ಒಂದೇ ವಾರದಲ್ಲಿ 10 ಭಯಾನಕ ಅಪರಾಧ, ಉತ್ತರದಿಂದ ದಕ್ಷಿಣವರೆಗೂ ದರೋಡೆ: ಕರ್ನಾಟಕದಲ್ಲಿ ಏನಾಗ್ತಿದೆ?

ರಾಜ್ಯದಲ್ಲಿ ಕ್ರೈಂ ಸಂಖ್ಯೆ ಹೆಚ್ಚಾಗುತ್ತಿದೆ. ಕಳೆದ ಐದು ದಿನಗಳಲ್ಲಿ ರಾಜ್ಯಾದ್ಯಂತ ಭಯಾನಕ ಹತ್ತು ಕ್ರೈಂಗಳು ನಡೆದಿವೆ. ಬೀದರ್​​​​ನಲ್ಲಿ ಹಾಡುಹಗಲೇ ಎಟಿಎಂ ದರೋಡೆ. ಮಂಗಳೂರಿನಲ್ಲಿ ಬ್ಯಾಂಕ್​ ದರೋಡೆ. ಹುಬ್ಬಳ್ಳಿಯಲ್ಲಿ ಕೆನರಾ ಬ್ಯಾಂಕ್​​ ದರೋಡೆ ಯತ್ನ. ಮೈಸೂರಿನಲ್ಲಿ ಕಾರು ಅಡ್ಡಗಟ್ಟಿ ದರೋಡೆ. ಹೀಗೆ ಕೇವಲ ಒಂದುವಾರದಲ್ಲಿ ಹತ್ತು ಭಯಾನಕ ಕ್ರೈಂಗಳು ನಡೆದಿವೆ. 

Share this Video
  • FB
  • Linkdin
  • Whatsapp

ಬೆಂಗಳೂರು(ಜ.22):  ಬೀದರ್​​.. ಮೈಸೂರು.. ಮಂಗಳೂರು.. ಹುಬ್ಬಳ್ಳಿ.. ಎಲ್ಲೆಲ್ಲೂ ರಾಬರಿ..! ಉತ್ತರದಿಂದ ದಕ್ಷಿಣವರೆಗೆ.. ಅಲ್ಲೂ ದರೋಡೆ.. ಇಲ್ಲೂ ದರೋಡೆ..! ಅತ್ಯಾಚಾರ.. ಸುಲಿಗೆ.. ಹಲ್ಲೆ.. ಕಳ್ಳತನ.. ಖತರ್ನಾಕ್ ಕ್ರೈಂ..! ಒಂದೇ ವಾರದಲ್ಲಿ 10 ಅಪರಾಧ.. ರಾಜ್ಯದಲ್ಲಿ ಏನಾಗ್ತಿದೆ..? ಇದೆಲ್ಲವನ್ನು ನೋಡೋದೇ ಈ ಕ್ಷಣದ ವಿಶೇಷ ಕರ್ನಾಟಕ ಕ್ರೈಂ ಸ್ಟೋರಿ. 

ರಾಜ್ಯದಲ್ಲಿ ಕ್ರೈಂ ಸಂಖ್ಯೆ ಹೆಚ್ಚಾಗುತ್ತಿದೆ. ಕಳೆದ ಐದು ದಿನಗಳಲ್ಲಿ ರಾಜ್ಯಾದ್ಯಂತ ಭಯಾನಕ ಹತ್ತು ಕ್ರೈಂಗಳು ನಡೆದಿವೆ. ಬೀದರ್​​​​ನಲ್ಲಿ ಹಾಡುಹಗಲೇ ಎಟಿಎಂ ದರೋಡೆ. ಮಂಗಳೂರಿನಲ್ಲಿ ಬ್ಯಾಂಕ್​ ದರೋಡೆ. ಹುಬ್ಬಳ್ಳಿಯಲ್ಲಿ ಕೆನರಾ ಬ್ಯಾಂಕ್​​ ದರೋಡೆ ಯತ್ನ. ಮೈಸೂರಿನಲ್ಲಿ ಕಾರು ಅಡ್ಡಗಟ್ಟಿ ದರೋಡೆ. ಹೀಗೆ ಕೇವಲ ಒಂದುವಾರದಲ್ಲಿ ಹತ್ತು ಭಯಾನಕ ಕ್ರೈಂಗಳು ನಡೆದಿವೆ. ಏನಾಗ್ತಿದೆ ರಾಜ್ಯದಲ್ಲಿ? ರಾಜ್ಯ ಪೊಲೀಸ್​ ಇಲಾಖೆ ಏನ್ಮಾಡ್ತಿದೆ? ರಾಜ್ಯದಲ್ಲಿ ಕ್ರೈಂ ಸಂಖ್ಯೆ ಹೆಚ್ಚಾಗುತ್ತಿರೋದಕ್ಕೆ ಕಾರವೇನು? ಈ ಎಲ್ಲದರ ಕುರಿತು ಈ ವಿಶೇಷ ಕಾರ್ಯಕ್ರಮದಲ್ಲಿ ನೋಡೋಣ. 

ಕೋಟೆಕಾರ್ ಬ್ಯಾಂಕ್ ದರೋಡೆಗೆ ಸುಪಾರಿ ಸಂಚು: ಮುಂಬೈ ಗ್ಯಾಂಗ್​ ಜತೆ ಲೋಕಲ್​​ ಗ್ಯಾಂಗ್​​ ಡೀಲ್​​?

ಕಳೆದ ಒಂದು ವಾರದಲ್ಲಿ ರಾಜ್ಯದಲ್ಲಿ ನಡೆದಿರುವ ಭಯಾನಕ ಕ್ರೈಂಗಳಲ್ಲಿ ವಿಜಯಪುರದಲ್ಲಿ ನಡೆದ ದರೋಡೆ, ಬೀದರ್​​​ನಲ್ಲಿ ನಡೆದ ದರೋಡೆ ಮತ್ತು ಮಂಗಳೂರಿನಲ್ಲಿ ನಡೆದ ಸಹಕಾರಿ ಬ್ಯಾಂಕ್​ ದರೋಡೆ ಕುರಿತು ನೋಡಿದ್ದಾಯ್ತು. ಕಳೆದ ಒಂದೇ ವಾರದಲ್ಲಿ ಇದಕ್ಕಿಂತ ಭಯಾನಕವಾಗಿ ಇನ್ನೂ ಕೆಲ ದರೋಡೆಗಳು ನಡೆದಿವೆ. 

ಮೊನ್ನೆ ಮೈಸೂರಿನಲ್ಲಿ ನಡು ಹಾಡುಹಗಲೇ ನಡುರಸ್ತೆಯಲ್ಲಿ ಭಯಾನಕ ದರೋಡೆ ನಡೆದಿದೆ. ನಡೆದ ಈ ದರೋಡೆ ಕುರಿತಾಗಿ ಒಂದಿಷ್ಟು ಅಪ್​ಡೇಟ್​ ಸಿಕ್ಕಿದೆ. ಈ ಅಪ್​ಡೇಟ್​​​ನೊಂದಿಗೆ ಒಂದೇ ವಾರದಲ್ಲಿ ನಡೆದ ಮತ್ತೊಂದಿಷ್ಟು ಭಯಾನಕ ಕ್ರೈಂ ಸ್ಟೋರಿಗಳ ಕುರಿತು ಇಲ್ಲಿ ನೋಡೋಣ. 

ಬಾಣಂತನಕ್ಕೆ ಹೋದ ಆಂಟಿ ಬಾಯ್ ಫ್ರೆಂಡ್ ಜೊತೆ ಪರಾರಿ, ಇದು ಖತರ್ನಾಕ್​ ಆಂಟಿಯ ಕಥೆ!

ನೋಡಿದ್ರಿ ಅಲ್ವಾ, ಕಳೆದ ಜನವರಿ 15 ರಿಂದ ನಿನ್ನೆಯವರೆಗೂ ರಾಜ್ಯದಲ್ಲಿ ಒಟ್ಟು ನಾಲ್ಕು ದರೋಡೆ ಮತ್ತು ಒಂದು ದರೋಡೆ ಪ್ರಯತ್ನ ನಡೆದಿದೆ. ಇದೆಲ್ಲವನ್ನು ನೋಡುತ್ತಿದ್ದರೆ ಕರ್ನಾಟಕ ರಾಜ್ಯ ದರೋಡೆ ರಾಜ್ಯವಾಯ್ತಾ ಅನ್ನೋ ಅನುಮಾನ ಹುಟ್ಟುತ್ತಿದೆ. 

ಒಂದೇ ವಾರದಲ್ಲಿ ರಾಜ್ಯದ ಯಾವೆಲ್ಲ ಜಿಲ್ಲೆಗಳಲ್ಲಿ ಹೇಗೇಗೆಲ್ಲ ದರೋಡೆಗಳು ನಡೆದಿವೆ ಅನ್ನೋದನ್ನು ನೋಡಿದ್ದಾಯ್ತು. ಈಗ ದರೋಡೆ ಹೊರತಾಗಿ ರಾಜ್ಯದಲ್ಲಿ ನಡೆದಿರುವ ಬೇರೆ ಕ್ರೈಂಗಳ ಕುರಿತು ನೋಡೋಣ. 
ಯೆಸ್​​​, ರಾಜ್ಯ ಸರ್ಕಾರ ಮತ್ತು ಪೊಲೀಸ್​ ಇಲಾಖೆ ಇನ್ನಾದರು ಎಚ್ಚೆತ್ತುಕೊಳ್ಳಬೇಕು. ಇಲ್ಲದಿದ್ರೆ ಮುಂದಿನ ದಿನಗಳಲ್ಲಿ 100, 200 ರೂಪಾಯಿಗೂ ರಾಜ್ಯದಲ್ಲಿ ಕೊಲೆಗಳು ನಡೆಯುವ ಸಂದರ್ಭ ಬಂದರೂ ಅಚ್ಚರಿಯಿಲ್ಲ. 

Related Video