ಸ್ವಂತ ಬಾವನ ಕತ್ತು ಸೀಳಿದ ಕಿರಾತಕರು: ಅಕ್ಕನ ಕಣ್ಣೆದುರೇ ಕೊಲೆ ಮಾಡಿದ್ದೇಕೆ?

ಕಲಬುರ್ಗಿಯ ಟೆಂಟ್ ಹೌಸ್ ಮಾಲೀಕ ವಿಜಯದಶಮಿಯಂದು ಕೊಲೆಯಾಗಿದ್ದಾನೆ. ಬನ್ನಿ ಎಲೆ ಕೊಟ್ಟು ಬಂಗಾರದಂತೆ ಇರೋಣ ಎಂದು ಶುಭ ಕೋರಲು ಹೋದವ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾನೆ.

Share this Video
  • FB
  • Linkdin
  • Whatsapp

ಟೆಂಟ್ ಹೌಸ್ ಮಾಲೀಕ ಲಕ್ಷ್ಮಿಪುತ್ರ ಬರ್ಬರವಾಗಿ ಕೊಲೆಯಾಗಿದ್ದಾನೆ. ಕೊಲೆ ನಡೆಯುತ್ತಿರುವಾಗ ಆತನ ಎರಡನೇ ಹೆಂಡತಿ ಪ್ರೀತಿ ಸಹ ಆತನ ಜೊತೆಗೆ ಇದ್ದಳು. ಅಚ್ಚರಿ ಎಂದರೆ ಲಕ್ಷ್ಮಿ ಪುತ್ರನ ಎರಡನೆಯ ಹೆಂಡತಿ ಪ್ರೀತಿಯ ಸ್ವಂತ ತಮ್ಮಂದಿರೇ ಬಾವನ ಕಿತ್ತು ಸೀಳಿ ಬಿಟ್ಟಿದ್ದಾರೆ. ಕೇವಲ 7 ಲಕ್ಷ ರೂಪಾಯಿಗಾಗಿ ಬಾಮೈದುನರೇ, ಸ್ವಂತ ಅಕ್ಕನ ಗಂಡನ ಕಥೆಯನ್ನು ಮುಗಿಸಿಬಿಟ್ಟಿದ್ದಾರೆ. ಅಶೋಕ ನಗರ ಪೊಲೀಸರು ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

ಫುಡ್‌ ಡೆಲಿವರಿ ಸೋಗಿನಲ್ಲಿ ಡ್ರಗ್ಸ್ ಪೂರೈಕೆ; ಮಿಜೋರಾಂ ಮೂಲದ ವ್ಯಕ್ತಿ ಬಂಧನ

Related Video