Asianet Suvarna FIR: ಡೆತ್ ನೋಟ್ ಬರೆದಿಟ್ಟು ಇಬ್ಬರು ಮಕ್ಕಳೊಂದಿಗೆ ನಾಲೆಗೆ ಹಾರಿದ ಮಹಿಳೆಯ ಹಿಂದಿನ ಕಥೆ

ಅಶ್ಲೀಲ ಫೋಟೋ ಇಟ್ಟುಕೊಂಡು ಬ್ಲ್ಯಾಕ್ ಮೇಲ್
ಇಬ್ಬರು ಮಕ್ಕಳೊಂದಿಗೆ ಭದ್ರಾ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಮಹಿಳೆ
ಶಿವಮೊಗ್ಗದ ಭದ್ರಾವತಿಯ ಯಡೇಹಳ್ಳಿಯಲ್ಲಿ ನಡೆದ ಘಟನೆ

Share this Video
  • FB
  • Linkdin
  • Whatsapp

ಶಿವಮೊಗ್ಗ (ಜ. 22): ನಂಬಿಕಸ್ತ ಎಂದು ಹತ್ತಿರ ಸೇರಿಸಿಕೊಂಡ ಪರಿಣಾಮದ ಕಥೆ ಇದು. ಕಷ್ಟ ಅಂದಾಗ ಏನನ್ನೂ ಯೋಚಿಸದೇ ಸಾಲ ಕೊಟ್ಟಿದ್ದು. ಆದರ ಆತ ಒಂದೇ ಒಂದು ಅಶ್ಲೀಲ ಫೋಟೋ ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡಲು ಆರಂಭಿಸಿದ್ದ. ಅವನ ಬ್ಲ್ಯಾಕ್ ಮೇಲ್ ಅಸ್ತ್ರಕ್ಕೆ ಬಲಿಯಾಗಿದ್ದು ಮೂರು ಜೀವಗಳು. ಆ ಮೂರು ಸಾವಿನ ಹಿಂದಿನ ಕಥೆ ಇಲ್ಲಿದೆ.

Crime News ಕೊಟ್ಟ ಸಾಲ ಕೇಳಿದ್ದಕ್ಕೆ ಅನೈತಿಕ ಸಂಬಂಧ ಪಟ್ಟ, ಮನನೊಂದು ತಾಯಿ-ಮಕ್ಕಳು ಆತ್ಮಹತ್ಯೆ
ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಯಡೇಹಳ್ಳಿಯಲ್ಲಿ ನಡೆದ ಅಪರಾಧ ಘಟನೆ. ವೀಣಾ ಹಾಗೂ ಸಂತೋಷ್ ದಂಪತಿಯು ಭದ್ರಾವತಿ ತಾಲೂಕಿನ ಅರಹತೋಳಲು ಗ್ರಾಮದ ಸಂತೋಷ್ ಹಾಗೂ ಆಶಾ ಎನ್ನುವವರಿಗೆ 8 ಲಕ್ಷ ರೂಪಾಯಿ ಸಾಲ ನೀಡಿದ್ದರು. ಆದರೆ, ಸಾಲ ವಾಪಸ್ ನೀಡುವಂತೆ ಹೇಳಿದಾಗ ಸಂತೋಷ್ ಹಾಗೂ ಆಶಾ, ವೀಣಾ ಆಕ್ರಮ ಸಂಬಂಧ ಹೊಂದಿದ್ದಾರೆ ಎಂದು ಆರೋಪ ಹೊರಿಸಿದ್ದರು. ಇದರಿಂದ ಬೇಸತ್ತ ವೀಣಾ ತನ್ನ 7 ವರ್ಷದ ಮಗಳಾದ ಜಾಹ್ಞವಿ ಹಾಗೂ ಒಂದು ವರ್ಷದ ಮಗಳು ದೈವಿಕಾರೊಂದಿಗೆ ಹೆಂಚಿನ ಸಿದ್ಧಾಪುರ ಗ್ರಾಮದ ಭದ್ರಾ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಸಾಯುವ ಮುನ್ನ ವೀಣಾ ಡೆತ್ ನೋಟ್ ಬರೆದಿಟ್ಟಿದ್ದು, ನಾಲೆಯ ದಡದ ಬಳಿ ಇರುವ ದೇವಸ್ಥಾನದಲ್ಲಿ ಇಟ್ಟಿದ್ದ ಬ್ಯಾಗ್ ನಲ್ಲಿ ಅದನ್ನು ಇರಿಸಿದ್ದರು.

Related Video