ಸೈಕೋಪ್ರೇಮಿಯ ಆ್ಯಸಿಡ್‌ ದಾಳಿಗೆ ಬೆಚ್ಚಿಬಿದ್ದ ಬೆಂಗಳೂರು; ಆ್ಯಸಿಡ್‌ ದಾಳಿಗೆ ಕೊನೆ ಯಾವಾಗ?

ಪ್ರೀತಿ ನಿರಾಕರಿಸಿದ ಕಾರಣಕ್ಕೆ ಕೋಪಗೊಂಡು 25 ವರ್ಷದ ಯುವತಿ ಮೇಲೆ ಆ್ಯಸಿಡ್‌ ಎರಚಿ ( Acid Attack)ಕಿಡಿಗೇಡಿಯೊಬ್ಬ ಕೊಲೆಗೆ ಯತ್ನಿಸಿರುವ ಅಮಾನುಷ ಘಟನೆ ರಾಜಧಾನಿಯಲ್ಲಿ ನಡೆದಿದೆ.

Share this Video
  • FB
  • Linkdin
  • Whatsapp

ಬೆಂಗಳೂರು (ಏ. 29): ಪ್ರೀತಿ ನಿರಾಕರಿಸಿದ ಕಾರಣಕ್ಕೆ ಕೋಪಗೊಂಡು 25 ವರ್ಷದ ಯುವತಿ ಮೇಲೆ ಆ್ಯಸಿಡ್‌ ಎರಚಿ ( Acid Attack)ಕಿಡಿಗೇಡಿಯೊಬ್ಬ ಕೊಲೆಗೆ ಯತ್ನಿಸಿರುವ ಅಮಾನುಷ ಘಟನೆ ರಾಜಧಾನಿಯಲ್ಲಿ ನಡೆದಿದೆ.

ಖಾಸಗಿ ಕಂಪನಿ ಉದ್ಯೋಗಿ, ಬೆಂಗಳೂರಿನ ಹೆಗ್ಗನಹಳ್ಳಿ ನಿವಾಸಿ ಯುವತಿ ದಾಳಿಗೊಳಗಾಗಿದ್ದು, ಶೇ.40ರಷ್ಟು ಸುಟ್ಟಗಾಯಗಳಾಗಿವೆ. ಹೊಸೂರು ರಸ್ತೆಯ ಸೇಂಟ್‌ ಜಾನ್ಸ್‌ ಆಸ್ಪತ್ರೆಯಲ್ಲಿ ಸಂತ್ರಸ್ತೆ ಜೀವನ್ಮರಣ ಹೋರಾಟ ನಡೆಸುತ್ತಿದ್ದಾಳೆ. ಕೃತ್ಯ ಎಸಗಿ ಪರಾರಿಯಾಗಿರುವ ಅನ್ನಪೂರ್ಣೇಶ್ವರಿ ನಗರದ ಡಿ ಗ್ರೂಪ್‌ ಲೇಔಟ್‌ನ ನಿವಾಸಿ ಆರೋಪಿ ನಾಗೇಶ್‌ ಪತ್ತೆಗೆ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಬಲೆ ಬೀಸಿದ್ದಾರೆ. ಇಂತಹ ದಾಳಿಗೆ ಕೊನೆಯೆಂದು..? ಹೆಣ್ಣು ಮಕ್ಕಳಿಗೆ ರಕ್ಷಣೆಯೇ ಇಲ್ವಾ..? ಈ ಬಗ್ಗೆ ಒಂದು ಚರ್ಚೆ 

Related Video