Asianet Suvarna News Asianet Suvarna News

ರೇಣುಕಾಸ್ವಾಮಿ ಕೊಲೆ ಹೇಗಾಯ್ತು, ಯಾರಿದ್ರು, ಎಷ್ಟು ಜನ ಸೇರಿದ್ರು? ಯಾವ ಆಯುಧಗಳಿಂದ ಹಲ್ಲೆ ಮಾಡಲಾಯ್ತು?

ಎಲ್ಲರ ಹೇಳಿಕೆ ದಾಖಲಿಸಿ ರೆಕಾರ್ಡ್ ಮಾಡಿರೋ ಪೊಲೀಸರು
ಸಾಕ್ಷಿಗಳ ಹೇಳಿಕೆಯಿಂದ ದರ್ಶನ್ ಗ್ಯಾಂಗ್‌ಗೆ ದೊಡ್ಡ ಸಂಕಷ್ಟ 
ಪ್ರತ್ಯಕ್ಷವಾಗಿ ಹಾಜರಿದ್ದವರ ಹೇಳಿಕೆಯಿಂದ ಸಂಕಷ್ಟ ಸಾಧ್ಯತೆ

ರೇಣುಕಾಸ್ವಾಮಿ ಕೊಲೆ ಕೇಸ್‌ಗೆ(Renukaswamy Murder Case) ಸಂಬಂಧಿಸಿದಂತೆ ಎಕ್ಸ್‌​ಕ್ಲೂಸಿವ್​ ಸುದ್ದಿಯೊಂದು ದೊರೆತಿದ್ದು, ಈ ಪ್ರಕರಣದಲ್ಲಿ 27 ಜನರ ವಿಚಾರಣೆಯನ್ನು ಮಾಡಲಾಗಿದೆ. ಈ 27 ಮಂದಿಯಲ್ಲಿ 17 ಜನ ಬಂಧಿತ ಆರೋಪಿಗಳಾಗಿದ್ದಾರೆ. ನಟ ದರ್ಶನ್, ಪವಿತ್ರಗೌಡ ಸೇರಿ 17 ಮಂದಿ ಬಂಧಿತ ಆರೋಪಿಗಳಾಗಿದ್ದು, ಇನ್ನುಳಿದ 10 ಮಂದಿಯನ್ನ ಸಾಕ್ಷಿಗಳಾಗಿ ಪರಿಗಣನೆ ಮಾಡಲಾಗಿದೆ. ಸಾಕ್ಷಿಗಳು ಅಂತಾ ಈವರೆಗೆ 10 ಮಂದಿ ಹೇಳಿಕೆ ದಾಖಲು ಮಾಡಲಾಗಿದೆ. ಘಟನಾ ಸ್ಥಳದಲ್ಲಿ ಹಾಜರಿದ್ದ ಕೆಲವರ ವಿಚಾರಣೆ ನಡೆಸಲಾಗಿದ್ದು, ಬೇರೆಬೇರೆ ಕಡೆಗಳಲ್ಲಿ ಪ್ರತ್ಯಕ್ಷ ಪರೋಕ್ಷವಾಗಿ ಕಂಡು ಬಂದವರ ವಿಚಾರಣೆ ನಡೆಸಲಾಗಿದೆ. ಶೆಡ್ ಬಳಿ ಇದ್ದಂತಂಹ ಇನ್ನೂ ಕೆಲವರ ಹೇಳಿಕೆಯನ್ನು ಪೊಲೀಸರು ಪಡೆದಿದ್ದಾರೆ. ಘಟನೆ ಹೇಗಾಯ್ತು, ಯಾರು ಯಾರು ಇದ್ರು, ಎಷ್ಟು ಜನ ಸೇರಿದ್ರು..? ದರ್ಶನ್ ಎಷ್ಟೊತ್ತಿಗೆ ಬಂದಿದ್ದು, ದರ್ಶನ್(Darshan) ಹಲ್ಲೆ ಮಾಡಿದ್ರಾ..?, ಯಾವಯಾವ ಆಯುಧಗಳಿಂದ ಹಲ್ಲೆ ಮಾಡಿದ್ರು ..? ಹಲವು ವಿಚಾರಗಳ ಬಗ್ಗೆ ಹೇಳಿಕೆಗಳನ್ನು ಪೊಲೀಸರು ದಾಖಲಿಸಿದ್ದಾರೆ.

ಇದನ್ನೂ ವೀಕ್ಷಿಸಿ:  ರೇಣುಕಾಸ್ವಾಮಿ ಹತ್ಯೆ ಪ್ರಕರಣ: ದರ್ಶನ್ ಕರೆದೊಯ್ದು ಮೈಸೂರಿನಲ್ಲಿ ಪೊಲೀಸರಿಂದ ಸ್ಥಳ ಮಹಜರು

Video Top Stories