ಸಾಕ್ಷಿ ಮುಂದಿಟ್ರೂ ಆರೋಪಗಳನ್ನು ಒಪ್ಪದ ಅಜಿತ್ ರೈ: ದಾಳಿಗೂ ಮುನ್ನವೇ ಸಿಕ್ಕಿತ್ತಾ ಸೂಚನೆ ?
ಅಜಿತ್ ರೈ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆಯುವ ಮುಂಚೆಯೇ ಆತ ಅಲರ್ಟ್ ಆಗಿದ್ದ ಎಂದು ತಿಳಿದುಬಂದಿದೆ.
ಬೆಂಗಳೂರು: ಅಕ್ರಮ ಆಸ್ತಿಗಳಿಕೆ ಆರೋಪದಲ್ಲಿ ಲೋಕಾಯುಕ್ತ ಪೊಲೀಸರು ಕೆ.ಆರ್.ಪುರ ತಹಶೀಲ್ದಾರ್ ಅಜಿತ್ ರೈ ಮನೆ ಮೇಲೆ ದಾಳಿ ನಡೆಸಿದ್ದರು. ಆತನನ್ನು ಪೊಲೀಸರು ಬಂಧಿಸಿದ್ದು, ಬಾಯಿ ಬಿಡಿಸಲು ಹರಸಾಹಸ ಪಡುತ್ತಿದ್ದಾರೆ. ಸಾಕ್ಷಿಗಳನ್ನು ಮುಂದಿಟ್ಟು ಕೇಳಿದ್ರೂ ಆತ ಯಾವುದೇ ಆರೋಪವನ್ನು ಒಪ್ಪಿಕೊಳ್ಳುತ್ತಿಲ್ಲ ಎಂದು ತಿಳಿದುಬಂದಿದೆ. ಹಾಗಾಗಿ ಲೋಕಾಯುಕ್ತ ಪೊಲೀಸರು ಡಿಜಿಟಲ್ ಸಾಕ್ಷಿಗಳ ಮೊರೆ ಹೋಗಿದ್ದಾರೆ ಎಂದು ತಿಳಿದುಬಂದಿದೆ. ಲೋಕಾಯುಕ್ತ ಪೊಲೀಸರು ದಾಳಿ ಮಾಡುವ ವಿಷಯ ಅಜಿತ್ ರೈಗೆ ಮೊದಲೇ ತಿಳಿದಿದೆ ಎನ್ನಲಾಗ್ತಿದ್ದು, ಆತ ಹಣವನ್ನು ಬೇರೆಡೆ ಸಾಗಿಸಿರುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಆತನ ಬ್ಯಾಂಕ್ ಮಾಹಿತಿ ನೀಡುವಂತೆ ಬ್ಯಾಂಕ್‌ಗಳಿಗೆ ಪತ್ರವನ್ನು ಸಹ ಬರೆಯಲಾಗಿದೆ.
ಇದನ್ನೂ ವೀಕ್ಷಿಸಿ: ಕಾಂಗ್ರೆಸ್ ಸರ್ಕಾರ ಕಟ್ಟಿಹಾಕಲು ಬಿಜೆಪಿ ಕಸರತ್ತು: ಸದನದ ಹೊರಗೆ, ಒಳಗೆ ಕೇಸರಿ ಪಡೆ ಪ್ರತಿಭಟನೆ