Gadag: ಲವ್ ಮ್ಯಾರೇಜ್, ಪತ್ನಿಗೆ 23 ಸಲ ಮಚ್ಚು ಬೀಸಿ ಕೊಲ್ಲಲೆತ್ನಿಸಿದ ಪತಿ..!

ಅಪೂರ್ವಾ ಅಲಿಯಾಸ್‌ ಅರ್ಫಾ ಬಾನು ನಾಲ್ಕು ವರ್ಷದ ಹಿಂದೆ ಹುಬ್ಬಳ್ಳಿ ಮೂಲದ ಇಜಾಜ್‌ನನ್ನು ಪ್ರೇಮಿಸಿ ವಿವಾಹವಾಗಿದ್ದಳು.  ಬ್ರಾಹ್ಮಣ ಕುಟುಂಬದವಳಾದ ಅಪೂರ್ವಾ ಕುಟುಂಬದ ವಿರೋಧದ ನಡುವೆಯೂ 2018ರಲ್ಲಿ ಇಜಾಜ್‌ನನ್ನು ಮದುವೆಯಾಗಿಯಾದ್ದಳು. 

Share this Video
  • FB
  • Linkdin
  • Whatsapp

ಗದಗ (ಮಾ. 13): ಅಪೂರ್ವಾ ಅಲಿಯಾಸ್‌ ಅರ್ಫಾ ಬಾನು ನಾಲ್ಕು ವರ್ಷದ ಹಿಂದೆ ಹುಬ್ಬಳ್ಳಿ ಮೂಲದ ಇಜಾಜ್‌ನನ್ನು ಪ್ರೇಮಿಸಿ ವಿವಾಹವಾಗಿದ್ದಳು. ಬ್ರಾಹ್ಮಣ ಕುಟುಂಬದವಳಾದ ಅಪೂರ್ವಾ ಕುಟುಂಬದ ವಿರೋಧದ ನಡುವೆಯೂ 2018ರಲ್ಲಿ ಇಜಾಜ್‌ನನ್ನು ಮದುವೆಯಾಗಿಯಾದ್ದಳು. ನಂತರ ಅರ್ಫಾಬಾನು ಆಗಿ ಹೆಸರು ಬದಲಾಯಿಸಿಕೊಂಡಳು. ಮದುವೆಯಾದ ಹೊಸತರಲ್ಲಿ ಎಲ್ಲ ಸರಿಯಾಗೇ ಇತ್ತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬೆಂಕಿ: ಪ್ರಾಣ ಉಳಿಸಲು ಮಗುವನ್ನು ಕಟ್ಟಡದಿಂದ ಕೆಳಗೆಸೆದ ಅಪ್ಪ , ವಿಡಿಯೋ

ಇಜಾಜ್‌ಗೆ ಇದು ಎರಡನೇ ಮದುವೆ. ಆತನ ಮೊದಲ ಹೆಂಡತಿಗೆ ಮೂರು ಮಕ್ಕಳು ಇದ್ದಾರೆ. ಮೊದಲ ಹೆಂಡತಿ ವಿಚಾರವನ್ನು ಇಜಾಜ್‌ ಗುಟ್ಟಾಗೇ ಇಟ್ಟಿದ್ದ. ನಂತರದ ದಿನಗಳಲ್ಲಿ ಅಪೂರ್ವಾಳಿಗೆ ತನ್ನ ಗಂಡನ ಮೊದಲನೇ ಮದುವೆ ವಿಷಯ ಗೊತ್ತಾಗಿದೆ. ಇದು ತಿಳಿದ ನಂತರ ಆಗಾಗ ಸಣ್ಣ-ಪುಟ್ಟಜಗಳವಾಗುತ್ತಿತ್ತು. ಮುಸ್ಲಿಂ ಪದ್ಧತಿ ಪಾಲಿಸು, ಬುರ್ಕಾ ಧರಿಸುವಂತೆ ಒತ್ತಡ ಹಾಕುತ್ತಿದ್ದನಂತೆ. ಇದಕ್ಕೆ ವಿರೋಧ ವ್ಯಕ್ತಪಡಿಸಿ ಅಪೂರ್ವಾ ತನ್ನ ಗಂಡನ ಮನೆ ಹುಬ್ಬಳ್ಳಿಯಿಂದ ತನ್ನ ತವರು ಮನೆಗೆ ಬಂದು ಇಲ್ಲಿಯೇ ಇದ್ದಳು. ತವರು ಮನೆಯಲ್ಲಿದ್ದರೂ ಇಜಾಜ್‌ನಿಂದ ಮತ್ತಷ್ಟುಕಿರಿಕಿರಿ ಶುರುವಾಗಿತ್ತು. ಅಪೂರ್ವಾ ತನ್ನ ತಾಯಿ ಸಹಾಯ ಪಡೆದು ವಿಚ್ಛೇದನಕ್ಕೆ ಅರ್ಜಿ ನೀಡಿದ್ದಳು. ಇದೇ ಕಾರಣಕ್ಕೆ ಮತ್ತಷ್ಟುಕೋಪಗೊಂಡಿದ್ದ ಇಜಾಜ್‌ ಬೆಳಗಿನ ಜಾವ ಮಚ್ಚಿನಿಂದ ಹಲ್ಲೆ ಮಾಡಿ ಸಾಯಿಸುವ ಪ್ಲಾನ್‌ ಮಾಡಿದ್ದಾನೆ. 

Related Video