ಹಾಡಹಗಲೇ ಶಸ್ತ್ರಸಜ್ಜಿತ ದರೋಡೆಕೋರರಿಂದ ಚಿನ್ನದಂಗಡಿಗೆ ನುಗ್ಗಿ ದರೋಡೆ: ಮಾಲೀಕನ ಮೇಲೆ ಗುಂಡಿನ ದಾಳಿ
ಬಿಹಾರದ ಹಾಜಿಪುರದಲ್ಲಿ ಹಾಡಹಗಲೇ ಚಿನ್ನದ ಅಂಗಡಿಗೆ ಶಸ್ತ್ರಸಜ್ಜಿತ ದರೋಡೆಕೋರರು ಅಂಗಡಿ ಮಾಲೀಕನ ಮೇಲೆ ಗುಂಡಿನ ದಾಳಿ ನಡೆಸಿ ಕೆಜಿಗಟ್ಟಲೇ ಚಿನ್ನದೊಂದಿಗೆ ಪರಾರಿಯಾಗಿದ್ದಾರೆ.
ಬಿಹಾರ: ಮೊದಲೆಲ್ಲಾ ಕಳ್ಳರು ರಾತ್ರಿಗಳಲ್ಲಿ ಅಂಗಡಿಗೆ ನುಗ್ಗಿ ದರೋಡೆ ಮಾಡಿ ಚಿನ್ನಾಭರಣದೊಂದಿಗೆ ಪರಾರಿಯಾಗುತ್ತಿದ್ದರು. ಆದರೆ ಬಿಹಾರದ ಹಾಜಿಪುರದಲ್ಲಿ ಹಾಡಹಗಲೇ ಚಿನ್ನದ ಅಂಗಡಿಗೆ ಶಸ್ತ್ರಸಜ್ಜಿತ ದರೋಡೆಕೋರರು ಅಂಗಡಿ ಮಾಲೀಕನ ಮೇಲೆ ಗುಂಡಿನ ದಾಳಿ ನಡೆಸಿ ಕೆಜಿಗಟ್ಟಲೇ ಚಿನ್ನದೊಂದಿಗೆ ಪರಾರಿಯಾಗಿದ್ದಾರೆ. ಜೂನ್ 22ರ ರಾತ್ರಿ ಎಂಟು ಗಂಟೆ ಸುಮಾರಿಗೆ ಈ ಅನಾಹುತ ನಡೆದಿದೆ. ಚಿನ್ನದ ಅಂಗಡಿಗೆ ನುಗ್ಗಿದ ಮೂರು ನಾಲ್ಕು ಜನ ದರೋಡೆಕೋರರು ಮೊದಲಿಗೆ ಅಂಗಡಿಯಲ್ಲಿದ್ದ ಗ್ರಾಹಕರಿಗೆ ಕಿರುಕುಳ ನೀಡಲು ಶುರು ಮಾಡಿದ್ದಾರೆ. ಕುಳಿತಿದ್ದ ಗ್ರಾಹಕರಿಗೆ ಥಳಿಸಿ ಹಲ್ಲೆ ನಡೆಸಿದ್ದಾರೆ. ಅಂಗಡಿಯ ಮಾಲೀಕ ಸುನೀಲ್ ಪ್ರಿಯದರ್ಶಿನಿ ಈ ಲೂಟಿ ಪ್ರಯತ್ನವನ್ನು ವಿರೋಧಿಸಿದಾಗ ಅವರ ಮೇಲೆಯೂ ಭಯಾನಕವಾಗಿ ಹಲ್ಲೆ ಮಾಡಿ ಗುಂಡಿಕ್ಕಿದ್ದಾರೆ. ಹಾಜಿಪುರದ ಹೃದಯಭಾಗದಲ್ಲಿರುವ ನೀಲಂ ಜ್ಯುವೆಲ್ಲರಿಯಲ್ಲಿ ಈ ಅನಾಹುತ ನಡೆದಿದೆ.