Asianet Suvarna News Asianet Suvarna News

ಸೂತಕದ ಸಂಡೆ ಮಾಡಿದ ರಸ್ತೆ ಅಪಘಾತಗಳು..! ಬೆಳ್ಳಂಬೆಳಿಗ್ಗೆ ಅಮಾಯಕರ ಬಲಿ ಪಡೆದ ಜವರಾಯ..!

ಕಾರು- ಕಂಟೈನರ್ ನಡುವೆ ಡಿಕ್ಕಿ ಮುಂದೆ ಆಗಿದ್ದೇನು..? 
ಚಿಕ್ಕೋಡಿಯಲ್ಲೂ ಭಯಂಕರ ಬೈಕ್-ಲಾರಿ ಅಪಘಾತ..!
ಗಾಯಗೊಂಡ ಬೈಕ್ ಸವಾರರು ಪರಿಸ್ಥಿತಿ ಚಿಂತಾಜನಕ..!

ಲಾರಿ-ಕಾರು ಬೈಕ್ ನಡುವೆ ಅಪಘಾತ(Accident). ಕಾರು (Car) ಟ್ರಕ್ ನಡುವೆ ಅಪಘಾತ. ಬಸ್‌ಗೆ(Bus) ಡಿಕ್ಕಿ ಹೊಡೆದ ಬೈಕ್, ಬೆಳ್ಳಂಬೆಳಿಗ್ಗೆ ಒಂದಾದ ಮೇಲೆ ಒಂದು ಅಪಘಾತದ ಸುದ್ದಿ. ನಿಜಕ್ಕೂ ಎಂಥವರು ಕೂಡ ಬೆಚ್ಚಿಬೀಳುವ ಸುದ್ದಿ ಇದು. ಸಾಮಾನ್ಯವಾಗಿ ಒಂದೋ ಎರಡೋ ರಸ್ತೆ ಅಪಘಾತದ ಸುದ್ದಿ ಕೇಳಿ ಜನ ಶಾಕ್ ಆಗ್ತಾರೆ. ಆದರೆ ಈ ಸಂಡೆ ಬೆಳಗ್ಗೆಯಿಂದ ಒಂದಾದ ಮೇಲೆ ಒಂದು ರಸ್ತೆ ಅಪಘಾತದ ಸುದ್ದಿ ಬರ್ತಾನೆ ಇತ್ತು. ಅದು ಕೂಡ ಚಿಕ್ಕ ಪುಟ್ಟ ಅಪಘಾತದ ಸುದ್ದಿಗಳಲ್ಲ. ಒಂದಕ್ಕಿಂತ ಒಂದು ಭೀಕರ ಅಪಘಾತದ ಸುದ್ದಿ. ಇದನ್ನು ಕೇಳಿದವರೆಲ್ಲರೂ, ಇದು ಹ್ಯಾಪಿ ಸಂಡೇ(Sunday) ಅಲ್ಲ ಸೂತಕದ ಸಂಡೇ ಅಂತ ಹೇಳ್ಬಿಟ್ರು. ರಾಜ್ಯದ ಅನೇಕ ಕಡೆಗಳಲ್ಲಿ ರಸ್ತೆ ಅಪಘಾತಗಳು ಸಂಭವಿಸಿದೆ. ಹಾಸನದಲ್ಲಿ(Hassan) ರಸ್ತೆ ಅಪಘಾತ, ಚಿಕ್ಕೋಡಿಯಲ್ಲಿ ರಸ್ತೆ ಅಪಘಾತ. ಚಿಕ್ಕಮಗಳೂರಿನಲ್ಲಿ ರಸ್ತೆ ಅಪಘಾತ. ಹೀಗೆ ಇನ್ನೂ ಅನೇಕ ಕಡೆಗಳಲ್ಲಿ ರಸ್ತೆಗಳು ರಕ್ತ ಸಿಕ್ತ ಆಗ್ಹೋಗಿದೆ. ಅದಕ್ಕೆ ಕಾರಣ ಭೀಕರ ರೋಡ್ ಆ್ಯಕ್ಸಿಡೆಂಟ್. ಅದರಲ್ಲೂ ಹಾಸನದಲ್ಲಿ ನಡೆದಿರುವ ರಸ್ತೆ ಅಪಘಾತದ ದೃಶ್ಯ ನೋಡ್ತಿದ್ರೆ ಖುದ್ದು ಜವರಾಯನೂ ಕೂಡ ಸಣ್ಣಗೆ ನಡಗ್ಬಿಟ್ಟಿರ್ತಾನೋ ಏನೋ.ಅತ್ತ ಹಾಸನದಲ್ಲಿ ನಡೆದ ಭೀಕರ ರಸ್ತೆ ಅಪಘಾತಕ್ಕೆ ಕಪ್ಪು ರಸ್ತೆ ರಕ್ತ ಸಿಕ್ತ ಆಗ್ಹೋಗಿದ್ರೆ. ಇತ್ತ ಬೆಳಗಾವಿ ಜಿಲ್ಲೆ ಪಟ್ಟಣದ ಹೊರವಲಯದ ಮಾಹಲಿಂಗಪುರ-ನಿಪ್ಪಾಣಿ ರಾಜ್ಯ ಹೆದ್ದಾರಿಯಲ್ಲೂ ಭೀಕರ ಅಪಘಾತ ಸಂಭವಿಸಿದೆ.

ಇದನ್ನೂ ವೀಕ್ಷಿಸಿ:  ಕೇರಳದಲ್ಲಿ ಕಣಗಿಲೆ ಹೂ ಬ್ಯಾನ್..ಪೂಜೆಗೆ ಬಳಸುವಂತಿಲ್ಲ..! ಏನಿದು ವಿಷಕಾರಿ ಹೂವಿನ ಸಾವಿನ ಸೀಕ್ರೆಟ್..?

Video Top Stories