Asianet Suvarna News Asianet Suvarna News
breaking news image

ರೇಣುಕಾಸ್ವಾಮಿ ಹತ್ಯೆ ಪ್ರಕರಣ: ದರ್ಶನ್ ಕರೆದೊಯ್ದು ಮೈಸೂರಿನಲ್ಲಿ ಪೊಲೀಸರಿಂದ ಸ್ಥಳ ಮಹಜರು

ನಟ ದರ್ಶನ್‌ ಫಾರ್ಮ್‌ಹೌಸ್, ಹೋಟೆಲ್‌ನಲ್ಲಿ ಇಂದು ಪೊಲೀಸರು ಸ್ಥಳ ಮಹಜರು ನಡೆಸಲಿದ್ದಾರೆ.
 

ದರ್ಶನ್ ಗ್ಯಾಂಗ್‌ನಿಂದ ರೇಣುಕಾಸ್ವಾಮಿ ಭೀಕರ ಹತ್ಯೆ ಪ್ರಕರಣಕ್ಕೆ( Renukaswamy murder case) ಸಂಬಂಧಿಸಿದಂತೆ ಇಂದು ದರ್ಶನ್(Darshan) ಕರೆದೊಯ್ದು ಮೈಸೂರಿನಲ್ಲಿ ಮಹಜರು(Spot inspection) ನಡೆಸಲಾಗುತ್ತದೆ. ರೇಣುಕಾಸ್ವಾಮಿ ಮರ್ಡರ್ ಬಳಿಕ ನಟ ದರ್ಶನ್ ಮೈಸೂರಿಗೆ ತೆರಳಿದ್ದರು. ಹಾಗಾಗಿ ದರ್ಶನ್ ಸೇರಿ ಉಳಿದ ಆರೋಪಿಗಳನ್ನು ಕರೆದೊಯ್ದು ತಲಾಶ್ ನಡೆಸಲಾಗುತ್ತದೆ. ಪಟ್ಟಣಗೆರೆ ಶೆಡ್‌ನಲ್ಲಿ ಮರ್ಡರ್ ಮಾಡಿ, ಸುಮನಹಳ್ಳಿ ಬಳಿ ಹೆಣ ಎಸೆಯಲಾಗಿತ್ತು. ನಂತ್ರ ಮೈಸೂರಿನ ಖಾಸಗಿ ಹೋಟೆಲ್‌ನಲ್ಲಿ ದರ್ಶನ್‌ ಇದ್ದರು. ಖಾಸಗಿ ಹೋಟೆಲ್‌ನಲ್ಲಿ ಜಿಮ್‌ ಮಾಡಿವಾಗ್ಲೇ ದರ್ಶನ್ ಅರೆಸ್ಟ್ ಮಾಡಲಾಗಿತ್ತು. ರೇಣುಕಾಸ್ವಾಮಿ ಕೊಲೆ ಬಳಿಕ ಫಾರ್ಮ್‌ಹೌಸ್‌ಗೆ ನಟ ತೆರಳಿದ್ದರು. ಕಿಲ್ಲಿಂಗ್ ಸ್ಟಾರ್ ಫಾರ್ಮ್‌ಹೌಸ್, ಹೋಟೆಲ್‌ನಲ್ಲಿ ಸ್ಥಳ ಮಹಜರ್ ನಡೆಸಲಾಗುತ್ತದೆ. ದರ್ಶನ್ ಇದ್ದ ಹೋಟೆಲ್ ರೂಂ ಸೀಜ್ ಮಾಡಿರುವ ಪೊಲೀಸರು. ಎರಡು ಕಡೆ ಸ್ಥಳ ಮಹಜರು ನಡೆಸಲಿದ್ದಾರೆ.

ಇದನ್ನೂ ವೀಕ್ಷಿಸಿ:  ಸಿ.ಪಿ.ಯೋಗೇಶ್ವರ್, ನಿಖಿಲ್..ಯಾರಿಗೆ ಚನ್ನಪಟ್ಟಣ ಟಿಕೆಟ್​ ? ಈ ಕ್ಷೇತ್ರ ಬಿಜೆಪಿಗೋ? ಜೆಡಿಎಸ್‌​ಗೋ ?

Video Top Stories