Asianet Suvarna News Asianet Suvarna News

ಡ್ರಗ್ ಕೇಸ್‌ : ಕೈಮುಗಿದು ಕಣ್ಣೀರಿಟ್ಟ ಅನುಶ್ರೀ, ಕಾರಣ ಇಷ್ಟೇ..!

Oct 2, 2020, 1:53 PM IST

ಬೆಂಗಳೂರು (ಅ. 02): ಡ್ರಗ್ ಕೇಸ್‌ ಬಗ್ಗೆ ಮೊದಲ ಬಾರಿಗೆ ನಿರೂಪಕಿ ಅನುಶ್ರೀ ಮಾತನಾಡಿದ್ದಾರೆ. ಕೈ ಮುಗಿದು, ಕಣ್ಣೀರಿಟ್ಟಿದ್ದಾರೆ. 'ನಾನು ವಿಚಾರಣೆಗೆ ಹಾಜರಾಗಿದ್ದೇನೆ ಎಂದ ಮಾತ್ರಕ್ಕೆ ನಾನು ಅಪರಾಧಿಯಲ್ಲ. ಕನ್ನಡಿಗರು ನನ್ನ ಮೇಲೆ ಇಟ್ಟಿರುವ ಪ್ರೀತಿಗೆ, ನಂಬಿಕೆಗೆ ನಾನು ಎಂದಿಗೂ ಮೋಸ ಮಾಡುವುದಿಲ್ಲ. ನಾನು ತಪ್ಪು ಮಾಡಿಲ್ಲ, ಮುಂದೆ ಮಾಡೋದು ಇಲ್ಲ' ಎಂದಿದ್ಧಾರೆ. 

'ನಾನು ಅಪರಾಧಿಯಲ್ಲ, ತಪ್ಪು ಮಾಡಿಲ್ಲ, ಮುಂದಕ್ಕೆ ಮಾಡೋದೂ ಇಲ್ಲ: ಕಣ್ಣೀರಿಟ್ಟ ಅನುಶ್ರೀ

ಈ ಬಗ್ಗೆ ಸುವರ್ಣ ನ್ಯೂಸ್ ಜತೆ ಅನುಶ್ರೀ ಮಾತನಾಡಿ, 'ನಾನು ದಿನನಿತ್ಯ ಎಷ್ಟೋ ಜನರನ್ನು ಭೇಟಿ ಮಾಡುತ್ತಿರುತ್ತೇನೆ. ಸ್ಟೇಜ್ ಪರ್ಫಾಮೆನ್ಸ್ ಕೊಡುತ್ತೇನೆ. ಸೆಲ್ಫಿ ತೆಗೆದುಕೊಳ್ಳುತ್ತಿರುತ್ತಾರೆ. ಆದರೆ 12 ವರ್ಷದ ಹಿಂದಿನ ವಿಚಾರ ಈ ರೀತಿ ತಿರುವು ಪಡೆಯುತ್ತದೆ ಎಂದು ಭಾವಿಸಿರಲಿಲ್ಲ' ಎಂದು ಭಾವುಕರಾದರು. 

 

Video Top Stories