Asianet Suvarna FIR: ಜೂನಿಯರ್ ಆರ್ಟಿಸ್ಟ್‌ಗಳೇ ಟಾರ್ಗೆಟ್.. ಬೆಂಗಳೂರು ಟು ದುಬೈ ಗ್ಯಾಂಗ್!
* ಸಿನಿಮಾ ಲೋಕ್ ಅರಸಿ ಬರುವ ಯುವತಿಯರೇ ಟಾರ್ಗೆಟ್
* ನಂಬಿಸಿ ದುಬೈಗೆ ಕಳ್ಳ ಸಾಗಾಟ ಮಾಡುತ್ತಿದ್ದ ಗ್ಯಾಂಗ್
* ಅದೆಷ್ಟು ಹೆಣ್ಣು ಮಕ್ಕಳ ಬಳಿ ಕಣ್ಣೀರು ಹಾಕಿಸಿದ್ದಾರೋ ಗೊತ್ತಿಲ್ಲ
* ಈ ಕರಾಳ ದಂಧೆ ಬಯಲಿಗೆ ಬಂದ ಕತೆಯೇ ರೋಚಕ
ಬೆಂಗಳೂರು( ಏ. 12) ಸಿನಿಮಾದಲ್ಲಿ ಅವಕಾಶ ಸಿಗಬೇಕು... ನಾನೂ ದೊಡ್ಡ ಹೀರೋಯಿನ್ (Sandalwood) ಆಗಿ ಮಿಂಚ ಬೇಕು ಅಂತ ಪ್ರತಿ ನಿತ್ಯ ಸಾಕಷ್ಟು ಹೆಣ್ಣು ಮಕ್ಕಳು ಗಾಂಧಿನಗರಕ್ಕೆ (Gandhinagar) ಬರ್ತಾರೆ. ಆದ್ರೆ ಆ ಕಲಾಸರಸ್ವತಿ ಆಯ್ಕೆ ಮಾಡಿಕೊಳ್ಳೋದು ಬೆರಳೆಣಿಕೆಯಷ್ಟು ಮಂದಿಯನ್ನ ಮಾತ್ರ. ಆದ್ರೆ ಮಿಕ್ಕವರನ್ನ ಆಯ್ಕೆ ಮಾಡಿಕೊಳ್ಳಲು ಒಂದು ಗ್ಯಾಂಗ್ ಬೆಂಗಳೂರಿನಲ್ಲಿ (Bengaluru) ಕಾದು ಕುಳಿತಿರುತ್ತೆ. ಈ ಗ್ಯಾಂಗ್ ಕೈಗೆ ಸಿಕ್ಕಾಕ್ಕೊಂಡ್ರೆ ಮುಗೀತು. ಹೀಗೆ ಜೂನಿಯರ್ ಆರ್ಟಿಸ್ಟ್ ಗಳನ್ನೇ ಟಾರ್ಗೆಟ್ ಮಾಡಿಕೊಂಡು ಮಹಿಳೆಯರ ಕಳ್ಳಸಾಗಾಣಿಕೆ ಮಾಡ್ತಿದ್ದ ಗ್ಯಾಂಗ್ ರೋಚಕ ಹಂಟಿಂಗ್ ಇವತ್ತಿನ ಎಫ್.ಆರ್.
Sex Racket: ಇಲ್ಲೂ ಅದೇ ಕತೆ.. ಹೊರಗೆ ಸ್ಪಾ.. ಒಳಗೆ ವೇಶ್ಯಾವಾಟಿಕೆ ಅಡ್ಡೆ!
ಬರೊಬ್ಬರಿ 95 ಹೆಣ್ಣುಮಕ್ಕಳನ್ನ ದುಬೈಗೆ (Dubai) ಪಾರ್ಸೆಲ್ ಮಾಡ್ತಿದ್ದ ಈ ಕಿರಾತಕರು ಇನ್ನಷ್ಟು ಮಂದಿಯನ್ನ ಫ್ಲೈಟ್ ಹತ್ತಿಸಲು ರೆಡಿಯಾಗಿದ್ರು. ಅದಕ್ಕಾಗಿ ಹತ್ತಾರು ಪಾಸ್ ಪೋರ್ಟ್ (Passport) ಸಹ ರೆಡಿಯಾಗಿದ್ದವು.
ಕಳೆದ 2 ವರ್ಷದಿಂದ ವುಮೆನ್ ಟ್ರಾಫಿಕಿಂಗ್ ನಲ್ಲಿ ತೊಡಗಿದ್ದ ಬಸವರಾಜು ಆಂಡ್ ಟೀಂಗೆ ಯಾವುದೇ ಅಡೆತಡೆಗಳೇ ಇರಲಿಲ್ಲ. ಆದ್ರೆ ಇವರ 2 ವಷರ್ದ ದಂಧೆಗೆ ಬ್ರೇಕ್ ಹಾಕುವಂತೆ ಮಾಡಿದ್ದು ಒಂದು ಹೆಣ್ಣುಮಗಳು ಅದೂ ಕೂಡ ಇವರ ಬಲೆಗೆ ಬಿದ್ದು ದುಬೈಗೆ ಹೋಗಿದ್ದ ಸಂತ್ರಸ್ತೆ!