸಮುದಾಯದ ಯುವತಿಯಿಂದ ಧ್ವಜಾರೋಹಣ ಮಾಡಿಸಿದ ಎಸ್‌ಪಿ !

Related Video