Asianet Suvarna News Asianet Suvarna News

ಪ್ರೀತ್ಸೆ ಪ್ರೀತ್ಸೆ ಎಂದು ಹಿಂದೆ ಬಿದ್ದ ಪಾಗಲ್ ಪ್ರೇಮಿ, ಯುವತಿಯ ಪ್ರಾಣ ತೆಗೆಯಲು ಮುಂದಾದ..!

ಪ್ರೀತಿ (Proposal) ನಿರಾಕರಿಸಿದಳು ಎಂಬ ಕಾರಣಕ್ಕೆ ಕೋಪಗೊಂಡು ಪಾಗಲ್ ಪ್ರೇಮಿಯೊಬ್ಬ 25 ವರ್ಷದ ಯುವತಿ ಮೇಲೆ ಆ್ಯಸಿಡ್‌ (Acid Attack) ಎರಚಿದ್ದಾನೆ.  ಖಾಸಗಿ ಕಂಪನಿ ಉದ್ಯೋಗಿಯಾಗಿರುವ ಬೆಂಗಳೂರಿನ (Bengluru)ಹೆಗ್ಗನಹಳ್ಳಿ ನಿವಾಸಿ ಯುವತಿ ದಾಳಿಗೊಳಗಾಗಿದ್ದು, ಶೇ.40 ರಷ್ಟು ಸುಟ್ಟ ಗಾಯಗಳಾಗಿವೆ. 

ಬೆಂಗಳೂರು (ಏ. 29): ಪ್ರೀತಿ (Proposal) ನಿರಾಕರಿಸಿದಳು ಎಂಬ ಕಾರಣಕ್ಕೆ ಕೋಪಗೊಂಡು ಪಾಗಲ್ ಪ್ರೇಮಿಯೊಬ್ಬ 25 ವರ್ಷದ ಯುವತಿ ಮೇಲೆ ಆ್ಯಸಿಡ್‌ (Acid Attack) ಎರಚಿದ್ದಾನೆ.  ಖಾಸಗಿ ಕಂಪನಿ ಉದ್ಯೋಗಿಯಾಗಿರುವ ಬೆಂಗಳೂರಿನ (Bengluru)ಹೆಗ್ಗನಹಳ್ಳಿ ನಿವಾಸಿ ಯುವತಿ ದಾಳಿಗೊಳಗಾಗಿದ್ದು, ಶೇ.40 ರಷ್ಟು ಸುಟ್ಟ ಗಾಯಗಳಾಗಿವೆ.

ಆಸ್ಪತ್ರೆಯಲ್ಲಿ ಸಂತ್ರಸ್ತೆ ಜೀವನ್ಮರಣ ಹೋರಾಟ ನಡೆಸುತ್ತಿದ್ದಾಳೆ. ಕೃತ್ಯ ಎಸಗಿ ಪರಾರಿಯಾಗಿರುವ ಅನ್ನಪೂರ್ಣೇಶ್ವರಿ ನಗರದ ಡಿ ಗ್ರೂಪ್‌ ಲೇಔಟ್‌ನ ನಿವಾಸಿ ಆರೋಪಿ ನಾಗೇಶ್‌ ಪತ್ತೆಗೆ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಬಲೆ ಬೀಸಿದ್ದಾರೆ. 

ಸೈಕೋಪ್ರೇಮಿಯ ಆ್ಯಸಿಡ್‌ ದಾಳಿಗೆ ಬೆಚ್ಚಿಬಿದ್ದ ಬೆಂಗಳೂರು; ಆ್ಯಸಿಡ್‌ ದಾಳಿಗೆ ಕೊನೆ ಯಾವಾಗ?

ಹೆಗ್ಗನಹಳ್ಳಿಯ ಯುವತಿ ಎ.ಕಾಂ. ವ್ಯಾಸಂಗ ಮಾಡಿದ್ದು, ಸುಂಕದಕಟ್ಟೆಬಸ್‌ ನಿಲ್ದಾಣದಲ್ಲಿರುವ ಫೈನಾನ್ಸ್‌ ಕಂಪನಿಯಲ್ಲಿ (Finance Company) ಉದ್ಯೋಗದಲ್ಲಿದ್ದಳು. ಆನೇಕಲ್‌ ತಾಲೂಕಿನ ಸರ್ಜಾಪುರದ ನಾಗೇಶ್‌, ಕಾಮಾಕ್ಷಿಪಾಳ್ಯ ಸಮೀಪ ಸ್ವಂತ ಗಾರ್ಮೆಂಟ್ಸ್‌ ಘಟಕ ನಡೆಸುತ್ತಿದ್ದ. ಅನ್ನಪೂರ್ಣೇಶ್ವರಿ ನಗರದ ‘ಡಿ’ ಗ್ರೂಪ್‌ ಲೇಔಟ್‌ನಲ್ಲಿ ಆತ ನೆಲೆಸಿದ್ದ. ಏಳು ವರ್ಷಗಳ ಹಿಂದೆ ಸಂತ್ರಸ್ತೆಯ ದೊಡ್ಡಪ್ಪನ ಮನೆಯಲ್ಲಿ ಆರೋಪಿ ಬಾಡಿಗೆಗೆ ಇದ್ದ. ಆ ವೇಳೆ ಆತನಿಗೆ ಯುವತಿಯ ಪರಿಚಯವಾಗಿದೆ. ಅಂದಿನಿಂದಲೂ ತನ್ನನ್ನು ಪ್ರೀತಿಸುವಂತೆ ಸಂತ್ರಸ್ತೆಗೆ ಆತ ಕಾಟ ಕೊಡುತ್ತಿದ್ದ. ಈ ಪ್ರೇಮ ನಿವೇದನೆಯನ್ನು ಆಕೆ ನಿರಾಕರಿಸಿದ್ದಳು. ಹೀಗಿದ್ದರೂ ಬಿಡದೆ ಆಕೆಗೆ ಆರೋಪಿ ಕಾಡುತ್ತಿದ್. ಈ ಕಿರುಕುಳ ಸಹಿಸಲಾರದೆ ತನ್ನ ದೊಡ್ಡಪ್ಪನ ಮುಂದೆ ಸಂತ್ರಸ್ತೆ ಅಳಲು ತೋಡಿಕೊಂಡಿದ್ದಳು. ಇದರಿಂದ ಕೆರಳಿದ ಸಂತ್ರಸ್ತೆ ಕುಟುಂಬದವರು, ಆರೋಪಿಗೆ ಬೈದು ಮನೆ ಖಾಲಿ ಮಾಡಿಸಿದ್ದರು. ಇತ್ತೀಚಿಗೆ ಮತ್ತೆ ಕಾಣಿಸಿಕೊಂಡು ಕಿರುಕುಳ ಕೊಡಲು ಶುರು ಮಾಡಿದ್ದ. ನಂತರ ಏನಾಯ್ತು..? ನೋಡಿ FIR ನಲ್ಲಿ.